ಮಕ್ಕಳ ಕನಸುಗಳಿಗೆ ಬೆಳಕು ನೀಡುವ ಕಾರ್ಯ ವಾಗಬೇಕು: ಪಟೇಲ್

ಮಕ್ಕಳ ಕನಸುಗಳಿಗೆ ಬೆಳಕು ನೀಡುವ ಕಾರ್ಯ ವಾಗಬೇಕು: ಪಟೇಲ್ It should be a task to give light to children's dreams: Patel

ಮಕ್ಕಳ ಕನಸುಗಳಿಗೆ ಬೆಳಕು ನೀಡುವ ಕಾರ್ಯ ವಾಗಬೇಕು: ಪಟೇಲ್ 

ಕೊಪ್ಪಳ 11: ಮಕ್ಕಳ ಸೃಜನಶೀಲತೆ ಕಲ್ಪನಾ ಶಕ್ತಿ ಹೆಚ್ಚಿಸುವಲ್ಲಿ ಇಂತಹ ಸಂತೆ ಮೇಳ ಜ್ಞಾನ ವಸ್ತು ಪ್ರದರ್ಶನ ಇತ್ಯಾದಿ ಕಾರ್ಯಕ್ರಮ ಅತ್ಯಂತ ಸಹಕಾರಿ ಯಾಗಿದೆ, ಮಕ್ಕಳ ಕನಸುಗಳಿಗೆ ಬೆಳಕು ನೀಡುವ ಕಾರ್ಯ ವಾಗಬೇಕು ಅಂದಾಗ ಮಾತ್ರ ನಾವು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು,ಅವರು ನಗರದ ಮಿಲ್ಲತ್ ಪಬ್ಲಿಕ್ ಶಾಲೆ ಆವರಣದಲ್ಲಿ  ಶಾಲಾ ಮಕ್ಕಳಿಂದ ಏರಿ​‍್ಡಸಿದ ಸಂತೆಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ದಲ್ಲಿ ಪಾಲ್ಗೊಂಡು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ  ಮಾತನಾಡಿದರು,ಮುಂದುವರೆದು ಮಾತನಾಡಿ ಮಕ್ಕಳ ಭವಿಷ್ಯ ಉಜ್ವಲ ಗೊಳಿಸುವ ಜವಾಬ್ದಾರಿ ಶಿಕ್ಷಕರಷ್ಟೇ ಅಲ್ಲ ಪಾಲಕರ ಮೇಲೆ ಕೂಡ ಇದೆ ಪಾಲಕರು ಮತ್ತು ಶಿಕ್ಷಕರು ಸೇರಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು,ಮುಂದುವರೆದು ಮಾತನಾಡಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಈ ನೂತನ ಮಾದರಿಯ ಸಂತೆ ಮೇಳ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು  ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ರವರು ಹೇಳಿದರು, ಸಮಾರಂಭದ ಅಧ್ಯಕ್ಷತೆಯನ್ನು ಮಿಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ  ಸೈಯದ್ ಗೌಸ್ ಪಾಷಾ ಖಾಜಿ ವಹಿಸಿದ್ದರು, ಸಮಾರಂಭದಲ್ಲಿ ಯುವ ವಾಣಿಜ್ಯ ಉದ್ಯಮಿ ಗಿಣಿಗೇರಿಯ ಯುವ ನಾಯಕ ಸಮಾಜ ಸೇವಕ ಹನುಮೇಶ್ ಬಾರಕೇರ್ , ಲ್ಯಾಂಡ್ ಡೆವಲೋಪರ್ ಶಫೀಕ್ ಅಹಮದ್ ದಾಗ ದಾರ್, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ, ಪಾಲಕರ ಪ್ರತಿನಿಧಿ  ಫತಹೇ ಸಾಬ್ ಚುಟ್ಟದ್ ಯುವ ನಾಯಕ ಸಿರಾಜ್ ಲಾಠಿ ಮತ್ತು ಶಾಲೆಯ ಸಂಚಾಲಕರುಗಳಾದ ಅಬ್ದುಲ್ ಅಜೀಜ್ ಮಾನ್ವಿ ಕರ್ ಹಾಗೂ ಸೈಯದ್ ಇಮಾಮ ಹುಸೇನ್ ಸಿಂದೋಗಿ, ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರವಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.