ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಸಾಧ್ಯವಾದಷ್ಟು ಸಮಾಜ ಮುಖಿ ದುಡಿದರೆ ಜನ್ಮ ಸಾರ್ಥಕ: ಸಿದ್ಧಾರ್ಥ ವಾಡೆನ್ನವರ
If you keep what you have given to yourself and work for the benefit of others as much as possible,
ಪಾಲಬಾವಿ 05 : ಮನುಷ್ಯ ಜನ್ಮವು ಹುಟ್ಟಿಬರುವುದು ದುರ್ಲಭ. ಮನುಷ್ಯ ಜನ್ಮಕ್ಕೆ ಬಂದಮೇಲೆ ದಾನ, ಧರ್ಮ, ಪರೋಪಕಾರ ಮಾಡಿದರೆ ಮನುಷ್ಯ ಜನ್ಮವು ಸಾರ್ಥಕವಾಗುವುದು. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬಂತೆ ನಾವು ಬಚ್ಚಿಟ್ಟ ಹಣವು ಮುಂದೊಂದು ದಿನ ಬೇರೆಯವರ ಪಾಲಗಬಹುದು. ಆದರೆ ನಾವುಸಂಪಾಡಿಸಿದ ಹಣವನ್ನು ಸಾಧ್ಯವಾದಷ್ಟು ದಾನ, ಧರ್ಮ, ಪರೋಪಕಾರಕ್ಕೆ ಕೊಟ್ಟಂತಹ ಹಣವು ಮುಂದೊಂದು ದಿನವು ನಮ್ಮನ್ನು ಕಾಪಾಡುತ್ತದೆ. ಬಡವರ, ದುರ್ಬಲರ, ನಿರ್ಗತಿಕರ, ಅಸಹಾಯಕರ ಕಣ್ಣೀರು ಒರೆಸಬೇಕು. ಸಮಾಜ ಸೇವೆಗೆಂದು ನಾನು ಕುರ್ಚಿ ಮತಕ್ಷೇತ್ರವನ್ನು ಮನಸಾರೆ ಆಯ್ಕೆ ಮಾಡಿಕೊಂಡಿದ್ದೇನೆ ನನ್ನಿಂದಷ್ಟು ಸಾಧ್ಯವೊ ಅಷ್ಟು ಬಡವರಿಗೆ ನಿರ್ಗತಿಕರಿಗೆ ಆಹಾರದಕ್ಕಿಟ್ಟು ಕೊಡುವ ಯೋಜನೆಯನ್ನು ಹಾಕಿಕೊಂಡಿದ್ದೇನೆ.
ಹಸಿವು ಮುಕ್ತ ಗ್ರಾಮ ಆಗಬೇಕು ಎನ್ನುವುದು ನನ್ನ ಬಯಕೆ ಎಂದು ಸಮಾಜ ಸೇವಕ ಸಿದ್ದಾರ್ಥ ವಾಡೆನ್ನವರ ಹೇಳಿದರು.ಅವರು ಕುಡಚಿ ಮತಕ್ಷೇತ್ರದ ಸುಲ್ತಾನಪುರ ಗ್ರಾಮದಲ್ಲಿ ಗುರುವಾರ ದಿ.3 ರಂದು ಗುರುವಾರ ಗ್ರಾಮದ ಬಡವರು, ದುರ್ಬಲರ, ಅಸಹಾಯಕರ ಮನೆಗಳಿಗೆ ಭೇಟಿ ನೀಡಿ ದಿನಸಿ ಕಿಟ್ ಗಳ ವಿತರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರಿ, ಈರ್ಪ ಚೌಗಲಾ, ದುಂಡಪ್ಪ ಪಾಟೀಲ, ಮಹೇಶ ಚೌಗಲಾ, ದುಂಡಯ್ಯ ಹಿರೇಮಠ, ಅಖಿಲೇಶ ಮಿರಜ್ಕರ್, ನಾಗಪ್ಪ ಮಾದರ, ಬರಮಪ್ಪ ಹುಬರಟ್ಟಿ, ಹಸನ್ ಮುಜಾವರ, ದುಂಡೇಶ ಹಿರೇಮಠ, ಶಂಕರ ಗೋಕಾಕ ಇತರರು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 