ಬೆಳಗಾವಿಯಲ್ಲಿ ಸಮರ್ಥನಂ ಸಂಸ್ಥೆಯ ನೂತನ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಉದ್ಘಾಟನೆ
Inauguration of Samarthanam's new training center and residential facility in Belagavi
ಲೋಕದರ್ಶನ ವರದಿ
ಬೆಳಗಾವಿ 26: ನಗರ ಪ್ರದೇಶದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿ ಶಾಖೆಯ ನೂತನ ತರಬೇತಿ ಕೇಂದ್ರ ಹಾಗೂ ವಸತಿ ನಿಲಯವನ್ನು ಭಾನುವಾರ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ವಾಸ್ತು ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ (ಐಎಎಸ್) ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಬೆಳಗಾವಿ ಶಾಖೆಯ ಮುಖ್ಯಸ್ಥ ಅರುಣ್ ಕುಮಾರ್ ಎಂ.ಜಿ. ಅತಿಥಿಗಳನ್ನು ಸ್ವಾಗತಿಸಿದರು.
ಸಮರ್ಥನಂ ಸಂಸ್ಥೆಯ ಸಂಸ್ಥಾಪಕ-ವ್ಯವಸ್ಥಾಪಕ ಟ್ರಸ್ಟಿ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ ಮಾತನಾಡಿ, ಸಂಸ್ಥೆಯ ಆರಂಭದಿಂದ ಇಂದಿನವರೆಗೆ ನಡೆದ ಸೇವಾ ಪಯಣವನ್ನು ವಿವರಿಸಿದರು. ತಮ್ಮ ಬಾಲ್ಯದ ಅನುಭವಗಳು, ಅಂಗವಿಕಲರ ಸೇವೆಗೆ ಪ್ರೇರಣೆಯಾದ ಸಂದರ್ಭಗಳು ಹಾಗೂ ಸಂಸ್ಥೆಯ ಬೆಳವಣಿಗೆಯ ಕುರಿತು ಮನಮುಟ್ಟುವಂತೆ ತಿಳಿಸಿದರು.
“ನಾನು ಕೂಡ ಬೆಳಗಾವಿ ಜಿಲ್ಲೆಯವನಾಗಿದ್ದು, ಬೆಳಗಾವಿಯೊಂದಿಗೆ ವಿಶೇಷ ನಂಟಿದೆ. ಬೆಳಗಾವಿ ಶಾಖೆಗೆ ಶಾಶ್ವತ ಸ್ವಂತ ಕಟ್ಟಡ ನಿರ್ಮಿಸುವ ಕನಸಿದೆ. ಮುಂದಿನ ದಿನಗಳಲ್ಲಿ ವಾಸ್ತು ಹೋಮ ಹಾಗೂ ಪೂಜೆಯನ್ನು ನಮ್ಮದೇ ಕಟ್ಟಡದಲ್ಲಿ ನೆರವೇರಿಸುವ ಆಶಯವಿದೆ,” ಎಂದು ಹೇಳಿದರು.
ಈ ವೇಳೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರಿಗೆ ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ರಾಹುಲ್ ಜಾರಕಿಹೊಳಿ, ಸಮರ್ಥನಂ ಸಂಸ್ಥೆ ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ತರ ಬದಲಾವಣೆ ತರುತ್ತಿದೆ ಎಂದು ಶ್ಲಾಘಿಸಿದರು.
“ಸಂಸ್ಥೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ ಹಾಗೂ ಪುನರ್ವಸತಿ ಸೇರಿದಂತೆ ಸಮಗ್ರ ಸೇವೆಗಳನ್ನು ಒದಗಿಸುತ್ತಿದೆ. ಸಂಸ್ಥೆಯ ಕಾರ್ಯ ಇನ್ನಷ್ಟು ವಿಸ್ತರಿಸಲಿ. ನಮ್ಮ ಕುಟುಂಬ ಹಾಗೂ ವೈಯಕ್ತಿಕ ಸಹಕಾರ ಸದಾ ಸಂಸ್ಥೆಯೊಂದಿಗಿರುತ್ತದೆ,” ಎಂದು ಭರವಸೆ ನೀಡಿದರು.
ಸಮಾಜಸೇವಕ ಹಾಗೂ ಪೋದಾರ್ ಬ್ರದರ್ಸ್ ಜುವೆಲ್ಲರ್ಸ್ ನಿರ್ದೇಶಕ ಅನಿಲ್ ಎಂ. ಪೋದಾರ್ ಮಾತನಾಡಿ, ಕಳೆದ 30ಹಿ40 ವರ್ಷಗಳಿಂದ ಶ್ರವಣದೋಷ ಹಾಗೂ ದೃಷ್ಟಿದೋಷ ಹೊಂದಿರುವವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನುಭವವನ್ನು ಹಂಚಿಕೊಂಡರು.
“ಸಮರ್ಥನಂ ಸಂಸ್ಥೆ ಪರಿಣಾಮಕಾರಿ ರೀತಿಯಲ್ಲಿ ಹೆಚ್ಚಿನ ಜನರಿಗೆ ಸೇವೆ ತಲುಪಿಸುತ್ತಿದೆ. ಸಂಸ್ಥೆಯ ಕಾರ್ಯ ಮತ್ತಷ್ಟು ಬೆಳೆಯಲಿ. ನಮ್ಮ ಕುಟುಂಬ ಹಾಗೂ ಪೋದಾರ್ ಟ್ರಸ್ಟ್ ವತಿಯಿಂದ ಮುಂದೆಯೂ ಸಂಪೂರ್ಣ ಬೆಂಬಲ ನೀಡುತ್ತೇವೆ,” ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಉದಯಕುಮಾರ್ ವೈ.ಬಿ., ಸಮಾಜಸೇವಕ ಅಮಿತ್ ರಾಜಪೂತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುನೀತಾ ದೇಸಾಯಿ ನಿರೂಪಿಸಿದರು. ದೀಪಾ ಇಟಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 