ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ; ಬ್ರಿಟನ್ ಖಂಡನೆ

ಮಾಸ್ಕೋ, ಜ 8 ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಇರಾನ್ ಕ್ರಮವನ್ನು ಬ್ರಿಟನ್ ಖಂಡಿಸಿದೆ. ಇರಾನ್ ಕಮಾಂಡರ್ ಕಾಸೆಮ್ ಸೊಲೈಮನಿ ಅವರ ಹತ್ಯೆಗೆ ಪ್ರತಿಕಾರವಾಗಿ ಇರಾನ್, ತನ್ನ ದೇಶದಲ್ಲಿದ್ದ ಎರಡು ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್, ಈ ದಾಳಿಯನ್ನು ಖಂಡಿಸುತ್ತೇವೆ ಎಂದಿದೆಯಲ್ಲದೆ, ಪ್ರಕ್ಷುಬ್ಧತೆ ಹೆಚ್ಚಿಸದಂತೆ ಇರಾನ್ ಗೆ ಕರೆ ನೀಡಿದೆ. ಇಂತಹ ತೀವ್ರತರ ಮತ್ತು ಅಪಾಯಕಾರಿ ದಾಳಿಯನ್ನು ಮರುಕಳಿಸದಂತೆ ನಾವು ಮನವಿ ಮಾಡುತ್ತಿದ್ದೇವೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಬ್ರಿಟನ್ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.