ಪಟ್ಟಣದ ಜ್ಯೋತಿ ನಗರದಲ್ಲಿ ರಾಜ್ಯದ ಮೇಲ್ಚುಣಿ ನಾಯಕ ಲಕ್ಷಣ ಸವದಿಯವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗಾಣಿಗ ಸಮಾಜದ ವತಿಯಿಂದ ಪ್ರತಿಭಟನೆ
In Jyoti Nagar of the town, a protest was held by the Ganiga Samaj demanding that the state's top le
ಲೋಕದರ್ಶನ ವರದಿ
ಸಿಂದಗಿ 09: ಪಟ್ಟಣದ ಜ್ಯೋತಿ ನಗರದಲ್ಲಿ ರಾಜ್ಯದ ಮೇಲ್ಚುಣಿ ನಾಯಕ ಲಕ್ಷಣ ಸವದಿಯವರಿಗೆ ಸಚಿವ ಸ್ಥಾನ ನೀಡುವಂತೆ ಗಾಣಿಗ ಸಮಾಜದವತಿಯಿಂದ ಪ್ರತಿಭಟನೆ ನಡೆಸಿ ಸರಕಾರಕ್ಕೆ ಆಗ್ರಹಿಸಿದರು. ಈ ಸಂದರ್ಬದಲ್ಲಿ ಸಮಾಜದ ಮುಖಂಡ ಬಿ.ಎಚ್.ಬಿರಾದಾರ, ತಾಲೂಕು ಅದ್ಯಕ್ಷ ವಿರುಪಾಕ್ಷಪ್ಪ ಗಂಗನಳ್ಳಿ, ಸಂತೋಷ ಬಿರಾದಾರ ಮಾತನಾಡಿ, ಕಳೇದ ಬಿಜೆಪಿ ಪಕ್ಷದಲ್ಲಿದ್ದ ಲಕ್ಷಣ ಸವದಿಯವರನ್ನು ಕಾಂಗ್ರೆಸ್ ಪಕ್ಷ ಸಂಘಟನೆಗೆ ಕರೆತಂದು ಅವರನ್ನು ಸಚಿವ ಸ್ಥನದಿಂದ ವಂಚಿತರನ್ನಾಗಿ ಮಾಡಿ ಅನ್ಯಾಯ ಮಾಡಿದ್ದರು ಕೂಡಾ ಪಕ್ಷ ಸಂಘಟನೆಯಲ್ಲಿ ಮಾಡುವಲ್ಲಿ ಹಿಂಜೆರೆಯದೇ ಅವರಿಗೆ ನೀಡಿದ ಜವಾಬ್ದಾರಿಗಳನ್ನು ನಿಬಾಯಿಸಿ ಪಕ್ಷ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಂತವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಚಿವ ಸಂಪುಟದ 2 ನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಿ ಸಮಾಜಕ್ಕಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಬಸವರಾಜ ಸಜ್ಜನ ಮಾತನಾಡಿ, ಕಾಂಗ್ರೆಸ್ ಪಕ್ಷ ಸಿದ್ದಾಂತಕ್ಕೆ ಕಟ್ಟುಬಿದ್ದು ಬಿಜೆಪಿ ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನು ತೊರೆದು ಬಂದ ರಾಜ್ಯದ ಮುನ್ನಲೆ ನಾಯಕ ಲಕ್ಷಣ ಸವದಿಯವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕಡೆಸುತ್ತಿರುವ ನಾಯಕರ ದೊರಣೆಯನ್ನು ಗಾಣಿಗ ಸಮಾಜ ಉಗ್ರವಾಗಿ ಖಂಡಿಸುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಚಿವ ಸಂಪುಟದ ಮೊದಲನೇ ಹಂತದ ಪಟ್ಟಿಯಲ್ಲಿ ಕೈಬಿಟ್ಟಿದ್ದು ಸರಿಪಡಿಸಲು 2ನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಿ ಸಮಾಜವನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಶರಣಗೌಡ ಪಾಟೀಲ ಕನ್ನೋಳ್ಳಿ, ನಾನಾಗೌಡ ಪಾಟೀಲ, ನಿಂಗಣ್ಣ ಮುರಡಿ, ಗೋಲ್ಲಾಳಪ್ಪಗೌಡ ಬಿರಾದಾರ ಚಿಕ್ಕಸಿಂದಗಿ, ಸಂಗು ಹಿಪ್ಪರಗಿ, ರಾಜು ಸಾಹುಕಾರ ನಗನೂರ, ಮಡಿವಾಳಪ್ಪ ಮನ್ನಾಪುರ, ಮಹಾಂತಗೌಡ ನಾರಾಯಣಪುರ, ಮಲಕಪ್ಪ ಮಳ್ಳಿ, ಶಂಕ್ರೆಪ್ಪ ಹೆಬ್ಬಾಳ, ಶಿವಪುತ್ರ ಬಿರಾದಾರ ಚಿಕ್ಕಸಿಂದಗಿ, ದತ್ತು ಹೆಬ್ಬಾಳ, ಸಿದ್ದು ಕುರನಳ್ಳಿ, ಸಂಗಮೇಶ ಪಾರಗೊಂಡ, ಸಿದ್ದನಗೌಡ ಬಿರಾದಾರ ಯಂಕಂಚಿ, ಆನಂದ ಕಂಠಿಗೊಂಡ, ದತ್ತುಗೌಡ ಬಿರಾದಾರ ಮನ್ನಾಪುರ, ಶಂಕರಗೌಡ ಹಚಡದ ಸೇರಿದಂತೆ ಅನೇಕರಿದ್ದರು.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 