130ನೇ ದಿನದ ಬಲ್ಡೋಟ ಹಟಾವೋ ಧರಣಿಗೆ ಮಾನವ ಬಂಧುತ್ವ ವೇದಿಕೆ ಬೆಂಬಲ ರಾಜ್ಯದ ಗಮನ ಸೆಳೆದ ಜೀವ ಕಾಳಜಿ ಹೋರಾಟ: ರವಿ ನಾಯ್ಕರ್
Human Fraternity Forum supports 130th day of Baldota Hatao sit-in, life-saving struggle draws state'
ಕೊಪ್ಪಳ 10: ನಗರಸಭೆ ಮುಂದಿನ ಬಲ್ಡೋಟ ಕಾರ್ಖಾನೆ ವಿರೋಧಿ 130ನೇ ದಿನದ ಧರಣಿ ಬೆಂಬಲಿಸಿ ಮಾನವ ಬಂಧುತ್ವ ವೆದಿಕೆ ಸ್ಥಾಪಕ ಸಂಚಾಲಕರಾದ ರವಿ ನಾಯ್ಕರ್ ಮಾತನಾಡಿದರು. ಅವರು ಮುಂದುವರಿದು ಮಾತನಾಡಿ ಈ ಹೋರಾಟ ಜೀವಪರವಾಗಿದ್ದು, ಇಲ್ಲಿನ ಧುರೀಣರು ಗಂಭೀರವಾಗಿ ತೆಗೆದುಕೊಂಡು ಸರ್ಕಾರಕ್ಕೆ ಮನವರಿಕೆ ಮಾಡಿ ಮಾಲಿನ್ಯ ಮಾಡುವ ಯಾವುದೇ ಕಾರ್ಖಾನೆಗಳಿದ್ದರೆ ಮುಚ್ಚಿಸಲಿ. ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ಮಾನವ ಬಂಧುತ್ವ ವೇದಿಕೆ ಹೋರಾಟಕ್ಕೆ ಬೆಂಬಲಿಸುತ್ತದೆ. ಜನ, ಜಾನುವಾರಗಳಿಗೆ ಕೆರೆ ಮುಕ್ತಗೊಳಿಸಬೇಕು. ಹೋರಾಟಕ್ಕೆ ಜಯ ಸಿಗಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಟಿ. ರತ್ನಾಕರ ಮಾತನಾಡಿದರು.ಕಾಂಗ್ರೆಸ್ ಪಕ್ಷದ ವಕ್ತಾರರಾದ ಶೈಲಜಾ ಹಿರೇಮಠ ಮಾತನಾಡಿ, ಬಲ್ಡೋಟ ತೊಲಗಿಸಿ ಎಲ್ಲ ನಾಗರಿಕರಿಗೆ ಸಂಬಂಧಿಸಿದ ಹೋರಾಟ. ಉದ್ಯೋಗ ಸೃಷ್ಟಿಸಲು ಕಾರ್ಖಾನೆಗಳೇ ಬೇಕಿಲ್ಲ. ಸರಕಾರ ಹೋರಾಟಕ್ಕೆಸ್ಪಂದಿಸಬೇಕು. ಜೀವ ಇದ್ದರೆಜೀವನ. ಬಜೆಟ್ಟಿನಲ್ಲಿ ಕ್ಯಾನ್ಸರ್ಆಸ್ಪತ್ರೆ ಆಗಿದೆ ಎನ್ನುವುದು ಸಾಧನೆಯಲ್ಲ. ಜನ ಒಗ್ಗಟ್ಟಾಗಿ ಹೋರಾಡಬೇಕು. ದೆಹಲಿ ರೈತರಹೋರಾಟದಂತೆ ಹೋರಾಡಲು ಮುಂದೆ ಬರಬೇಕು. ಜಿಲ್ಲಾ ಉಸ್ತುವಾರಿಸಚಿವರು, ಶಾಸಕರು, ಸಂಸದರುಜನರ ನೋವಿನ ಧ್ವನಿ ಕೇಳಬೇಕು. ಈ ಕಾರ್ಖಾನೆಗಳ ಮಾಲಿನ್ಯದಿಂದಲೇ ಹಿಮ ಬೆಟ್ಟಗಳು ಕರಗುತ್ತಿವೆ. ಚೀನಾಪ್ರಕೃತಿ ಕಾಪಾಡುತ್ತಿದೆ. ತಮ್ಮ ಜನಗಳಿಗೆ ತೊಂದರೆ ಕೊಟ್ಟಿಲ್ಲ ಎಂದರು.
ಧರಣಿ ನೇತೃತ್ವವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಬೆಂಗಳೂರು ಚಲೋ ನಡೆಸಲು ಸಿದ್ಧರಾಗಿ ಎಂದು ಕರೆ ನೀಡಿದರು.ಜಂಟಿ ಕ್ರಿಯಾ ವೇದಿಕೆ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಮುಖಂಡರುಗಳಾದ ಭೀಮಪ್ಪ ಹವಳಿ, ಸೋನಾಕ್ಷಿ ಹುಲಿಯಾಪುರ, ಹನುಮವ್ವ ಇಂದರಗಿ, ಈರಮ್ಮ ದೊಡ್ಡಮನಿ, ಗೌರಮ್ಮ ನವಲಹಳ್ಳಿ, ರತ್ನಮ್ಮ ದೊಡ್ಡಮನಿ, ಬಸವಂತಪ್ಪ ಚೌವ್ಹಾಣ, ಶರಣು ಶೆಟ್ಟರ್, ನಾಗರಾಜ ಕುಷ್ಟಗಿ, ವೈ. ಸತ್ಯನಾರಾಯಣ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಿ.ಜಿ. ಕರಿಗಾರ, ಎಲ್. ಎಫ್. ಪಾಟೀಲ್, ಎಸ್.ಎಂ. ಕಂಬಾಳಿಮಠ, ಹನುಮಂತಪ್ಪ ಐಹೊಳೆ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ. ಪಾಟೀಲ್, ಸುಭಾನ್ ಸಾಬ್ ನೀರಲಗಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರಾಜಶೇಖರ ಏಳುಬಾವಿ, ಎಸ್ ಮಹಾದೇವಪ್ಪ ಮಾವಿನಮಡು, ಶರಣು ಪಾಟೀಲ್, ಶಿವಮೂರ್ತಿ ವದಗನಹಾಳ, ರೇವಣಸಿದ್ದಯ್ಯ ಸ್ವಾಮಿ ಚಿತ್ರಗಾರ, ವಿಜಯ ಮಹಾಂತೇಶ ಹಟ್ಟಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 