ಕುರ್ಚಿಗಾಗಿ ಜನರಿಗೆ ಮೋಸ ಮಾಡುವುದಿಲ್ಲ-ಶಾಸಕ ಮಾನೆ

 ಕುರ್ಚಿಗಾಗಿ ಜನರಿಗೆ ಮೋಸ ಮಾಡುವುದಿಲ್ಲ-ಶಾಸಕ ಮಾನೆ I won't cheat people for a seat - MLA Mane

ಲೋಕದರ್ಶನ ವರದಿ 

ಕುರ್ಚಿಗಾಗಿ ಜನರಿಗೆ ಮೋಸ ಮಾಡುವುದಿಲ್ಲ-ಶಾಸಕ ಮಾನೆ 

ಹಾನಗಲ್ 07: ಕುರ್ಚಿ ಉಳಿಸಿಕೊಳ್ಳಲು ಜನರಿಗೆ ಮೋಸ ಮಾಡುವುದಿಲ್ಲ, ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ. ಯಾವುದೇ ಸಂದರ್ಭದಲ್ಲಿ ಸಹ ಜನರನ್ನು ಅಗೌರವದಿಂದ ಕಾಣುವುದಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

   ತಾಲೂಕಿನ ಬಾಳಿಹಳ್ಳಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು. ಹಾನಗಲ್ ಕ್ಷೇತ್ರದ ಜನರ ಋಣದಲ್ಲಿದ್ದೇನೆ. ಅವರ ಬಗೆಗೆ ಹೃದಯದಲ್ಲಿ ಪ್ರೀತಿ ಹೊಂದಿದ್ದೇನೆ. ಕೆಲಸ, ಕಾರ್ಯಗಳಿಗೆ ಜನ ನನ್ನ ಬಳಿ ಹತ್ತಾರು ಬಾರಿ ತಿರುಗಾಡಬಾರದು. ಹಾಗಾಗಿ ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತೇನೆ. ಸುಳ್ಳು ಹೇಳುವುದು, ವಿನಾಕಾರಣ ಸತಾಯಿಸುವುದನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದರು.  

  ಮುಖಂಡ ಪರಸಣ್ಣ ಮಡಿವಾಳರ ಮಾತನಾಡಿದರು.  ಇದೇ ಸಂದರ್ಭದಲ್ಲಿ ಮುಖಂಡರಾದ ಭೀಮಪ್ಪ ಮಡಿವಾಳರ, ನಿಂಗಪ್ಪ ಮಡಿವಾಳರ, ಮಂಜಪ್ಪ ಮಡಿವಾಳರ, ನಾಗಪ್ಪ ಮಡಿವಾಳರ, ಧರ್ಮೇಂದ್ರ​‍್ಪ ದೊಡ್ಡಮನಿ, ಮಂಜುನಾಥ ಕೂಸನೂರ, ಪ್ರಕಾಶ ಮಡಿವಾಳರ ಸೇರಿದಂತೆ ಇನ್ನೂ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾದರು. 

  ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ತಾಪಂ ಕೆಡಿಪಿ ಸದಸ್ಯ ರಾಜಕುಮಾರ ಜೋಗಪ್ಪನವರ, ಮುಖಂಡರಾದ ಈರಣ್ಣ ಬೈಲವಾಳ, ದೇವರಾಜ ಪುರ್ಲಿ, ಶಿವಣ್ಣ ಬೈಚವಳ್ಳಿ, ಫಕ್ಕೀರ​‍್ಪ ಗೊಟಗೋಡಿ, ಶಂಭು ಬೈಚವಳ್ಳಿ ಸೇರಿದಂತೆ ಇನ್ನೂ ಹಲವರು ಇದ್ದರು.