ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ವೃದ್ಧಾಶ್ರಮದ ವೃದ್ಧರಿಗೆ ಬಟ್ಟೆ ವಿತರಣೆ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ವೃದ್ಧಾಶ್ರಮದ ವೃದ್ಧರಿಗೆ ಬಟ್ಟೆ ವಿತರಣೆ Hindu Janajagruti Samiti distributes clothes to the elderly in old age homes

ಲಕ್ಷ್ಮೇಶ್ವರ 27 : ಪಟ್ಟಣದ ಜಿ ಎಫ್ ಉಪನಾಳ ಶಾಂತಿಧಾಮ ವೃದ್ಧಾಶ್ರಮದಲ್ಲಿ ಇರುವ ವೃದ್ಧರಿಗೆ ಹಿರಿಯರಿಗೆ ಶನಿವಾರ ಹಿಂದೂ ಜನ ಜಾಗ್ರತಿ ಸಮಿತಿ ವತಿಯಿಂದ ಸೀರೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೃದ್ಧಾಶ್ರಮದಲ್ಲಿರುವ ವೃದ್ಧರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಲಕ್ಷ್ಮ ತಟ್ಟಿ ಅವರು ಹಿಂದೂ ಜಾಗೃತಿ ಸಮಿತಿಯಿಂದ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಸಮಿತಿಯ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು  ಈ ಸಮಯದಲ್ಲಿ ಸಮಿತಿಯ ಕಾರ್ಯಕರ್ತರು, ವೃದ್ಧಾಶ್ರಮದ ವೃದ್ಧರು ಸಿಬ್ಬಂದಿ ವರ್ಗ ಮತ್ತು ಇತರರು ಉಪಸ್ಥಿತರಿದ್ದರು.