ಬನಹಟ್ಟಿಯಲ್ಲಿಂದು ತಾಲೂಕಾ ಛಾಯಾಗ್ರಾಹಕರ ಸಂಘದ ಉದ್ಘಾಟನಾ ಸಮಾರಂಭ
Inauguration ceremony of the Taluk Photographers' Association in Banahatti today
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಬಕವಿ-ಬನಹಟ್ಟಿ ತಾಲೂಕಾ ಛಾಯಾಗ್ರಾಹಕರ ಸಂಘದ ಉದ್ಘಾಟನಾ ಸಮಾರಂಭ ಶನಿವಾರ ದಿ. 23 ರಂದು ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜರುಗಲಿದೆ. ಸಮಾರಂಭದ ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆಯನ್ನು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು ನೆರವೆರಿಸುವರು. ಅಧ್ಯಕ್ಷತೆಯನ್ನು ರುದ್ರ್ಪ ಯಡಹಳ್ಳಿ ವಹಿಸುವರು. ಮಳಿಗೆ ಉದ್ಘಾಟನೆಯನ್ನು ಜೋತಿಷಿ ಶಂಕರ ಗುರೂಜಿ, ನಾಮಫಲಕದ ಉದ್ಘಾಟನೆ ಬಾಳಕೃಷ್ಣ ಮಾಳವದೆ ಅವರಿಂದ ಜರುಗುವುದು. ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜ್ಯ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಹಿರೇಮಠ, ಬಾಗಲಕೋಟೆ ಜಿಲ್ಲಾಧ್ಯಕ್ಷ ಜಗದೀಶ ಅಂಬಿಗೇರ, ಜಮಖಂಡಿ ತಾಲೂಕಾಧ್ಯಕ್ಷ ಹಾಸೀಮಸಾಬ ಜಮಖಂಡಿ ಆಗಮಿಸಲಿದ್ದಾರೆ. ನಿವೃತ್ ಹಿರಿಯ ಛಾಯಾಗ್ರಾಹಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆಯಂದು ಸಂಘದ ನಿರ್ದೇಶಕರಾದ ಮಾಧವಾನಂದ ಪ್ರಭು ಕೋಪರ್ಡೆ, ಪ್ರವೀಣ ಜಯನ್ನವರ, ಶಿವಲಿಂಗಪ್ಪ ಜಂಬಗಿ, ಲಕ್ಷ್ಮೀಕಾಂತ ಮೋಕಾಶಿ, ಸಂತೋಷ ಸುಣಧೋಳಿ, ರಾಜು ಪಿಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 