ಗದಗ 08:- ನಗರದ ಮಕಾನ್ ಗಲ್ಲಿಯ ಲಕ್ಶ್ಮೀ ದೇವಸ್ಥಾನದಲ್ಲಿ ದಿ. 8ರಂದು ಸಾಯಂಕಾಲ 7 ಘಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಾವಿತ್ರಿ ಹೂಗಾರ, ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಮಹಿಳೆಯರ ಕುರಿತು ಮಾತನಾಡಿದ ಮಹಿಳಾ ಮುಖಂಡರಾದ ಸಾವಿತ್ರಿ ಹೂಗಾರರವರು ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು, 'ಹೆತ್ತು ಹೊತ್ತು ಸಾಕಿ ಸಲಹುವವಳು ಮಹಿಳೆ. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳು ಅವಳೇ, ಇಂತಹ ಮಹಿಳೆಗೆ ಜಗತ್ತಿನಲ್ಲಿ, ಅಪೂರ್ವ ಸ್ಥಾನವಿದೆ. ಅವರ ಕೊಡುಗೆಯನ್ನು ಸ್ಮರಿಸುವಂತೆ, ಗೌರವಿಸುವಂತೆ, ಶ್ಲಾಘಿಸುವಂತೆ ನೆನೆಸಿಕೊಡುವಂತಹ ದಿನವಾಗಿ ವಿಶ್ವ ಮಹಿಳಾ ದಿನವನ್ನು ಪ್ರತಿವರ್ಷ ಮಾರ್ಚ್ 8 ರಂದು 'ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ ಅದರಂತೆ ಇಂದು ಬಡಾವಣೆಯ ಮಹಿಳೆಯರ ಕೊಡುಗೆಯನ್ನು ಸ್ಮರಿಸಲು, ಗೌರವಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ ಎಂದು ನುಡಿದರು
ಈ ಸಂಧರ್ಭದಲ್ಲಿ ಲಲಿತಾ ಖುಷಿ ಮೀನಾಕ್ಷಿ ನಲೋಡೆ, ರೇಖಾ ಬೇಂದ್ರೆ, ಸರಸ್ವತಿ ಬಡಿಗೇರ್, ಶಾರದಾ ಪತ್ತಾರ್, ಸವಿತಾ ಪಟ್ಟಣ, ವಿದ್ಯಾ ಮೆರವಾಡೆ, ಸವಿತಾ ಶಿರಹಟ್ಟಿ ಪ್ರೇಮಾ ಶಿರಹಟ್ಟಿ, ಪ್ರೇಮಾ ಅರಳಿ, ಪೂರ್ಣಿಮಾ ಹಡಗಲಿ, ಸವಿತಾ ಗೌರಿಪುರ, ಗೀತಾ ಬಡಿಗೇರ್, ಪೂಜಾ ಬಡಿಗೇರ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.