ರೋಟರಿ ಕ್ಲಬ್ ಆಫ್ ವಿಜಯಪುರ ನೂತನ ಪದಾಧಿಕಾರಿಗಳ ಪದಗ್ರಹಣ

ರೋಟರಿ ಕ್ಲಬ್ ಆಫ್ ವಿಜಯಪುರ ನೂತನ ಪದಾಧಿಕಾರಿಗಳ ಪದಗ್ರಹಣ  Induction of New Office Bearers of Rotary Club of Vijayapura

ಲೋಕದರ್ಶನ ವರದಿ 

ವಿಜಯಪುರ 13: ನಗರದ ರೋಟರಿ ಕ್ಲಬ್ ಆಫ್ ವಿಜಯಪುರ (ಕ್ಲಬ್ ನಂ. 15630, ಜಿಲ್ಲೆ 3170) ಸಂಸ್ಥೆಯ 2026-27ನೇ ಸಾಲಿನ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ನಿರ್ದೇಶಕರ ಮಂಡಳಿಯ ಪದಗ್ರಹಣ ಸಮಾರಂಭವು ಯಶಸ್ವಿಯಾಗಿ ನಡೆಯಿತು.  

ನಗರದ ಗಣೇಶ್ ನಗರದ ಬೆಂಗಳೂರು ರಸ್ತೆಯಲ್ಲಿರುವ ಹೋಟೆಲ್ ಸಾಮ್ರಾಟ್ ಪ್ಯಾಲೇಸ್ನಲ್ಲಿ ಜುಲೈ 11ರಂದು ಸಂಜೆ 7 ಗಂಟೆಗೆ ನಡೆದ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.  

ರೋಟರಿ ಕ್ಲಬ್ನ ನೂತನ ಅಧ್ಯಕ್ಷರಾಗಿ ರೋಟೇರಿಯನ್ ರಾಕೇಶ್ ಜಿ. ಜೋಶಿ (ರಾಕೇಶ್ ಗೋಪಾಲ ಜೋಶಿ) ಹಾಗೂ ಕಾರ್ಯದರ್ಶಿಯಾಗಿ ರೋಟೇರಿಯನ್ ರುದ್ರಗೌಡ ಜಿ. ಪಾಟೀಲ ಅವರು ಅಧಿಕಾರ ವಹಿಸಿಕೊಂಡರು. ಇವರೊಂದಿಗೆ 2026-27ನೇ ಸಾಲಿನ ನೂತನ ನಿರ್ದೇಶಕರ ಮಂಡಳಿಯ ಸದಸ್ಯರು ಕೂಡ ಅಧಿಕಾರ ಸ್ವೀಕರಿಸಿದರು.  

ರೋಟರಿ ಸಂಸ್ಥೆಯ ಸಹಾಯಕ ಜಿಲ್ಲಾ ಗವರ್ನರ್ (2022-23, ಖಋ 3170) ರೋಟೇರಿಯನ್ ಪ್ರಶಾಂತ್ ವಿ. ಹಂಚಾಟೆ ಅವರು ಪದಗ್ರಹಣಾಧಿಕಾರಿಯಾಗಿ ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು. ಮುಂದಿನ ವರ್ಷದಲ್ಲಿ ರೋಟರಿ ಕ್ಲಬ್ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.  

ಈ ಸಂದರ್ಭದಲ್ಲಿ ರೋಟೇರಿಯನ್ ಜಿ.ಎಸ್‌. ಕುಲಕರ್ಣಿ, ರೋಟೇರಿಯನ್ ಆರಿ​‍್ಬ. ಜೋಶಿ, ರೋಟೇರಿಯನ್ ಇಮಾಮ್ ಹುಲೂರ್, ರೋಟೇರಿಯನ್ ಸರೋಜ ನಾಟೀಕಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.  ಸಮಾರಂಭದಲ್ಲಿ ರೋಟರಿ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಅವರ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.