ಮಹಿಳೆಯರನ್ನು ಗೌರವಾಧಾರದಿಂದ ಕಾಣುವುದು ಎಲ್ಲರ ಕರ್ತವ್ಯ- ವಿನೂತಾ
It is everyone's duty to treat women with respect - Vinuta
ರಾಣೇಬೆನ್ನೂರು 21: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಅಪಾರವಾದುದು. ಅಂತಹ ಮಹಿಳೆಯರಿಗೆ ಇಂದಿನ ದಿನಮಾನಗಳಲ್ಲಿ ಗೌರವಾಧಾರದಿಂದ ಕಾಣುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಸುರಭಿ ಸೇವಾ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ವಿನೂತಾ ರಾಜು ರೇವಣಕರ ಹೇಳಿದರು. ಸ್ಥಳೀಯ ರೇಣುಕಾ ಎಲ್ಲಮ್ಮ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್‌ನ ದ್ವಿತೀಯ ವರ್ಷದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ತಾಯಿ ಸ್ವರೂಪಿಣಿ, ಮಡದಿ, ಗೃಹಣಿಯಾಗಿ ಮಕ್ಕಳ ಪಾಲನೆ ಪೋಷಣೆ ಮಾಡಿ ಸಮಾಜದಲ್ಲಿ ಸತ್ಪ್ರಜೆಯಾಗಲು ಜವಾಬ್ಧಾರಿಯಿಂದ ಎಲ್ಲವನ್ನೂ ನಿಭಾಯಿಸುತ್ತಾಳೆ
ಅಷ್ಟೇ ಏಕೆ ಸಮಾಜದಲ್ಲಿ ಅನೇಕ ಗೌರವಾನ್ವಿತ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಮೂಲಕ ಸ್ತ್ರೀ ಕುಲಕ್ಕೆ ಗೌರವ ತಂದು ಕೊಟ್ಟಿರುವುದು ಹೆಮ್ಮೆಯ ಸಂಗತಿ. ಅಂಗವಿಕಲತೆ ಶಾಪವಲ್ಲ ಅವರಲ್ಲಿ ವಿಶೇಷವಾದ ಶಕ್ತಿ ಅಡಗಿದೆ ಅವರಿಗೆ ಅನುಕಂಪ ತೋರದೇ ಅವಕಾಶ ಕಲ್ಪಸಿದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಬಲ್ಲರು. ಅವರನ್ನು ಗೌರವದಿಂದ ಕಾಣೋಣ ಎಂದರು. ಇದೇ ಸಂದರ್ಭದಲ್ಲಿ ಅಂಧ: ಮಕ್ಕಳ ಭವಿಷ್ಯ ರೂಪಿಸುತ್ತಿರುವ ಶಿಕ್ಷಕಿಯರು ಹಾಗೂ ಸಿಬ್ಬಂಧಿ ವರ್ಗದವರನ್ನು ಗೌರವಿಸಲಾಯಿತು.
ಟ್ರಸ್ಟ್‌ನ ಉಪಾಧ್ಯಕ್ಷೆ ಅನಿತಾ ರಾಯ್ಕರ್, ಕಾರ್ಯದರ್ಶಿ ಅನಿತಾ ವಿಠ್ಠಲಕರ್, ಖಜಾಂಚಿ ವೀಣಾ ರೇವಣಕರ, ಸಮೀತಿ ಸದಸ್ಯರಾದ ಚಂದ್ರಕಲಾ ರೇವಣಕರ, ಭಾರತಿ ವರ್ಣೇಕರ್, ನಿರ್ಮಲಾ ರೇವಣಕರ, ಪ್ರೀತಿ ಕುರಡೇಕರ, ಗಾಂಧಾರಿ ರೇವಣಕರ, ಶೋಭಾ ಕುರಡೇಕರ, ಸಂಗೀತಾ ವರ್ಣೇಕರ್, ಕಮಲಾ ಪಾಲಂಕರ್ ಸೇರಿದಂತೆ ಮತ್ತಿತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 