ಬೆಳೆ ವಿಮೆ ಪರಿಹಾರದಲ್ಲಿ ಅಕ್ರಮ: ಎಲ್ಐಸಿ ವಿರುದ್ಧ ರೈತರ ಆಕ್ರೋಶ
Irregularities in crop insurance compensation: Farmers' outrage against LIC
ಶಿಗ್ಗಾವಿ 28 : ಎಐಸಿ ವಿಮಾ ಕಂಪನಿಯು ಶಿಗ್ಗಾವಿ ಹೋಬಳಿ 25-26 ನೇ ಸಾಲಿನ ಸೋಯಾಬಿನ್ ಮಳೆಯಾಶ್ರಿತ ಬೆಳೆ ವಿಮೆಯಲ್ಲಿ ಮೋಸ ಮಾಡುವ ಉದ್ದೇಶದಿಂದ ತಪ್ಪು ಲೆಕ್ಕಾಚಾರ ಮಾಡಿ ವಂಚಿಸಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಶೀಧರ ಹೊನ್ನಣ್ಣವರ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಘೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ 10 ಪ್ರಯೋಗಗಳ ಇಳುವರಿಯನ್ನು ನೋಡಿದರೆ 2 ರಿಂದ 2.5ಕೆ.ಜಿ. ಸರಾಸರಿ ಇಳುವರಿ ಇದೆ. ಇದರ ಪ್ರಕಾರ ರೈತರಿಗೆ 40ರಿಂದ 45ಅ ಕೋಷ್ಟಕ ಬಿಡಬೇಕು.
ಆದ್ದರಿಂದ ವಿಮಾ ಅಧಿಕಾರಿಗಳನ್ನು ಕರೆಯಿಸಿ ರೈತರ ಸಮಕ್ಷಮ ಇನ್ನೊಮ್ಮೆ 10 ಪ್ರಯೋಗಗಳ ಇಳುವರಿ ಮತ್ತು ಟಿ, ವೈ, ಯನ್ನು ಲೆಕ್ಕ ಮಾಡಿ ರೈತರಿಗೆ ಆದ ಅನ್ಯಾಯವನ್ನು ತಕ್ಷಣ ಸರಿ ಮಾಡಿ ಕೊಡಬೇಕು ಇಲ್ಲವಾದರೆ ರೈತರೆಲ್ಲರೂ ಕೂಡಿಕೊಂಡು ಎಐಸಿ ವಿಮಾ ಕಂಪನಿ ವಿರುದ್ಧ ಜಿಲ್ಲಾಡಳಿತದ ಮುಂದೆ ಧರಣಿ ನಡೆಸಬೇಕಾಗುತ್ತದೆ. ಇದಕ್ಕೆ ತಾವುಗಳು ಅವಕಾಶ ಕೊಡದೆ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದರು. ಕೆ.ಎಂ.ಎಫ್ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ ಮಾತನಾಡಿ ಶಿಗ್ಗಾವಿ ಹೊಬಳಿಯಲ್ಲಿ 31 ಗ್ರಾಮಗಳ ಸುಮಾರು 3 ಸಾವಿರ ರೈತ ಕುಟುಂಬಕ್ಕೆ ಎಐಸಿ ವಿಮಾ ಕಂಪನಿ ಅನ್ಯಾಯವೆಸಗುತ್ತಿದೆ ಅಲ್ಲದೇ ಹುಲಗೂರು ಗ್ರಾಮದ ರೈತರಾದ ನಿರ್ಮಲಾದೇವಿ ಸೋಮಶೇಖರಗೌಡ ಪಾಟೀಲ ಇವರ ಸೋಯಾಬಿನ್ ಬೆಳೆವಿಮಾ ಅರ್ಜಿ ಸಂಖ್ಯೆ ಹಾಕಿ ಚೆಕ್ ಮಾಡಿದಾಗ -82ಅ ಅಂತಾ ತೋರಿಸಿದ್ದು ಇರುತ್ತದೆ.
ಮತ್ತೆ ಒಂದು ವಾರ ಬಿಟ್ಟು 42ಅ ಕೋಷ್ಟಕ ಇದೆ, ಅದನ್ನು ಸಹ ಒಂದೇ ದಿನದಲ್ಲಿ ಡಿಲಿಟ್ ಮಾಡಿ ಈಗ -9ಅ ಅಂತಾ ಕೋಷ್ಟಕವಿದೆ. ಎಐಸಿ ಕಂಪನಿಯವರಿಗೆ ಸರಿಯಾಗಿ ಲೆಕ್ಕ ಮಾಡಲು ಬರುತ್ತದೆಯೋ ಅಥವಾ ಇಲ್ಲವೋ ಅರ್ಥವಾಗುತ್ತಿಲ್ಲ ಎಂದು ಹರಿಹಾಯ್ದರು.ಭಾಕ್ಸ ಸುದ್ದಿ : ಎಐಸಿ ಕಂಪನಿ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಿ.ಎಂ, ಕೃಷಿ ಸಚಿವ, ಕೃಷಿ ಆಯುಕ್ತ, ಜಿಲ್ಲಾ ಉಸ್ತುವಾರಿ ಸಚಿವರಿಗೂ, ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ ನಾಗರಾಜ ಅದೃಶಪ್ಪನವರ, ಐ.ಬಿ.ಹರಕುಣಿ, ಎಂ.ಬಿ.ಹುಲ್ಲೂರ, ಬೀಮಾ ಹುಲಿಕಟ್ಟಿ, ಪ್ರಕಾಶ ನವಲೂರ, ರಮೇಶ ಮಾಯಣ್ಣವರ, ಮುಶೇಖ್ನಾನವರ,ಸುನೀಲ.ಎಂ. ಹೆಚ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 