ಮೊಹರಂ ಪ್ರಯುಕ್ತ ಇಮಾಮ್ ಹುಸೇನ್ ಆಸಾರೆ ಮುಬಾರಕ್ ದರ್ಶನ ಯಶಸ್ವಿ

ಮೊಹರಂ ಪ್ರಯುಕ್ತ ಇಮಾಮ್ ಹುಸೇನ್ ಆಸಾರೆ ಮುಬಾರಕ್ ದರ್ಶನ ಯಶಸ್ವಿ Imam Hussain's Mubarak Darshan on the occasion of Muharram was a success

  ಕೊಪ್ಪಳ 28 : ನಗರದ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿರುವ ಖಾನಖಾಯೆ ಖಾದ್ರಿಯ ಪೀಠ ಸಭಾಭವನದಲ್ಲಿ  ಶನಿವಾರ ಸಂಜೆ ವೇಳೆಗೆ  ತ್ಯಾಗ ಬಲಿದಾನದ ಪ್ರತೀಕ ಮೊಹರಂ ಪ್ರಯುಕ್ತ ಹಜರತ್ ಇಮಾಮ ಹುಸೇನ್ ಮತ್ತು ಹಜರತ್ ಇಮಾನ್  ಹಸನ್ ರವರ ಆಸಾರೆ ಮುಬಾರಕ್ ದರ್ಶನ ಹಾಗೂ ಅನ್ನ ಸಂತರೆ​‍್ಣ ಕಾರ್ಯಕ್ರಮ   ಖಾನಖಾಯೆ ಖಾದ್ರಿಯ ಪೀಠಾಧಿಪತಿ ಗಳಾದ ಧರ್ಮ ಗುರು ಹಜರತ್ ಸೈಯದ್ ಅಬ್ದುಲ್ ವಹಾಬ್ ಅಲಿಯಾಸ್ ಮುದಸಿರ್ ಪಾಶಾ ಖಾದ್ರಿ ಸಾಹೇಬ್ ಸಾಲ್ಗುಂದ ಶರೀಫ್ ಮತ್ತು ಗಡ್ಡೆ ಖಾದರ್ ಮುಕುಂದ ಶರೀಫನ ಗುರುಗಳಾದ ಹಜರತ್ ಸೈಯದ್ ಎಸ್ ಆರ್ ಖಾದ್ರಿ ಸಾಹೇಬ್ ರವರ ಜಂಟಿ  ದಿವ್ಯ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಜರುಗಿತು, 

ಸೈಯದ್ ಇಮ್ತಿಯಾಜ್ ಗಂಗಾವತಿ ಮತ್ತು ಸ್ನೇಹಿತರು , ಸದರ ಶಾಹ್ ವಾಲಿ ದರ್ಗಾ ಕಮಿಟಿಯ ಮುಖ್ಯಸ್ಥ ಸೈಯದ್ ನಾಸಿರುದ್ದೀನ್ ಹುಸೇನಿ, ಹಾಗೂ ಬಾಬಾ ಕಲಂದರ್ ಕಮ್ಯೂನಿಟಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಖಾದ್ರಿಯ ಪೀಠದ ಸೇವಕ ಜಾಕಿರ್  ಹುಸೇನ್ ಸಾಲಗುಂದ ಹಾಗೂ ಸಮುದಾಯದ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಅಲ್ಲದೆ ಬಜ್ಮೆ ಪೈಜಾನೆ ಖಾದ್ರಿಯಾ ಖಾನಖಾ ಖಾದ್ರಿಯಾ ನಿರ್ಮಿತಿ ಕೇಂದ್ರದ ಭಕ್ತ ಮಂಡಳಿಯ ಸದಸ್ಯರು ಸೇರಿ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸಿ ಗುರುಗಳ ಕೃಪೆಗೆ ಪಾತ್ರರಾದರು,

ಶನಿವಾರ ಸಂಜೆ ಅಸರ್ ನಮಾಜ್ ನಂತರ ಮಹಿಳೆಯರಿಗೆ ಪ್ರತ್ಯೇಕ ಆಸಾರೆ ಮುಬಾರಕ್ ದರ್ಶನ ಮತ್ತು ಅನ್ನ ಸಂತರೆ​‍್ಣ ವ್ಯವಸ್ಥೆ ಮಾಡಲಾಗಿತ್ತು ಅದೇ ದಿನ ಸಂಜೆ ಮಗರಿಬ್ ನಮಾಜ್ ನಂತರ ಪುರುಷರಿಗೆ  ಆಸಾರೆ ಮುಬಾರಕ್ ಮತ್ತು ದರ್ಶನದ ವ್ಯವಸ್ಥೆ ಮಾಡಲಾಗಿತ್ತು  ,  ಸಾರ್ವಜನಿಕರು ಭಕ್ತಾದಿಗಳು ಪುರುಷ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪ ಆಶೀರ್ವಾದ ಪಡೆದು ಕೊಂಡರು,  ಖಾದ್ರಿಯಾ ಪೀಠದ ಸೇವಕರು ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ಭಕ್ತ ಸಮೂಹದ ಅನೇಕರು ಪಾಲ್ಗೊಂಡಿದ್ದರು.