ಮತದಾನದ ಹಕ್ಕನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ: ಪಲ್ಲವಿ ನಾಡಗೌಡ
It is everyone's duty to protect the right to vote: Pallavi Nadagowda
ಮುದ್ದೇಬಿಹಾಳ 18: ದೇಶದಲ್ಲಿ ನಡೆಯುತ್ತಿರುವ ಮತ ಕಳ್ಳತನ ಪ್ರಕರಣದ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಡಾ. ಬಿ ಆರ್ ಅಂಬೇಡ್ಕರವರು ನೀಡಿದ ಅತ್ಯಮೂಲ್ಯವಾದ ಜನರ ಮತದಾನದ ಹಕ್ಕನ್ನು ರಕ್ಷಿಸುವ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಈ ನಿಟ್ಟಿನಲ್ಲಿ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಗೊತ್ತಾಗಲೂ ಸಹ ಕೈಕಟ್ಟಿಕೊಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು ನಮ್ಮ ಹೋರಾಟ ಅನಿವಾರ್ಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು.
ಪಟ್ಟಣದ ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಚುನಾವಣೆ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿ ವೋಟ್ ಚೋರಿ ವಿರುದ್ಧದ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳಿಗೆ ಹಾಗೂ ವಾಹನಗಳಿಗೆ ಪೋಸ್ಟರ್ ಹಾಗೂ ಸ್ಟೀಕರ್‌ಗಳನ್ನು ಅಂಟಿಸಿ ಜನಜಾಗೃತಿ ಅಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಬಳಿಸಿದೆ ಎಂಬ ವಿಚಾರವನ್ನು ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬೀದಿಗಳಿಗದು ಹೋರಾಟ ನಡಿಸುವ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಮ್ಮ ಮತಕ್ಷೇತ್ರದಲ್ಲಿಯೂ ಕೂಡ ಮತಕಳ್ಳತನವಾಗಿವೆ. ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ. ಮತಗಳ್ಳತನಕ್ಕೆ ಚುನಾವಣಾ ಆಯೋಗವೇ ನೇರಹೊಣೆ ಹೊತ್ತು ಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಎನ್‌ಎಸ್‌ಯುಐನ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಕಾಂಗ್ರೆಸ್ ಮುಖಂಡ ಪಿಂಟು ಸಾಲಿಮನಿ ಅವರು ಮಾತನಾಡಿ ಬಿಜೆಪಿ ದೇಶದಲ್ಲಿನ ಪವಿತ್ರ ಮತದಾನ ವ್ಯವಸ್ಥೆಯನ್ನು ಹಾಳು ಮಾಡಿ ಅಧಿಕಾರಕ್ಕೆ ಬಂದಿದೆ. ಬೇರೆ ಬೇರೆ ಕಳ್ಳತನ ಮಾಡುವುದನ್ನು ಕಂಡಿದ್ದೆವು. ಆದರೆ ಮತಗಳನ್ನೂ ಕಳವು ಮಾಡಿ ಅದರ ಶ್ರೇಷ್ಠತೆ ಕಳಂಕ ತಂದಂಥ ಘೋರ ಅಪರಾಧವನ್ನು ದೇಶ ಎಂದೂ ಕಂಡಿದ್ದಿಲ್ಲ. ಬೇರೆ ಕಳ್ಳರನ್ನು ಜೈಲಿಗೆ ಅಟ್ಟಲಾಗುತ್ತದೆ. ಆದರೆ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಮತಗಳ್ಳರು ರಾಜಾರೋಷವಾಗಿ ಅಧಿಕಾರ ನಡೆಸಿದ್ದು ತಕ್ಷಣ ಅಧಿಕಾರದಿಂದ ಕೆಳಗಿಳಿಯಲಿ ಎಂದು ಒತ್ತಾಯಿಸಿದರು.
ಮುದ್ದೇಬಿಹಾಳ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಮೊಹಮ್ಮದ್ ಇಲಿಯಾಸ್ ಢವಳಗಿ, ವಿಜಾಪುರ ಜಿಲ್ಲಾ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳಾದ ರಫೀಕ್ ಶಿರೋಳ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಳ, ಆಸಿಫ್ ಬಿಳಕರಿ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶೋಭಾ ಶಳ್ಳಗಿ, ಸಿಕಂದರ್ ಜಾನ್ವೇಕರ್, ರಾಜು ರಾಯಗೂಂಡ, ಸಮೀರ್ ದ್ರಾಕ್ಷಿ, ಶರಣು ಚಲವಾದಿ ಅಬೂಬಕ್ಕರ್ ಹಡಗಲಿ, ರಂಜಾನ್ ನದಾಫ, ಸಂಗಮೇಶ ಚಲವಾದಿ, ತೌಸಿಫ್ ನಾಯ್ಕೋಡಿ, ಜಾಕಿರ್ ಮೂಲಮನಿ, ಗುರು ಬಿರಾದಾರ್, ಕಮಲಾ ಭಜಂತ್ರಿ, ಮಹಬುಬಿ ಭಗವಾನ್, ಶಿವಲೀಲಾ ಬಿರಾದಾರ್, ನೀಲಮ್ಮ ಚಲವಾದಿ ಹಾಗೂ ಹಲವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 