ಶಾಸನಗಳು ನಾಡಿನ ಜೀವಂತ ಇತಿಹಾಸದ ಕೈಗನ್ನಡಿ: ಡಾ. ಕೆ ಸತೀಶ್
Inscriptions are a mirror reflecting the living history of the land: Dr. K. Satish
ಲೋಕದರ್ಶನ ವರದಿ
ಹೂವಿನಹಡಗಲಿ 16 : ಶಾಸನಗಳು ನಮ್ಮ ಪೂರ್ವಜರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಭೌಗೋಳಿಕ ಹೆಜ್ಜೆ ಗುರುತುಗಳನ್ನು ದಾಖಲಿಸಿರುವ ಜೀವಂತ ಸಾಕ್ಷಿಗಳಾಗಿವೆ ಎಂದು ಪ್ರಾಚಾರ್ಯ ಡಾ. ಕೆ ಸತೀಶ ಅಭಿಪ್ರಾಯಪಟ್ಟರು .ತಾಲೂಕಿನ ಹುಗುಲೂರಿನ ಸ.ಹಿ. ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಡಾ. ಡಿ ವೀರೇಶ್ ಅವರ ಶಾಸನ ಸಾಕ್ಷಿ ಕೃತಿ ಲೋಕಾರೆ್ಣ ಮಾಡಿ ಮಾತನಾಡಿದರು.
ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರ ಕಾಲದ ವಾಸ್ತುಶಿಲ್ಪ ಹಾಗೂ ಶಾಸನ ಸಂಸ್ಕೃತಿಯನ್ನು ಪುಸ್ತಕದಲ್ಲಿ ದಾಖಲಿಸಿರುವುದು ಸಂಶೋಧಕರಿಗೆ ಅತ್ಯುತ್ತಮ ಗ್ರಂಥವಾಗಿದೆ ಎಂದರು. ಲೇಖಕ ಡಾ. ವೀರೇಶ್ ಮಾತನಾಡಿದರು.ಇದೇ ವೇಳೆ 7 ಹಾಗೂ 10ನೇತರಗತಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಗ್ರಾ.ಪಂ. ಮಾಜಿ ಸದಸ್ಯ ಕೆ.ಶಿವಪುತ್ರ್ಪನವರು ಪ್ರತಿಭಾ ಪುರಸ್ಕಾರಕ್ಕಾಗಿ ಶಾಲೆಗೆ 21,100/ರೂ.ಗಳ ಶಾಶ್ವತ ನಿಧಿ ಠೇವಣಿ ನೀಡಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಹನುಮಂತಪ್ಪ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಗುರು ಸಿ. ಯೋಗೇಶ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಹೆಚ್.ಜಿ. ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ "ಇತಿಹಾಸ ಅರಿಯಲಾರವರು ಇತಿಹಾಸವನ್ನು ಸೃಷ್ಟಿಸಲಾರರು" ಎಂಬಂತೆ ಮಕ್ಕಳು ತಮ್ಮ ಕುಟುಂಬ, ಗ್ರಾಮ, ದೇಶದ ಚರಿತ್ರೆಯನ್ನು ಅರಿತು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಗ್ರಾ.ಪಂ.ಮಾಜಿ ಸದಸ್ಯ ರಾಜಪ್ಪ, ಹೆಚ್.ಪಿ. ಹಾಲಪ್ಪ , ಮೇಟಿ ದೇವೇಂದ್ರ್ಪ, ಎಂ ಚಂದ್ರಶೇಖರ ಗೌಡ, ಮೌನೇಶಪ್ಪ, ಮೇಟಿ ಜಗದೀಶ ಎಮ್. ತಿರುಕಪ್ಪ,ಮಲ್ಲಿಕಾರ್ಜುನ, ಎಸ್.ಡಿ.ಎಂ.ಸಿ ಉಪಾದ್ಯಕ್ಷರಾದ ನಿರ್ಮಲಮ್ಮಭದ್ರ್ಪ, ಸದಸ್ಯ ಸೊಲ್ಲಪ್ಪ, ಎಂ ಜಗದೀಶ, ಕೆ ನೀಲಕಂಠಪ್ಪ ,ಶ್ರೀಮತಿ ಸುಧಾ ಹಾಲೇಶ್ ಎಂ ಗಂಗಮ್ಮ ಇದ್ದರು. ಶಿಕ್ಷಕ ವಿ. ವಿಜಯಕುಮಾರ ಸ್ವಾಗತಿಸಿದರು. ಬಿ ವೀರಭದ್ರ್ಪ ನಿರ್ವಹಿಸಿದರು. ಶಿಕ್ಷಕಿ ಎಸ್.ಎನ್.ಪವಿತ್ರ ವಂದಿಸಿದರು. ವಿದ್ಯಾರ್ಥಿಗಳಿಂದ ಭಾಷಣ ದೇಶಭಕ್ತಿ ಗೀತೆಗಳು, ಸ್ವಾತಂತ್ರ್ಯಹೋರಾಟಗಾರರ ಛದ್ಮವೇಶ, ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 