ರಾಜ್ಯ ರೈತ ಸಂಘ ಹಸಿರು ಸೇನೆಯ ನಂಜುಂಡಸ್ವಾಮಿ ಬಣದ ನೂತನ ಗ್ರಾಮ ಘಟಕ ಉದ್ಘಾಟನೆ
Inauguration of the new village unit of the Nanjundaswamy faction of the State Farmers' Association
ಬ್ಯಾಡಗಿ 15: ಸಂಘಟನೆಯ ಬಲಿಷ್ಠವಾದರೆ ಮಾತ್ರ ರೈತರು ಸಧೃಡ. ರುದ್ರಗೌಡ ಕಾಡನಗೌಡ್ರ. ಬ್ಯಾಡಗಿ ರೈತರು ಸಾಕಷ್ಟು ಸಮಸ್ಯೆಗಳ ಸರಮಾಲೆ ಯಲ್ಲಿದ್ದಾರೆ ಸರ್ಕಾರಗಳು ಆಶ್ವಾಸನೆ ಮಾತ್ರ ನೀಡುತ್ತಿವೆ. ಹೀಗಾಗಿ ಕೃಷಿಕರ ಸಮಸ್ಯಗಳ ಪರಿಹಾರಕ್ಕಾಗಿ ಹೋರಾಡಲು ರೈತರು ಗ್ರಾಮ ಘಟಕದ ಅಗತ್ಯವಿದೆ ಎಂದು ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಹೇಳಿದರು. ತಾಲೂಕಿನ ಕಲ್ಲೇದೆವರು ಸೇವಾಲಾಲ್ ತಾಂಡಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನಂಜುಂಡಸ್ವಾಮಿ ಬಣದ ನೂತನ ಗ್ರಾಮ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದವರು 80 ರೈ ದಶಕದ ರೈತರ ಕಣ್ಮಣಿ ರೈತರ ಸಂಘಟನೆಗೆ ಕಾರಣವಾದ ಪ್ರೊ.ನಂಜುಂಡಸ್ವಾಮಿ ಅವರನ್ನು ನಾವು ಈ ದಿನ ಸ್ಮರಿಸಲೆಬೇಕು. ಸಂಘಟನೆ ಇಲ್ಲದಿದ್ದರೆ ರೈತರಿಗೆ ಬಲ ಬರುವುದಿಲ್ಲ.
ಸಂಘಟನೆ ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ. ನಾವು ನಂಜುಂಡಸ್ವಾಮಿ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ರೈತ ಸಂಘದ ಘಟಕಗಳಿದ್ದರೆ ರೈತರಿಗೆ ಭೀಮಬಲ ಬರುತ್ತದೆ.ರೈತ ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ರೈತರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದಕ್ಕಿಂತ ತಮ್ಮ ಸಂಘಟನೆ ಮೂಲಕ ಕೆಲಸಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು.ರೈತ ಸಂಘ ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಯಾರೇ ರೈತರಿಗೆ ತೊಂದರೆಯಾದರೂ ತಕ್ಷಣ ಸ್ಪಂದಿಸಬೇಕು. ಗ್ರಾಮ ಘಟಕಕ್ಕೆ ಮೀರಿದ ಸಮಸ್ಯೆಗಳಿದ್ದರೆ ತಾಲೂಕು, ಜಿಲ್ಲಾ ಘಟಕಗಳಿಗೆ ಮಾಹಿತಿ ನೀಡಿದರೆ ನಾವು ಸದಾ ನಿಮ್ಮ ಜತೆಗಿದ್ದು ಕೆಲಸ ಮಾಡುತ್ತೇವೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಳ್ಳಾರಿ ಮಾತನಾಡಿ “ಭಾರತದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವವರು ರೈತರು. ಪ್ರತಿ ರೈತನ ತಲೆ ಮೇಲೆ ಲಕ್ಷಾಂತರ ರೂಪಾಯಿ ಸಾಲ ಇದೆ. ರೈತ ಬೆಳೆದ ಬೆಳೆ ಪ್ರಕೃತಿಯ ಮುನಿಸಿಗೆ ನಾಶವಾಗಿ ಆ ಸಾಲ ತೀರಸಲಾಗದೇ ಆತ್ಮಹತ್ಯ ಮಾಡಿಕೊಳ್ಳುತ್ತಾನೆ. ಇನ್ನೊಂದೆಡೆ ಬಿತ್ತಿದ ಬೆಳೆ ಕೈಗೆ ಸಿಗಲ್ಲ. ಅಲ್ಪಸ್ವಲ್ಪ ಬಂದ ಬೆಳೆಗೆ ಕೃಷಿ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗಲ್ಲ. ಇದರ ಮದ್ಯದಲ್ಲಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ. ಮಧ್ಯವರ್ತಿಗಳು ಬೆಲೆ ನಿಗದಿ ಮಾಡಿದಷ್ಟಕ್ಕೆ ರೈತರು ತಾವು ಬೆಳೆದ ಬೆಳೆ ಕೊಡಬೇಕು. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ರೈತರ ಗೋಳು ತಪ್ಪಿಸಲು ಸರ್ಕಾರಗಳಿಗೆ ಆಗುತ್ತಿಲ್ಲ. ಎಲ್ಲದಕ್ಕೂ ತೆರಿಗೆ ಹಾಕುತ್ತವೆ. ಆದರೆ, ರೈತರ ಬೆಳೆಗೆ ಬೆಂಬಲ ಬೆಲೆ ಘೋಷಿಸುತ್ತಿಲ್ಲ.
ಕೇಂದ್ರ ಸರಕಾರ ರೈತರು ಬೆಳೆದ ಬೆಳೆ ಬಂದಾಗ ಬೆಂಬಲ ಬೆಲೆ ಘೋಷಿಸುವುದಿಲ್ಲ. ಅದರ ಅವಧಿ ಮುಗಿದ ಮೇಲೆ ಬೆಂಬಲ ಬೆಲೆ ಘೋಷಿಸುತ್ತದೆ. ಅಷ್ಟರಲ್ಲಿ ಮಧ್ಯವರ್ತಿಗಳು ತಾವೇ ನಿಗದಿಗೊಳಿಸಿದ ಬೆಲೆಗೆ ರೈತರ ಮಾಲು ಖರೀದಿ ಮಾಡುತ್ತಾರೆ. ಅನಿವಾರ್ಯವಾಗಿ ರೈತ ಕೊಟ್ಟು ಮತ್ತೆ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸೆವಾನಗರ ಗ್ರಾಮ ಘಟಕದ ಅಧ್ಯಕ್ಷ ಕಲ್ಲಪ್ಪ ಲಮಾಣಿ ಕಾರ್ಯಕ್ರಮದ ಮುಖ್ಯ ಅತಿಥಿ ಗಂಗಣ್ಣ ಎಲಿ. ಚಿಕ್ಕಪ್ಪ ಚತ್ರ ದ. ಮೌನೇಶ್ ಕಮ್ಮಾರ. ಕೆ ವಿ ದೊಡ್ಡಗೌಡ್. ಜಾನ್ ಪುನೀತ್ ಶಂಕರ್ ಮರಗಾಲ. ಹನುಮಂತಪ್ಪ ಕೆಂಗೊಂಡ. ಮಲ್ಲಪ್ಪ ಲಮಾಣಿ. ಪರಮೇಶ್ ನಾಯಕ್. ಹಾಗೂ ಸೇವಾನಗರ ಗ್ರಾಮ ಘಟಕದ ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರು ಶಂಕ್ರ್ಪ ಲಮಾಣಿ ಖಜಾಂಚಿ ಪರಮೇಶ್ ಪಿ ನಾಯಕ್ ಕಾರ್ಯಾಧ್ಯಕ್ಷರು ಪ್ರಕಾಶ್ ಲಮಾಣಿ ಕಾರ್ಯದರ್ಶಿ ಈಶ್ವರ್ ನಾ ಲಮಾಣಿ ಹಾಗೂ ಮತ್ತು ಸೇವಾ ನಗರ ರೈತ ಸಂಘದ ಸದಸ್ಯರು ಹಾಗೂ ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 