ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉನ್ನತ ಶಿಕ್ಷಣ ಇಲಾಖೆ ಆಕೌಂಟ್ ಸೂಪರಿಂಟೆಂಡೆಂಟ್ :14 ದಿನ ನ್ಯಾಯಾಂಗ ಬಂಧನಕ್ಕೆ
Higher Education Department Accounts Superintendent caught in Lokayukta trap while accepting money:
ಕಾರವಾರ : ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಆಡಿಟ್ ಮಾಡಲು ಬಂದ ಉನ್ನತ ಶಿಕ್ಷಣ ಇಲಾಖೆಯ ಅಡಿಟ್ ಅಧಿಕಾರಿ 80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಆಕೌಂಟ್ ಸೂಪರಿಂಟೆಂಡೆಂಟ್ ರಘುನಂದನ್ ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಆಡಿಟರ್ ರಘುನಂದನ್ ಕಾರವಾರ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಉಡುಪಿ ಜಿಲ್ಲೆಯ ಬೈಂದೂರು ಕಾಲೇಜಿನಲ್ಲಿ 2.60 ಲಕ್ಷ ಹಣ ದೊಂದಿಗೆ ಸಿಕ್ಕಿಬಿದ್ದಿದ್ದರು.
ಅಂಕೋಲಾ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲೆ ವಿಜಯಾ ಪಾಟೀಲ್ , ಅಂಕೋಲಾ ಪದವಿ ಕಾಲೇಜಿಗೆ , ಉನ್ನತ ಶಿಕ್ಷಣ ಇಲಾಖೆಯ ಆಡಿಟ್ ಮಾಡಲು ಬಂದ ರಘುನಂದನ್ ಎನ್ನುವ ಅಧಿಕಾರಿ 1 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದರು. 1 ಲಕ್ಷ ಡಿಮ್ಯಾಂಡ್ ಮಾಡಿದ್ದ ಅಧಿಕಾರಿ ರಘುನಂದನ್ , ಹಣವನ್ನ ಮೊದಲು ಭಟ್ಕಳಕ್ಕೆ ತರಲು ಹೇಳಿ , ನಂತರ ಬೈಂದೂರು ಪದವಿ ಕಾಲೇಜು ಬಳಿ ಬಂದು ಹಣ ಕೊಡಲು ತಿಳಿಸಿದ್ದರು ಎನ್ನಲಾಗಿದೆ.ಕಾರವಾರ ಲೋಕಾಯುಕ್ತ ಕಾರವಾರ ಡಿವೈಎಸ್ಪಿ ಧನ್ಯಾ ನಾಯ್ಕ, ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ತಂಡ ಬೈಂದೂರಿಗೆ ತೆರಳಿ ಬುಧವಾರ ಕಾರ್ಯಾಚರಣೆ ಮಾಡಿತ್ತು.
ಪ್ರಾಂಶುಪಾಲೆ ವಿಜಯಾ ಪಾಟೀಲ್ 80 ಸಾವಿರ ಹಣವನ್ನ ರಘುನಂದನಗೆ ಕೊಡುವಾಗ ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಲೋಕಾಯುಕ್ತರನ್ನ ಕಂಡು ಅಡಿಟ್ ಅಧಿಕಾರಿ ಜೊತೆ ಬಂದಿದ್ದ ಶ್ರೀಧರ್ ಎಂಬುವವರನ್ನು ವಿಚಾರಣೆ ಮಾಡಲಾಗುತ್ತು. ಆದರೆ ಆತನ ಪಾತ್ರ ಈ ಘಟನೆಯಲ್ಲಿ ಇಲ್ಲ ಎನ್ನಲಾಗಿದೆ.ಆಡಿಟ್ ಅಧಿಕಾರಿ ರಘುನಂದನ್ ಬ್ಯಾಗಿನಲ್ಲಿ ಸುಮಾರು 2.60 ಲಕ್ಷ ಹಣ ಸಿಕ್ಕಿದ್ದು, ಅವರು ಅಂಕೋಲಾ , ಮಂಕಿ, ಭಟ್ಕಳ ಪದವಿ ಕಾಲೇಜಿನ ಆಡಿಟ್ ಮುಗಿಸಿ, ಬೈಂದೂರು ಪದವಿ ಕಾಲೇಜಿಗೆ ತೆರಳಿದ್ದು, ಎಲ್ಲಾ ಕಡೆ ಪದವಿ ಕಾಲೇಜು ಪ್ರಾಂಶುಪಾಲರಿಂದ ಹಣ ಡಿಮ್ಯಾಂಡ್ ಮಾಡಿ ಪಡೆದಿದ್ದ ಎನ್ನಲಾಗಿದೆ. ಆರೋಪಿ ರಘುನಂದನ್ ನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 