ಯಶಸ್ಸು ಕಾಣುತ್ತಿರುವ ಹುಬ್ಬಳ್ಳಿಯ ಸ್ವಾಲಂಬಿ ಸಖಿ ಒಕ್ಕೂಟ
Hubballi's Swalambi Sakhi Association is seeing success
ಲೋಕದರ್ಶನ ವರದಿ
ಯಶಸ್ಸು ಕಾಣುತ್ತಿರುವ ಹುಬ್ಬಳ್ಳಿಯ ಸ್ವಾಲಂಬಿ ಸಖಿ ಒಕ್ಕೂಟ
ಧಾರವಾಡ ಡಿ.11: ರೂ.1 ಕೋಟಿಯ ವ್ಯಾಪಾರ ವಹಿವಾಟಿನ ಗುರಿಯತ್ತ ಸಾಗುತ್ತಿರುವ ಹುಬ್ಬಳ್ಳಿಹಿಧಾರವಾಡದ ಸ್ವಯಂ ಸಹಾಯ ಗುಂಪುಗಳು, ವೃತ್ತಿಪರ ದೃಷ್ಟಿಕೋನವೇ ಯಶಸ್ಸಿನ ಗುಟ್ಟು ಎಂದು ಸಾಬೀತುಪಡಿಸುತ್ತಿವೆ. ನಾಬಾರ್ಡ್‌ನ ಬೆಂಬಲದೊಂದಿಗೆ ಬೆಳೆಯುತ್ತಿರುವ ಸ್ವಾವಲಂಬಿ ಸಖಿ ಪ್ರೊಡ್ಯೂಸರ್ ಕಂಪನಿ, ಸ್ವಯಂ ಸಹಾಯ ಗುಂಪುಗಳ ಒಕ್ಕೂಟವಾಗಿದೆ.
ಇಂದು ಕಂಪನಿಗೆ 350 ಕ್ಕೂ ಹೆಚ್ಚು ಸದಸ್ಯರಿದ್ದು, ಶಿರೂರು ಪಾರ್ಕ್ ರಸ್ತೆ, ಓಯಸಿಸ್ ಮಾಲ್ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಂಗಡಿಗಳನ್ನು ನಡೆಸುತ್ತಿದೆ. ನಾಬಾರ್ಡ್ ಧಾರವಾಡದ ಎಜಿಎಂ ಮಯೂರ ಕಾಂಬಳೆ ಅವರ ಪ್ರಕಾರ, ಈ ಮಹಿಳೆಯರು ಈಗ ನಿಜವಾದ ಸ್ವಾವಲಂಬಿಯಾಗಿ, ಯಾವುದೇ ಬಾಹ್ಯ ನೆರವಿಲ್ಲದೆ ಸಂಸ್ಥೆಯನ್ನು ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
ಅವರ ತಾಳ್ಮೆ, ಶ್ರಮ ಮತ್ತು ದೃಢನಿಶ್ಚಯ ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿವೆ. ಹುಬ್ಬಳ್ಳಿ-ಧಾರವಾಡ ಜಿಲ್ಲೆ ಮುಂದಾಳುತ್ವವನ್ನು ಮುಂದುವರಿಸುತ್ತಿದ್ದು, ಇದರ ಜನರು ಉತ್ತರ ಕರ್ನಾಟಕದ ಹೊಳೆಯುವ ನಕ್ಷತ್ರಗಳಾಗಿದ್ದಾರೆ ಎಂದು ನಬಾರ್ಡ ಧಾರವಾಡ ಪ್ರಾದೇಶಿಕ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲಾ ವಲಯ ಯೋಜನೆ; ಗ್ರಾಮೀಣ ಕುಶಲಕರ್ಮಿಗಳಿಗೆ
ಸುಧಾರಿತ ಉಪಕರಣ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಡಿ.31 ರವರೆಗೆ ಅವಧಿ ವಿಸ್ತರಣೆ
ಧಾರವಾಡ ಡಿ.11: 2025-26 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಕಾರ್ಯಕ್ರಮದಡಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಪ್ರಯುಕ್ತ ಕಮ್ಮಾರಿಕೆ, ಕ್ಷೌರಿಕ ಮತ್ತು ಧೋಬಿ ಚಟುವಟಿಕೆಗೆ ಕ್ರಿಯಾ ಯೋಜನೆ ಗುರಿಗನುಗುಣವಾಗಿ ಅರ್ಜಿಗಳು ಸ್ವೀಕೃತವಾಗದೆ ಇರುವುದರಿಂದ ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 31, 2025 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗದ ಕುಶಲಕರ್ಮಿಗಳು ವೆಬ್‌ಸೈಟ್ ಜಚಿಡಿತಿಚಿಜ.ಟಿಛಿ.ಟಿ ಮೂಲಕ ಡಿಸೆಂಬರ್ 31, 2025 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2324798 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಮತ್ತು ಕೃಷಿ ಭಾಗ್ಯ ಎಸ್‌ಡಿಎಮ್‌ಎಫ್ ಯೋಜನೆಗಳ ಸೌಲಭ್ಯಕ್ಕಾಗಿ
ರೈತರಿಂದ ಅರ್ಜಿ ಆಹ್ವಾನ
ಧಾರವಾಡ ಡಿ.11: ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರಿತ ಕೃಷಿಯಿಂದ ಸುಸ್ಥಿರ ಕೃಷಿಯನ್ನಾಗಿ ರೈತರ ಜೀವನಮಟ್ಟವನ್ನು ಉತ್ತಮಪಡಿಸಲು ಕೃಷಿ ಭಾಗ್ಯ ಮತ್ತು ಕೃಷಿ ಭಾಗ್ಯ ಎಸ್‌ಡಿಎಮ್‌ಎಫ್ ಈ ಯೋಜನೆಯನ್ನು ಪ್ಯಾಕೇಜ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಧಾರವಾಡ ಜಿಲ್ಲೆಗೆ ಪ್ರಸ್ತುತ ಸಾಲಿಗೆ ಈ ಕಾರ್ಯಕ್ರಮ ನಿಗದಿಯಾಗಿರುತ್ತದೆ. ಕೃಷಿ ಭಾಗ್ಯ ಯೋಜನೆಯಡಿ ಒಟ್ಟಾರೆ 6 ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು, ಎಲ್ಲಾ ಘಟಕಗಳನ್ನು ರೈತ ಫಲಾನುಭವಿಗಳು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ತಪ್ಪದೇ ಅಳವಡಿಕೆ ಮಾಡಬೇಕಾಗುತ್ತದೆ.
ಕೃಷಿ ಭಾಗ್ಯ ಯೋಜನೆಗಳು: ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ ನಿರ್ಮಾಣ (ಕೃಷಿಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್, ಸೋಲಾರ್ ಪಂಪ್‌ಸೆಟ್, ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು ಹನಿ) ನೀರಾವರಿ.
ಸದರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಅನುದಾನ ಲಭ್ಯವಿದ್ದು, ಅರ್ಹ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಿದ ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ ಯೋಜನೆಯ ಅನುಕೂಲ ಪಡೆದುಕೊಳ್ಳಲು ಇಚ್ಛಿಸುವ ಎಲ್ಲಾ ವರ್ಗದ ಅರ್ಹ ರೈತ ಫಲಾನುಭವಿಗಳು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರಾದ ರಾಜಶೇಖರ ಅನಗೌಡರ, ಧಾರವಾಡ (8277931282), ಮಂಜುಳಾ ತೆಂಬದ, ಹುಬ್ಬಳ್ಳಿ (8277931288), ಅಮರ ನಾಯ್ಕರ, ಕಲಘಟಗಿ (8277931291), ರೇಖಾ. ಆರ್. ಗಡ್ಡದವರ, ಕುಂದಗೋಳ (9071449976), ರವೀಂದ್ರಗೌಡ ಪಾಟೀಲ, ನವಲಗುಂದ (8277931295) ಸಂಪರ್ಕಿಸಬಹುದು ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 