ನವದೆಹಲಿ, ಜು 11: ಭಾರತದಲ್ಲಿ 2018ರಲ್ಲಿ ನಡೆಸಿದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪ್ ಹುಲಿ ಸಮೀಕ್ಷೆ 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದಿದೆ.
ಈ ಸಾಧನೆಯನ್ನು ಶ್ಲಾಘಿಸಿರುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಇದು '' ಆತ್ಮನಿರ್ಭರ್ ಭಾರತ''ದ ಪರಿಕಲ್ಪನೆಗೆ ನಿಜವಾದ ಉದಾಹರಣೆ ಎಂದಿದ್ದಾರೆ.
ದೇಶದ ಹುಲಿ ಜನಗಣತಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದೆ, ಮತ್ತು ನಿಗದಿತ ಗುರಿಗಿಂತ ನಾಲ್ಕು ವರ್ಷಗಳ ಮೊದಲೇ ನಾವು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಪೂರೈಸಿದೆ ಎಂದರು.
ಈ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಳಿಮುಖವಾಗುತ್ತಿರುವ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉಪಕ್ರಮದ ಭಾಗವಾಗಿ ಕಳೆದ ಹಲವಾರು ವರ್ಷಗಳಲ್ಲಿ ಹುಲಿಗಳ ಜನಸಂಖ್ಯೆಯು ಶೇ.6ರಷ್ಟು ಹೆಚ್ಚಾಗಿದೆ.
ಈ ಸಮೀಕ್ಷೆಯ ಭಾಗವಾಗಿ, ವಿವಿಧ ತಾಣಗಳಲ್ಲಿ ಸಾವಿರಾರು ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಇರಿಸಲಾಗಿತ್ತು ಮತ್ತು ಲಕ್ಷಾಂತರ ಚಿತ್ರಗಳನ್ನು ಸೆರೆ ಹಿಡಿಯಲಾಗಿತ್ತು.