ಸರ್ಕಾರದ ಪಂಚ ಯೋಜನೆಗಳ ಸಮರ​‍್ಕ ಅನುಷ್ಠಾನಕ್ಕೆ ಸೂಚನೆ

ಸರ್ಕಾರದ ಪಂಚ ಯೋಜನೆಗಳ ಸಮರ​‍್ಕ ಅನುಷ್ಠಾನಕ್ಕೆ ಸೂಚನೆ  Instructions issued for the effective implementation of the government's five schemes

ಲೋಕದರ್ಶನ ವರದಿ 

ಸಿಂಧಗಿ 16: ಸರ್ಕಾರದ ಪಂಚ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂತೋಷ ಸಾಲಿ ಸೂಚಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರ್ಕಾರದ ಪಂಚ ಯೋಜನೆಗಳ ಗ್ಯಾರಂಟಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಹೆಸ್ಕಾಂ ಹಿರಿಯ ಅಭಿಯಂತರ ಚಂದ್ರಕಾಂತ ನಾಯಕ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಸಿಂಧಗಿ ನಗರದಲ್ಲಿ 13,500 ಫಲಾನುಭವಿಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 25,511 ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯಡಿ ಜೂನ್ವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದ್ದು, ಮೃತಪಟ್ಟ 12 ಫಲಾನುಭವಿಗಳ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದರು. ಸಿಂಧಗಿ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಶೌಚಾಲಯವನ್ನು ಸಮರ​‍್ಕವಾಗಿ ನಿರ್ವಹಿಸುವಂತೆ ಸಮಿತಿ ಅಧ್ಯಕ್ಷರು ಸೂಚಿಸಿದರು. ಯುವನಿಧಿ ಯೋಜನೆಯಡಿ 2,854 ಮಂದಿ ನೋಂದಾಯಿಸಿಕೊಂಡಿದ್ದು, 2,575 ಯುವನಿಧಿ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಹೇಶ ಮಾಳವಾಡೇಕರ ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನೀಲ ಹಳ್ಳಿ, ಸಮಿತಿ ಸದಸ್ಯರಾದ ಸುನಂದಾ ಯಂಪೂರೆ, ಎಸ್‌.ಬಿ. ಖಾನಾಪುರ, ಪರಶುರಾಮ ಗೌಡ, ಶಂಕರಗೌಡ ಬಿರಾದಾರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.