ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕ: ಶಾಸಕ ನಾಡಗೌಡ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕ: ಶಾಸಕ ನಾಡಗೌಡ History of India's freedom struggle is very exciting: MLA Nadgowda

ಮುದ್ದೇಬಿಹಾಳ 16: ಸ್ವಾತಂತ್ರ್ಯಕ್ಕಾಗಿ ಅದೇಷ್ಟೋ ಜನ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ  ಅವರ ಹೋರಾಟವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ನಾವೇಲ್ಲ ಒಂದೇ ನಾವೆಲ್ಲ ಭಾರತೀಯರು ಎಂಬ ಮನೋಭಾವದಿಂದ ಸೌಹಾರ್ದತೆಯಿಂದ ಬಾಳಬೇಕಿದೆ ಅಂದಾಗ ಮಾತ್ರ ದೇಶದ ಪ್ರಗತಿ ಕಾಣಲು ಸಾಧ್ಯ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.  ಭಾರತ ಸುಸಂಸ್ಕೃತ ಹಾಗೂ ಧರ್ಮ, ಸಂಪ್ರದಾಯ, ಪರಂಪರೆಗಳನ್ನು ಹೊಂದಿದ ದೇಶ. ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ  ಮಾತ್ರಕ್ಕೆ ಸಿಕ್ಕ ಸಿಕ್ಕವರಿಗೇ ಮನಸೋ ಇಚ್ಚೇ ನಿಂದಿಸುವುದು, ಅವಮಾನಿಸುವುದು ಎಂದಲ್ಲ ಡಾ, ಬಿ ಆರ್ ಅಂಬೇಡ್ಕರವರು ರಚಿಸಿದ ಪವಿತ್ರ ಸಂವಿದಾನದ  ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನಡೆಯಬೇಕಿದೆ ಎಂಬುದು ಅರ್ಥ ಅದಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂಬುದನ್ನು ನಾವೇಲ್ಲ ಅರಿತು ನಿಜವಾದ ದೇಶಪ್ರೇಮ ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ.   

1947ರ ಆ.15 ರಂದು ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು, ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಐತಿಹಾಸಿಕ ದಿನ ಇದಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕವಾಗಿದ್ದು, ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಸ್ವಾತಂತ್ರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. 

ರಾಜ್ಯದಲ್ಲಿ ನಮ್ಮ ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಈಗಾಗಲೇ ಜಾರಿ ಮಾಡುವ ಮೂಲಕ ಜನಪರ ಆಡಳಿತ ನೀಡುವುದರೊಂದಿಗೆ ದೇಶಕ್ಕೆ ಮಾದರಿಯಾಗಿರುವ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸುತ್ತಿವೆ ಮತ್ತು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿವೆ ಎಂದರು. 

ತಹಶಿಲ್ದಾರ ಕೀರ್ತಿ ಚಾಲಕ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸೈ ಸಂಜುಕುಮಾರ ತಿಪ್ಪಾರೆಡ್ಡಿಯವರು ಪೋಲಿಸ್ ಪೇರೇಡ ಮೂಲಕ ರಾಷ್ಟ್ರಧ್ವಜಕ್ಕೆ ಹಾಗೂ ಗಣ್ಯರಿಗೆ ಗೌರವ ಸೇಲ್ಯೂಟ್ ಹೊಡೆದ ಗೌರವ ನಮನ ಸಲ್ಲಿಸಿದರು. ಎನ್ ಎಸ್ ಎಸ್, ಸ್ಕೌಟ್ ಆಂಡ್ ಗೈಡ್ಸ್‌, ಗ್ರಹ ರಕ್ಷಕ ದಳ, ವಿವಿಧ ಶಾಲಾ ಮಕ್ಕಳು ಪಂಥಸಂಚಲನದಲ್ಲಿ ಬಾಗವಹಿಸಿದ್ದರು.  

ಪಥಸಂಚಲನದಲ್ಲಿ  ಜೆಸಿ ಶಾಲೆಯ (ಪ್ರಥಮ)ಅಂಜುಮನ್ ಪ್ರೌಢ ಶಾಲೆ (ದ್ವೀತಿಯ)ಅಭ್ಯೂದಯ ಇಂಟರನ್ಯಾಶನಲ್ಲ ಶಾಲೆಯೂ ತೃತೀಯ ಸ್ಥಾನ ಪಡೆದುಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಸರಕಾರಿ ಹಿರಿಯ ಮಾದರಿಯ ಶಾಲೆ (ಪ್ರಥಮ) ಎಂಜಿಎಂಕೆ ಶಾಲೆ (ದ್ವೀತಿಯ)ವಿದ್ಯಾ ಚೇತನ ಶಾಲೆ (ತೃತೀಯ) ಸ್ಥಾನ ಪಡೆದುಕೊಂಡರು. 

ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್ ಎಸ್ ಮಸಳಿ, ಸಿಪಿಐ ಮಹಮ್ಮದ ಫಸಿವುದ್ದೀನ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ, ತಾಲೂಕಾ ಕ್ಷೇತ್ರ ಸಮನ್ವಾಧಿಕಾರಿ ಯು ಬಿ ಧರಿಕಾರ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ ಬಿ ನಾವದಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ಸ್ಥಾಯಿ ಸಮೀತಿ ಅಧ್ಯಕ್ಷ ಯಲ್ಲಪ್ಪ ನಶಾಯಕಮಕ್ಕಳ, ಉಪಾಧ್ಯಕ್ಷೇ ಪ್ರೀತಿ ದೇಗಿನಾಳ ಸೇರಿದಂತೆ ಹಲವರು ಇದ್ದರು. 

ಶಿಕ್ಷಕ ಟಿ ಡಿ ಲಮಾಣಿ ನಿರೂಪಿಸಿದರು, ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು.