ಮಕ್ಕಳ ಪ್ರತಿಭೆಯನ್ನು ಗುರುತಿಸಿ ಆಸಕ್ತಿಯನ್ನು ಮೂಡಿಸಿ ಪ್ರೋತ್ಸಾಹಿಸಿ : ಶ್ರೀದೇವಿ ಹೂಗಾರ
Identify children's talents, spark interest and encourage them: Sridevi Hugara
ಹರಪನಹಳ್ಳಿ 18: ನೃತ್ಯವು ಕೇವಲ ಕಲೆಯಷ್ಟೇ ಅಲ್ಲ, ವ್ಯಕ್ತಿತ್ವ ವಿಕಸನಕ್ಕೂ ಶಕ್ತಿಯುತ ಮಾಧ್ಯಮವಾಗಿದೆ ಎಂದರು. “ಸದೃಢ ದೇಹ ಮತ್ತು ಸದೃಢ ಮನಸ್ಸು ನೃತ್ಯಕ್ಕೆ ಅತ್ಯವಶ್ಯಕ. ಮನಸ್ಸು ಸಮತೋಲನದಲ್ಲಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ಮಕ್ಕಳಲ್ಲಿ ಬಾಲ್ಯದಲ್ಲೇ ಪ್ರತಿಭೆಯನ್ನು ಗುರುತಿಸಿ ಆಸಕ್ತಿಯನ್ನು ಮೂಡಿಸಿ ಪ್ರೋತ್ಸಾಹಿಸಬೇಕು ಎಂರು ಬೀದರ್‌ನ ಮಾಸ್ಟರ್ ಮೈಂಡ್ ಟ್ರೈನರ್ ಶ್ರೀದೇವಿ ಹೂಗಾರ ಅಭಿಪ್ರಾಯ ಪಟ್ಟರು.
ಪಟ್ಟಣದ ನಟರಾಜ ಕಲಾಭವನದಲ್ಲಿ ಸಂಕರ್ಷಣ ನೃತ್ಯಾಲಯ (ರಿ.) ಹರಿಹರ, ಶಾಖೆಹಿಹರಪನಹಳ್ಳಿ ವತಿಯಿಂದ ಆಯೋಜಿಸಲಾದ ಮಕ್ಕಳ ಭರತನಾಟ್ಯ “ನೃತ್ಯ ನಮನ ಹಿ 2026” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾವಹಿರಾಗಹಿತಾಳಗಳ ಮನಮೋಹಕ ಸಮಾಗಮದೊಂದಿಗೆ ಭರತನಾಟ್ಯ ಮಾಡಲಾಗುತ್ತದೆ. ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ ಮಗು ಬೌದ್ಧಿಕವಾಗಿ ಹಾಗೂ ಭಾವನಾತ್ಮಕವಾಗಿ ಬೆಳೆಯಬೇಕು. ಮಕ್ಕಳು ಮತ್ತು ಸಸಿ ಒಂದೇ ಹಿ ದೋಷ ಹುಡುಕುವುದಕ್ಕಿಂತ ಪ್ರತಿಭೆಯನ್ನು ಗುರುತಿಸುವ ಮನೋಭಾವ ಬೆಳೆಸಬೇಕು,” ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಕುಮಾರಿ ಸುಮಂಗಲ ಜೀ ಮಾತನಾಡಿ, “ಏಕಾಗ್ರತೆಗೆ ಸಂಗೀತ ಮತ್ತು ನೃತ್ಯ ಅತ್ಯಗತ್ಯ. ಭಾರತೀಯ ಕಲೆಗಳು ಪುರಾತನ ಸಂಪ್ರದಾಯದಿಂದ ಬಂದ ಅಮೂಲ್ಯ ಸಂಪತ್ತು. ಮೊಬೈಲ್ ಬಳಕೆಯಿಂದ ಕಲೆಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಪೋಷಕರು ಮಕ್ಕಳನ್ನು ಕಲೆಗಳತ್ತ ಪ್ರೇರೇಪಿಸಬೇಕು,” ಎಂದು ಮನದಟ್ಟು ಮಾಡಿದರು.
ಮುಖ್ಯ ಅತಿಥಿ ಶ್ರೀಮತಿ ಸಪ್ನ ಮಲ್ಲಿಕಾರ್ಜುನ ಮಾತನಾಡಿ, ಜಾತಿ, ಧರ್ಮ, ಭಾಷೆಗಳನ್ನು ಮರೆತು ಎಲ್ಲರೂ ಒಂದಾಗಿ ಮಾಡುವುದು ನೃತ್ಯ. “ಭಾವಹಿರಾಗಹಿತಾಳಗಳ ಸಮಾಗಮವೇ ಭರತನಾಟ್ಯ. ಇದು ನವರಸಗಳಿಂದ ಸಮೃದ್ಧವಾದ ಶ್ರೇಷ್ಠ ಕಲೆ. ಮಕ್ಕಳ ಮಾನಸಿಕ ಒತ್ತಡ ನಿವಾರಣೆಗೆ ಅವರನ್ನು ನೃತ್ಯ ಮತ್ತು ಸಂಗೀತದತ್ತ ಪ್ರೋತ್ಸಾಹಿಸಬೇಕು. ಶಾಲೆಗಳಲ್ಲಿ ಸಂಗೀತ, ನೃತ್ಯಕ್ಕೆ ಸಮಯ ಮೀಸಲಿಡಬೇಕು ಮತ್ತು ಹೆಚ್ಚಿನ ಮಹತ್ವ ನೀಡಬೇಕು,” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದೂಷಿ ರಾಧಾ ಭಾಸ್ಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್.ವಿ. ಹನುಮಂತರಾವ್ ಭಾಸ್ಕರ್ ಉಪಸ್ಥಿತರಿದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಕು. ರಜನಿ ಎಸ್. ಡಿ. ಅವರು ನೀಡಿದರು. ಸಂಕರ್ಷಣ ನೃತ್ಯಾಲಯದ ಧ್ಯೇಯ, ಉದ್ದೇಶ ಹಾಗೂ ಮಕ್ಕಳಲ್ಲಿ ನೃತ್ಯದ ಮೂಲಕ ಸಂಸ್ಕೃತಿ ಉಳಿಸಿ ಬೆಳೆಸುವ ಸಂಕಲ್ಪವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ, ಎಲ್ಲೇಶ್‌ೆಂ. ಮತ್ತು ಗಣ್ಯ ಅತಿಥಿಗಳಿಗೆ ಗೌರವ ಸಮರೆ್ಣ ಮಾಡಲಾಯಿತು. ಅಂತಿಮವಾಗಿ ಮಕ್ಕಳಿಂದ ಪ್ರದರ್ಶಿಸಲಾದ ಭರತನಾಟ್ಯ “ನೃತ್ಯ ನಮನ ಹಿ 2026” ನೃತ್ಯ ಕಾರ್ಯಕ್ರಮವು ಪ್ರೇಕ್ಷಕರ ಮನ ಗೆದ್ದು ಅಪಾರ ಮೆಚ್ಚುಗೆ ಗಳಿಸಿತು. ಅಕ್ಷತ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 