ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸುವೆ: ಶಾಸಕ ಎಲ್‌. ಕೃಷ್ಣನಾಯಕ್

ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸುವೆ: ಶಾಸಕ ಎಲ್‌. ಕೃಷ್ಣನಾಯಕ್ I will respond to journalists' issues by becoming their voice: MLA L. Krishna Nayak

 ಹೂವಿನ ಹಡಗಲಿ 28:  ಪತ್ರಕರ್ತರ ಸಂಕಷ್ಟಗಳಿಗೆ ಧ್ವನಿಯಾಗಿ ಸ್ಪಂದಿಸುವುದಾಗಿ ಶಾಸಕ ಎಲ್‌. ಕೃಷ್ಣನಾಯಕ್ ಹೇಳಿದರು.  ಪಟ್ಟಣದ ಜಿ.ಬಿ.ಆರ್‌. ಮಹಾವಿದ್ಯಾಲಯದ ಹಾನಗಲ್ ಕುಮಾರೇಶ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಸರ್ಕಾರ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಪತ್ರಕರ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ವಿಧಾನಸಭಾ ಕಲಾಪದಲ್ಲಿ ಒತ್ತಾಯಿಸುವುದಾಗಿ ಅವರು ಭರವಸೆ ನೀಡಿದರು.  

ಕಾರ್ಯಕ್ರಮದಲ್ಲಿ ಡಾ. ಹಿರಿಶಾಂತವೀರಸ್ವಾಮಿ, ಅಭಿನವ ಚೆನ್ನಬಸವ ಸ್ವಾಮಿ, ಮಳೆಮಲ್ಲೇಶ್ವರ ಸ್ವಾಮಿ, ಧರ್ಮದರ್ಶಿ ರಾಕೇಶ್ ಅಯ್ಯ ರಾಮಸ್ವಾಮಿ, ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.  ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಎಂ. ರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಈ ಸಂದರ್ಭದಲ್ಲಿ ಪತ್ರಕರ್ತರಾದ ವೀರೇಶ್ ಕಲ್ಮಠ, ಎಚ್‌. ಹನುಮಂತಪ್ಪ, ಹಣ್ಣಿ ಶಶಿಧರ್, ಹಾಲೇಶ್ ಗಳಗನಾಥ, ಪೂಜಾರ ಮಲ್ಲಿಕಾರ್ಜುನ, ಮಹಾಬಲೇಶ್ವರ ದಿವಾಕರ್, ಜೆ. ಶಿವರಾಜ್, ಬಿ. ಜಯಲಕ್ಷ್ಮಿ, ಮಡ್ಡಿ ಗೊಣಿಸ್ವಾಮಿ, ಡಾ. ನೆಪೋಲಿಯನ್, ಚಂದ್ರ​‍್ಪ ತಳಕಲ್, ಹಾಲೇಶ್ ಗುಡಿಹಳ್ಳಿ, ಎಚ್‌. ಸಿದ್ದಪ್ಪ, ಮುಕುಂದಗೌಡ, ಸುರೇಶ್ ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಪತ್ರಕರ್ತ ಎಂ.ಪಿ.ಎಂ. ಶಿವಪ್ರಕಾಶ್ ಅವರಿಗೆ ಮಾಧ್ಯಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಎಂಟನೇ ರ್ಯಾಂಕ್ ಪಡೆದ ಜಿ. ಸುಶೀಲಾ ರವರಿಗೆ ವಿಶೇಷ ಸನ್ಮಾನ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.