ದೇವಸ್ಥಾನಗಳಲ್ಲಿ ನಿತ್ಯದ ಪೂಜೆಯ ಜೊತೆಗೆ ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಭಾರತಕ್ಕೆ ಅವಶ್ಯಕತೆ ಇದೆ: ಬಸವರಾಜ ಬೊಮ್ಮಾಯಿ
India needs weekly mass prayers in addition to daily worship in temples: Basavaraja Bommai
ಬ್ಯಾಡಗಿ 30 : ದೇವಸ್ಥಾನಗಳಲ್ಲಿ ದಿನನಿತ್ಯದ ಪೂಜೆಯ ಜೊತೆಗೆ ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವುದು ನಮ್ಮ ಭಾರತ ದೇಶಕ್ಕೆ ಬಹಳ ಅವಶ್ಯಕತೆ ಇದೆ. ಆ ಮೂಲಕ ನಮ್ಮ ದೇಶ ಭಾರತ ಕಟ್ಟುವ ಕೆಲಸ ಮಾಡಬೇಕು. 2047ಕ್ಕೆ ವಿಕಸಿತ ಭಾರತವನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸು ಕಂಡಿದ್ದಾರೆ. ಆ ಕನಸು ನನಸಾಗಬೇಕಾದರೆ ಗ್ರಾಮಗಳಲ್ಲಿ ಭಕ್ತಿಯಿಂದ ಪ್ರಾರಂಭ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಂದು ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ ದೇವಸ್ಥಾನದ ಲೋಕಾರೆ್ಣ ಹಾಗೂ ಕಳಸಾರೋಹಣ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬಹಳ ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಿದ್ದೀರಿ, ಈ ದೇವಸ್ಥಾನ ಸಮಿತಿಯವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.
ಸಂಪೂರ್ಣವಾಗಿ ಶಿಲೆಯಿಂದ ಮಾಡಿರುವ ಮಂದಿರದಲ್ಲಿ ಕಲ್ಮೇಶ್ವರನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಈ ದೇವಸ್ಥಾನ ಕಟ್ಟಲು ತಾವು ಬಹಳಷ್ಟು ಪರಿಶ್ರಮ ತೆಗೆದುಕೊಂಡಿದ್ದೀರಿ, ಒಂದೂವರೆ ವರ್ಷ ಬಹಳ ಕಷ್ಟ ಪಟ್ಡು ಒಕ್ಕಟ್ಟಾಗಿ ಕೆಲಸ ಮಾಡಿದ್ದೀರಿ. ಒಕ್ಕಟ್ಟಾಗಿ ಓಡಾಡಿ ಹಣ ಸಂಗ್ರಣ ಮಾಡಿದ್ದೀರಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಪ್ರತಿ ವಾರದಲ್ಲಿ ಒಂದು ದಿನ ಒಂದು ಗಂಟೆ ಸಾಮೂಹಿಕ ಪ್ರಾರ್ಥನೆ ಮಾಡಬೇಕು. ಇದರಿಂದ ಇಡೀ ಊರಿಗೆ ಒಳ್ಳೆಯದಾಗುತ್ತದೆ. ಕಲ್ಯಾಣ ಆಗುತ್ತದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗುತ್ತದೆ. ಮುಂದೆ ಅವರು ಅದನ್ನು ಮುಂದುವರೆಸುತ್ತಾರೆ ಎಂದು ಹೇಳಿದರು.*ಪ್ರಾರ್ಥನೆ ಬಹಳ ಮುಖ್ಯ*ದೇವಸ್ಥಾನಗಳು ಧರ್ಮದ ಕೇಂದ್ರ, ಧರ್ಮದಿಂದ ಅಂದರೆ ಸತ್ಯದಿಂದ ನಾವು ಜೀವನ ಮಾಡಬೇಕು. ಆ ಪರಂಪರೆ ಬರಬೇಕೆಂದರೆ ಪ್ರಾರ್ಥನೆ ಬಹಳ ಮುಖ್ಯ. ಭಕ್ತಿಯ ಮುಖಾಂತರ ಭಗವಂತನನ್ನು ನಾವು ನೋಡಲು ಸಾಧ್ಯವಿದೆ.
ಭಗವಂತನ ಪ್ರಾಪ್ತಿಯಾಗಲು ಶ್ರದ್ದೆ ಮತ್ತು ಭಕ್ತಿ ಬಹಳ ಮುಖ್ಯ. ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ, ದೇವರ ಜೊತೆ ವ್ಯವಹಾರ ಮಾಡಬಾರದು. ಕೈಮುಗಿದು ಆಸ್ತಿ ಹೆಚ್ಚಿಗೆ ಮಾಡು, ಶ್ರೀಮಂತನ ಮಾಡು , ರಾಜಕಾರಣಿಗಳು ಇದ್ದರೆ ಮಂತ್ರಿ ಮಾಡು ಅಂತ ಬೇಡಿಕೊಳ್ಳುತ್ತೇವೆ ಇದು ಭಕ್ತಿಯೂ ಅಲ್ಲ, ಪ್ರಾರ್ಥನೆಯೂ ಅಲ್ಲ. ಏನೂ ಬೇಡದೇ ಏನೇ ಕಷ್ಟ ಬರಲಿ ಅದನ್ನು ಎದುರಿಸುವ ಶಕ್ತಿ ಕೊಡು ಭಗವಂತ ಅಂತ ಪ್ರಾರ್ಥನೆ ಮಾಡಿದರೆ ಅದು ನಿಜವಾದ ಭಕ್ತಿ ಆ ಕೆಲಸವನ್ನು ಮಾಡಬೇಕು. ದೇವಸ್ಥಾನಕ್ಕೆ ಭಕ್ತಿಯಿಂದ ಶಕ್ತಿ ಬರುತ್ತದೆ. ಮಠಕ್ಕೂ ಭಕ್ತರಿಂದ ಶಕ್ತಿ, ಆದ್ದರಿಂದ ಬಹಳ ಒಳ್ಳೆಯ ದೇವಸ್ಥಾನ ಕಟ್ಟಿದ್ದೀರಿ ಜಕಣಾಚಾರಿ ಕಾಲದ ದೇವಸ್ಥಾನದ ಹಾಗೆ ಕಟ್ಟಿದ್ದೀರಿ ಅಷ್ಟು ಚನ್ನಾಗಿ ಕಟ್ಟಿ ಬಿಟ್ಟರೆ ಅಲ್ಲಿ ನಡೆಯಬಾರದ ಚಟುವಟಿಕೆಗಳು ನಡೆಯುತ್ತವೆ. ಹೀಗಾಗಿ ದಿನನಿತ್ಯದ ಪೂಜೆಯ ಜೊತೆಗೆ ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡಬೇಕು,
ಇವತ್ತು ನಮ್ಮ ಭಾರತ ದೇಶಕ್ಕೆ ಬಹಳ ಅವಶ್ಯಕತೆ ಇದೆ. ಆ ಮೂಲಕ ನಮ್ಮ ದೇಶ ಭಾರತ ಕಟ್ಟುವ ಕೆಲಸ ಮಾಡಬೇಕು. 2047ಕ್ಕೆ ವಿಕಸಿತ ಭಾರತವನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸು ಕಂಡಿದ್ದಾರೆ. ಆ ಕನಸು ನನಸಾಗಬೇಕಾದರೆ ಗ್ರಾಮಗಳಲ್ಲಿ ಭಕ್ತಿಯಿಂದ ಪ್ರಾರಂಭ ಆಗಬೇಕು ಎಂದು ಹೇಳಿದರು.ಭಕ್ತಿ ಇದ್ದರೆ ಅಣ್ಣ ತಮ್ಮ, ಅಕ್ಕ ತಂಗಿ, ಮಾವ ಅಳಿಯ ಸಂಬಂಧಗಳು ಉಳಿಯುತ್ತವೆ. ಸಂಬಂಧ ಉಳಿದರೆ ಏನೇ ಕಷ್ಟ ಬಂದರೂ ಎದುರಿಸುವ ಶಕ್ತಿ ಬರುತ್ತದೆ. ಅದನ್ನು ದಾಟಿ ಅಭಿವೃದ್ದಿ ಮಾಡಬಹುದು ಆ ನಿಟ್ಟಿನಲ್ಲಿ ನಾವೆಲ್ಲ ಸಾಗಬೇಕು ಎಂದು ಹೇಳಿದರು.ಈ ಸಂಧರ್ಭದಲ್ಲಿ ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ ಮುಖಂಡರುಗಳಾದ ಎಂ.ಎಸ್ ಪಾಟೀಲ್, ರಾಜು ಹೊಸಕೇರಿ ಭಾರತೀಯ ಜನತಾ ಪಾರ್ಟಿಯ ಬ್ಯಾಡಗಿ ಮಂಡಳದ ಅಧ್ಯಕ್ಷರಾದ ನಿಂಗಪ್ಪ ಬಟ್ಟಲಕಟ್ಟಿ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 