ಮಾ.14 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಕೊಪ್ಪಳ ಸ್ತ್ರೀ ರತ್ನ ಪ್ರಶಸ್ತಿ ಪ್ರಧಾನ : ಮಮತಾ ರಾಯರೆಡ್ಡಿ
International Women's Day on March 14: Koppal Stree Ratna Award: Mamata Rayareddy
ಕೊಪ್ಪಳ 12 : ಕೊಪ್ಪಳ ಜಿಲ್ಲಾ ಹಾಗೂ ಯಲಬುರ್ಗಾ ವಿಧಾನಸಭಾ ಮಹಿಳಾ ಕಾಂಗ್ರೆಸ್ ಹಾಗೂ ಆರಾಮ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಾಳೆ ಮಾರ್ಚ್ 14 ರಂದು ಬೆಳಗ್ಗೆ 10 ಗಂಟೆಗೆ ಕುಕನೂರನ ಬಿ.ವಿ.ಶೆಟ್ಟರ್ ಮಂಗಲ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕೊಪ್ಪಳ ಸ್ತ್ರೀ ರತ್ನ ಪ್ರಶಸ್ತಿ ಪ್ರಧಾನ ಜರುಗುವದೆಂದು ಆರಾಮ್ ಸಂಸ್ಥೆಯ ಅಧ್ಯಕ್ಷರು ಹಾಗೂ ಹೈಕೋರ್ಟ್ ನ್ಯಾಯವಾದಿ ಮಮತಾ ರಾಯರೆಡ್ಡಿ ಹೇಳಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ಶಿಳ್ಳೆಕ್ಯಾತರ್ ನೆರವೇರಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈಕೋರ್ಟ್ ನ್ಯಾಯವಾದಿ ಮಮತಾ ರಾಯರೆಡ್ಡಿ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಕ್ಮಿಣಿ ಬಾಯಿ ಚಿತ್ರಗಾರ, ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾದ ಶರಣಮ್ಮ ಚೆನ್ನಪ್ಪ ಚಟ್ಟಿ ಯರೇ ಹಂಚಿನಾಳ್ ಪಾಲ್ಗೊಳ್ಳುವರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಪ್ರಶಸ್ತಿ ಪ್ರಧಾನ ಮಾಡುವರು, ಅತಿಥಿಗಳಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ ಗೊಂಡಬಾಳ, ಕೆಪಿಸಿಸಿ ಸದಸ್ಯರಾದ ಗಿರಿಜಾ ಸಂಗಟಿ, ಹಿರಿಯ ಮುಖಂಡರಾದ ಜಯಶ್ರೀ ಕಂದಕೂರ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರುಕೊಪ್ಪಳ ಜಿಲ್ಲಾ ಶ್ರೀರತ್ನ ಪ್ರಶಸ್ತಿ ಪುರಸ್ಕೃತರು : ರಮ್ಯಾ ಕೃಷ್ಣ (ವಿಶೇಷ ಸಾಧನೆ) ಕಾರಟಗಿ,
ಅರುಣಾ ವಸ್ತ್ರದ್ (ಸ್ಕೌಟ್ ಅಂಡ್ ಗೈಡ್ಸ್) ಕನಕಗಿರಿ, ಬಾಲ ನಾಗಮ್ಮ (ಶಿಕ್ಷಣ) ಕೊಪ್ಪಳ, ರೇಷ್ಮಾ ವಡ್ಡಟ್ಟಿ (ಯೋಗ) ಕೊಪ್ಪಳ, ಜ್ಯೋತಿ ಹಿಟ್ನಾಳ್ (ಮಹಿಳಾ ಸಂಘಟನೆ) ಕೊಪ್ಪಳ, ಶ್ರೀದೇವಿ ಶೇಖರ್ಪ ಇಂಗಳದಾಳ್ (ಕೃಷಿ) ಕೊಪ್ಪಳ, ಕಂಟೆಮ್ಮ ತಗ್ಗಿಹಾಳ (ಸಮಾಜ ಸೇವೆ) ಕುಷ್ಟಗಿ, ಡಾಕ್ಟರ್ ಪಾರ್ವತಿ ಪಲೋಟಿ ರತ್ನೂರ್ (ವೈದ್ಯಕೀಯ ಕ್ಷೇತ್ರ) ಕುಷ್ಟಗಿ, ಅವನಿ ಗಂಗಾವತಿ (ಕಲಾಸೇವೆ) ಗಂಗಾವತಿ, ಪ್ರಗತಿ ಉಡೆದ್ (ಕಿರಡೆ) ಗಂಗಾವತಿ, ಸರಸ್ವತಿ ಸಸಿಮಠ ಚಿಕ್ಕಮ್ಯಾಗೇರಿ (ಗಾಯಕರು ಮತ್ತು ಜಾನಪದ ಸಾಹಿತ್ಯ) ಯಲಬುರ್ಗಾ,
ಸಹನಾ ಹೆಬ್ಬುಲಿ ಬಂಡಿ (ಯೋಗ) ಯಲಬುರ್ಗಾ, ಸೌಭಾಗ್ಯ ಕದ್ರಳ್ಳಿ (ಸಮಾಜ ಸೇವೆ) ಕುಕನೂರು, ವಿಜಯಲಕ್ಷ್ಮಿ ಚನಪನಹಳ್ಳಿ (. (ಕಿರಡ ಪಟು) ಕುಕನೂರು. ಈ ಕಾರ್ಯಕ್ರಮಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ.ಎಂ ಗೊಂಡಬಾಳ, ಕುಕನೂರು ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫರೀದಾ ಬೇಗಂ ತಂಬಾಕದಾರ, ಜಿಲ್ಲಾ ದಿಶಾ ಕಮಿಟಿ ಸದಸ್ಯರಾದ ನಂದಿತಾ ದಾನರೆಡ್ಡಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 