ಹೊಸ ರಸ್ತೆಗೆ ಟ್ರ್ಯಾಕ್ಟರ್ ವೀಲ್ ಹಾಕದಂತೆ ರೈತರಲ್ಲಿ ಮನವಿ ಮಾಡಿದ ಜೆ.ಎನ್.ಗಣೇಶ್
J.N. Ganesh appealed to farmers not to drive tractor wheels on the new road.
ಲೋಕದರ್ಶನ ವರದಿ
ಹೊಸ ರಸ್ತೆಗೆ ಟ್ರ್ಯಾಕ್ಟರ್ ವೀಲ್ ಹಾಕದಂತೆ ರೈತರಲ್ಲಿ ಮನವಿ ಮಾಡಿದ ಜೆ.ಎನ್.ಗಣೇಶ್
ಕಂಪ್ಲಿ 13: ಹಲವು ವರ್ಷಗಳಿಂದ ಅಭಿವೃದ್ಧಿಯಾಗದ ಕ್ಷೇತ್ರದ ಬಹುತೇಕ ರಸ್ತೆಗಳನ್ನು ಕೋಟ್ಯಾಂತರ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ರೈತರು ರಸ್ತೆಗೆ ಟ್ರ್ಯಾಕ್ಟರ್ ವೀಲ್ ಹಾಕುವ ಮೂಲಕ ರಸ್ತೆ ಹಾಳು ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ತಾಲೂಕಿನ ಹೊಸ ನೆಲ್ಲುಡಿ ಗ್ರಾಮದಲ್ಲಿ 2025-26ನೇ ಸಾಲಿನ 4025 ಸಿಎಂಡಿಕ್ಯೂ ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಯಡಿ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈಗಾಗಲೇ ಅಭಿವೃದ್ಧಿಗೊಂಡ ರಸ್ತೆಗಳ ಮೇಲೆ ರೈತರೇ ವೀಲ್ ಹಾಕಿದರೆ, ರಸ್ತೆ ಉಳಿಯುವುದಾದರೂ ಹೇಗೆ ಸ್ವಾಮಿ. ಕಷ್ಟಪಟ್ಟು ಅನುದಾನ ತಂದು ರಸ್ತೆ ಅಭಿವೃದ್ಧಿಪಡಿಸಿರುವೆ. ಈ ರಸ್ತೆಗಳನ್ನು ಉಳಿಸಿಕೊಳ್ಳುವುದು ಬಿಡುವುದು ರೈತರಿಗೆ ಬಿಟ್ಟಿದ್ದು, ಎಷ್ಟು ಬಾರಿ ಹೇಳಿದರೂ ಸಹ ರೈತರು ಪದೇ ಪದೇ ವೀಲ್ ಹಾಕುವುದನ್ನೇ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸುವ ಜೊತೆಗೆ ದಯವಿಟ್ಟು ರಸ್ತೆಗೆ ವ್ಹೀಲ್ ಹಾಕುವುದನ್ನು ಬಿಡಬೇಕೆಂದು ರೈತರಲ್ಲಿ ಮನವಿ ಮಾಡಿದರು. ನಂತರ ಹಂಪಾದೇವನಹಳ್ಳಿ, ಮೆಟ್ರಿಯಲ್ಲಿ ಮಾನ್ಯಮುಖ್ಯಮಂತ್ರಿಗಳ ವಿಶೇಷ ಅನುದಾನದ ಸುಮಾರು ತಲಾ 16 ಲಕ್ಷ ವೆಚ್ಚದಲ್ಲಿ ಸಾಮೂಹಿಕ ಶೌಚಾಗೃಹ ಕಾಮಗಾರಿ, ಮತ್ತು ದೇವಸಮುದ್ರದಲ್ಲಿ ಕೆಕೆಆರ್ಡಿಬಿ 2515 ಯೋಜನೆಯಡಿ ಸುಮಾರು 30 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಹಿರೇಜಾಯಿಗನೂರು ಗ್ರಾಮದಲ್ಲಿ ಸಿಎಂಡಿಕ್ಯೂ ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಯಡಿ ಸುಮಾರು 20 ಲಕ್ಷ ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಶಾಸಕ ಗಣೇಶ ಭೂಮಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ತಾಪಂ ಇಒ ಆರ್.ಕೆ.ಶ್ರೀಕುಮಾರ, ಹಂಪಾದೇವನಹಳ್ಳಿ ಪಿಡಿಒ ಬೀರಲಿಂಗ, ಮುಖಂಡರಾದ ಹುಲುಗಪ್ಪ, ಗುರಮೂರ್ತಿ, ಪಂಪನಗೌಡ, ಗಿರಿಯಪ್ಪ, ಲಿಂಗನಗೌಡ, ಮಲ್ಲಯ್ಯ, ವಿರೇಶ, ಮೆಟ್ರಿ ಗ್ರಾಮದ ಮುಖಂಡರಾದ ಹೊನ್ನಳ್ಳಿ ಗಂಗಾಧರಗೌಡ, ನೆಣಕಿ ಗೀರೀಶ, ಹೆಚ್.ಜಗದೀಶ, ಶಿವಪುತ್ರ್ಪ, ದೊಡ್ಡ ಯರ್ರಿಸ್ವಾಮಿ, ಹೆಚ್.ಕುಮಾರ, ದೇವಸಮುದ್ರದ ಕೆ.ಷಣ್ಮುಕಪ್ಪ, ವೆಂಕೋಬ ನಾಯಕ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 