ಇಚಲಕರಂಜಿ ಆಕ್ಸಾನ್ ಆಸ್ಪತ್ರೆಯ ಸಾಧನೆ: ಮೂಗಿನ ಮೂಲಕ ಮೆದುಳಿನ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
Ichalkaranji Axon Hospital's achievement: Rare brain surgery through the nose successful
ಇಚಲಕರಂಜಿ ಆಕ್ಸಾನ್ ಆಸ್ಪತ್ರೆಯ ಸಾಧನೆ: ಮೂಗಿನ ಮೂಲಕ ಮೆದುಳಿನ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
ಕಾಗವಾಡ 29: ಮಹಾರಾಷ್ಟ್ರದ ಇಚಲಕರಂಜಿ ನಗರದ ಆಕ್ಸಾನ್ ಆಸ್ಪತ್ರೆಯಲ್ಲಿ ಆ. 21 ಮತ್ತು 22 ರಂದು ಎರಡು ಅಪರೂಪದ ಎಂಡೋಸ್ಕೋಪಿಕ್ ಟ್ರಾನ್ಸ್‌ನಾಸಲ್ ಮೆದುಳಿನ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ವೈಭವ ಚವ್ಹಾಣ ಅವರು ಯಶಸ್ವಿಯಾಗಿ ಮಾಡುವುದರೊಂದಿಗೆ ಕ್ಲಿಷ್ಟಕರ ಮೆದುಳು ಶಸ್ತ್ರಚಿಕಿತ್ಸೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಡಾ. ವೈಭವ್ ಚವ್ಹಾಣ ಮಾತನಾಡಿ, ಸಾಮಾನ್ಯವಾಗಿ, ತಲೆಬುರುಡೆಯನ್ನು ಕತ್ತರಿಸುವ ಮೂಲಕ ಮೆದುಳಿನ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಆದರೆ ಪಿಟ್ಯುಟರಿ ಗ್ರಂಥಿ ಶಸ್ತ್ರಚಿಕಿತ್ಸೆಗಳು ಮತ್ತು ಸಿಎಸ್‌ಎಫ್ ರೈನೋರಿಯಾದಂತಹ ವಿಶೇಷ ಶಸ್ತ್ರಚಿಕಿತ್ಸೆಗಳನ್ನು ಎಂಡೋಸ್ಕೋಪಿ ಬಳಸಿ, ಮೂಗಿನ ಮೂಲಕ ಮಾಡಬಹುದು. ಇದು ರೋಗಿಯ ಅಸ್ವಸ್ಥತೆ ಮತ್ತು ಅಪಾಯವನ್ನು ಕಡಿಮೆ ಮಾಡುತ್ತದೆ.
ಆ. 21 ರಂದು 55 ವರ್ಷದ ವ್ಯಕ್ತಿಯೊಬ್ಬರಿಗೆ ಪಿಟ್ಯುಟರಿ ಗ್ರಂಥಿಯ ಮೂಗಿನ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆಗೆ ಮುನ್ನ ಅವರ ದೃಷ್ಟಿ ಕ್ಷಿಣಿಸಿತ್ತು. ಆದಾಗ್ಯೂ, ಶಸ್ತ್ರಚಿಕಿತ್ಸೆಯ ನಂತರ ಅವರ ದೃಷ್ಟಿ ಸುಧಾರಿಸಿದ್ದು, ಈಗ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಲಾಗಿದೆ.
ಇನ್ನೂ ಆ. 22 ರಂದು 25 ವರ್ಷದ ವ್ಯಕ್ತಿಯೊಬ್ಬರಿಗೆ ಮತ್ತೊಂದು ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. ತಲೆಗೆ ಬಿದ್ದ ಹೊಡೆತದಿಂದ ಬಲಗಣ್ಣಿನ ನರವೊಂದು ಸಂಕುಚಿತಗೊಂಡು, ದೃಷ್ಟಿ ಕಳೆದುಕೊಂಡಿದ್ದಲ್ಲದೇ ಮೂಗಿನ ಮೂಲಕ ದ್ರವ ಸೋರಿಕೆಯಾಗುವ ಸಮಸ್ಯೆಯೂ ಉದ್ಭವಿಸಿತ್ತು. ಅವರಿಗೆ ಶಸ್ತ್ರಚಿಕಿತ್ಸೆಯ ಮೂಲಕ (ಎಂಡೋಸ್ಕೋಪಿಕ್ ಆಪ್ಟಿಕ್ ನರಗಳ ಡಿಕಂಪ್ರೆಷನ್) ನರವನ್ನು ತೆರೆದು, ಮೂಗಿನಿಂದ ಬರುವ ನೀರನ್ನು (ರೈನೋರಿಯಾ ದುರಸ್ತಿ ಮಾಡಿ) ನಿಲ್ಲಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ, ರೋಗಿಯ ಮೂಗಿನಿಂದ ದ್ರವ ಬರುವುದು ಸಂಪೂರ್ಣವಾಗಿ ನಿಂತುಹೋಗಿದೆ. ಮತ್ತು ಬಲಗಣ್ಣಿನ ದೃಷ್ಟಿ ಸುಧಾರಿಸತೊಡಗಿದೆ.
ಭವಿಷ್ಯದಲ್ಲಿ ಅವರ ದೃಷ್ಟಿ ಮತ್ತಷ್ಟು ಸುಧಾರಿಸುವ ಲಕ್ಷಣಗಳು ಇವೆ ಎಂದು ಡಾ. ವೈಭವ ಚವ್ಹಾಣ ತಿಳಿಸಿದ್ದಾರೆ. ಡಾ. ವೈಭವ ಚವ್ಹಾಣ ಅವರಿಗೆ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ಸಂದೇಶ ಬಾಗಡಿ, ಅರಿವಳಿಕೆ ತಜ್ಞ ಡಾ. ಶರಧ ಮಿಥಾರಿ, ಡಾ. ಮಧುರಾ ದೇಶಪಾಂಡೆ, ಡಾ. ತ್ರಿಶಾ ಚವ್ಹಾಣ ಅವರು ಸಾಥ ನೀಡಿದ್ದಾರೆ. ಇಚಲಕರಂಜಿ ನಗರದಲ್ಲಿ ಇಂತಹ ಅಪರೂಪದ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಆಕ್ಸನ್ ಆಸ್ಪತ್ರೆಯ ಸಾಧನೆಗೆ ಡಾ. ವೈಭವ ಚವ್ಹಾಣ ಮತ್ತು ಅವರ ತಂಡಕ್ಕೆ ಅಭಿನಂದನೆಗಳು ಹರಿದು ಬರುತ್ತಿವೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 