ಮೈನಹಳ್ಳಿಯ ಶಿವಶರಣೆ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Invitation letter for Mainahalli's Shivasharane Buddamma Devi Jatra festival released

ಕೊಪ್ಪಳ 11:  ತಾಲೂಕಿನ ಮೈನಹಳ್ಳಿ ಗ್ರಾಮದ ಶಿವಶರಣೆ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವಗಳು ಮೇ.14 ರಿಂದ 17 ರವರೆಗೆ ನಡೆಯಲಿದೆ   ಎಂದು ತಿಳಿಸಲಾಗಿದೆ.

ಮೇ. 14ರ ಬುದುವಾರದಂದು ರಾತ್ರಿ 10.30 ಕ್ಕೆ ಲಘು ರುಥೋತ್ಸವ ( ಉಚ್ಚಯ್ಯ ) ಜರಗುವುದು. ಮೇ 15ರ ಗುರುವಾರ ಸಾಯಂಕಾಲ 5.30ಕ್ಕೆ ಮಾಹಾ ರಥೋತ್ಸವ ಜರಗುವುದು, ಮೇ 16 ಶುಕ್ರವಾರ ಬೆಳಗ್ಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು.ನಂತರ ರಾತ್ರಿ 8 ಗಂಟೆಗೆ ಶ್ರೀ ಮೈಲಾರ ಲಿಂಗೇಶ್ವರ ಮತ್ತು ಗಂಗಿ ಮಾಳಮ್ಮನವರ ವಿವಾಹ ಕಾರ್ಯಕ್ರಮ ಹಾಗೂ ರಾತ್ರಿ 10.30 ಕ್ಕೆ ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮೇ. 17ರ ಶನಿವಾರ ಸಾಯಂಕಾಲ 5.30ಕ್ಕೆ ಕಡುಬಿನ ಕಾಳಗ ಕಾರ್ಯಕ್ರಮಗಳು ಜರುಗಲಿವೆ. ಪ್ರತಿ ವರ್ಷದಂತೆ ಈ ವರ್ಷವು ಮೇ.15ರ ಗುರುವಾರ ಬೆಳಿಗ್ಗೆ 08 ಗಂಟೆಯಿಂದ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಇವರಿಂದ ರಕ್ತದಾನ ಶಿಬಿರ ನಡೆಯುತ್ತದೆ. ರಕ್ತದಾನಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಬಹುದು ಎಂದು ಕಮಿಟಿಯವರು ತಿಳಿಸಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಯಿಂದ ಭಕ್ತಾದಿಗಳಿಗೆ ಮಹಾಪ್ರಸಾದ ಕಾರ್ಯಕ್ರಮ ಜರುಗುವುದು. ಅಂದು ರಾತ್ರಿ ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ನಾಟ್ಯ ಸಂಘದಿಂದ ರಾತ್ರಿ 10.30 ಕ್ಕೆ ಧನಿಕರ ದೌರ್ಜನ್ಯ ಎಂಬ ಸುಂದರ ಸಾಮಾಜಿಕ ನಾಟಕ ಅಭಿನಯಿಸುವವರುಎಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಧ್ಬಕ್ತರು ಭಾಗಿಯಾಗಿ  ಶ್ರೀ ಶಿವಚರಣೆ ಬುಡ್ಡಮ್ಮ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಮೈನಹಳ್ಳಿ ದೇವಸ್ಥಾನ ಸಮಿತಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ,  ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಗ್ರಾಮದ ಗುರು-ಹಿರಿಯರು ಹಾಗೂ ಯುವಕ ಮಿತ್ರರು ಸೇರಿದಂತೆ ಸಕಲ ಸದ್ಭಕ್ತ  ಮಂಡಳಿ ಆಗಮಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮದ ಮುಖಂಡರಾದ ಷಣ್ಮುಖಯ್ಯ ತೋಟದ, ಮರಿಶಾಂತವೀರ ಸ್ವಾಮಿ ಚಕ್ಕಡಿಮಠ, ವೀರಯ್ಯ ಹಿರೇಮಠ ನಿಂಗಣ್ಣ ಡಂಬ್ರಳ್ಳಿ, ಗುದ್ನೆಪ್ಪ  ಬಳಗೇರಿ ಶಿವಣ್ಣ ಹ್ಯಾಟಿ, ಬಸವರಾಜ ಅಂಗಡಿ, ವಿರುಪಾಕ್ಷಿ ಬಳಗೇರಿ, ರೇವಪ್ಪ ಮೆತ್ತಗಲ್ ಇನ್ನು ಅನೇಕ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು