ಹೆಲ್ಮೆಟ್ ಕಡ್ಡಾಯ: ಲೈಸನ್ಸ್ ಇಲ್ಲದೆ ಮಕ್ಕಳಿಗೆ ಬೈಕ್ ಕೊಡಬೇಡಿ: ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ
Helmets are mandatory: Don't give bikes to children without a license: DySP Gopalakrishna Gowda
ವಿಭಾಶ್ರೀ ಹೊಂಡಾ ಶೋರೂಮಿನಲ್ಲಿ ಹೊಸ ಬೈಕ್ ಬಿಡುಗಡೆ
ಚಿಕ್ಕೋಡಿ 17: ಹೊಂಡ ಕಂಪನಿಯ ಬೈಕ್ ಗ್ರಾಮೀಣ ಜನತೆಗೆ ಅಚ್ಚುಮೆಚ್ಚಿನ ವಾಹನವಾಗಿದೆ. ಆದರೆ ರಸ್ತೆ ನಿಯಮ ಪಾಲನೆ ಅತ್ಯಂತ ಮುಖ್ಯ. ಪೋಷಕರು ಮಕ್ಕಳಿಗೆ ಲೈಸನ್ಸ್ ಇಲ್ಲದೆ ಬೈಕ್ ಕೊಡಬಾರದು. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು ಮತ್ತು ವಾಹನ ಖರೀದಿಸುವಾಗ ಇನ್ಸುರೆನ್ಸ್ ಕಡ್ಡಾಯವಾಗಿರಬೇಕು ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ ಹೇಳಿದರು.
ಇಲ್ಲಿನ ವಿಭಾಶ್ರೀ ಹೊಂಡಾ ಶೋರೂಮಿನಲ್ಲಿ ಶೈನ್ 100 ಡಿಎಕ್ಸ್ ದ್ವಿಚಕ್ರ ವಾಹನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಕಾರ್ಯಕ್ರಮ ಉದ್ಘಾಟಿಸಿದರು. ಆರ್‌ಟಿಓ ಮಂಜುನಾಥ ಶಿರೋಳೆ, ಸಿಪಿಐ ವಿಶ್ವನಾಥ ಚೌಗಲಾ, ಸಿಟಿಇ ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ, ಪ್ರವೀಣ ಶರ್ಮಾ (ಜೋನಲ್ ಹೆಡ್), ಏರಿಯಾ ಮ್ಯಾನೇಜರ್ ಜುನಾಥ ಪಾಟೀಲ ಮಾತನಾಡಿದರು.ಮಾಲಿಕ ವಿ.ಎಸ್. ಮಾಂಜ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕಳೆದ 17 ವರ್ಷಗಳಿಂದ ನಾವು ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ಈ ನಂಬಿಕೆಯೇ ನಮ್ಮ ಬಲವಾಗಿದೆ” ಎಂದರು.
ಸಮಾರಂಭದಲ್ಲಿ ಚೇತನ ಲಗಾರೆ, ಬಿಸಿ ಪಾಟೀಲ, ಈರಣ್ಣಾ ಉಮರಾಣಿ, ಸುನೀಲ ಶಿಂಧೆ, ಪ್ರಸಾದ ಜೋಶಿ, ಬಾಳಾಸಾಹೇಬ, ಆನಂದ ಆರ್ವಾರೆ, ಜಿ.ಟಿ. ಬೋಕೆ, ಆರ್.ವೈ. ಚಿಕ್ಕೋಡಿ, ಅಜೀತ ಚರಾಟೆ, ಉತ್ತಮ ಶಿಂಧೆ, ಮಿಥುನ ದೇಶಪಾಂಡೆ, ಮಹಾಂತೇಶ ಮಲಾಬಾಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರುಶೋರೂಮ್ ಮಾಲಿಕ ಸಂಕೇತ ಮಾಂಜ್ರೇಕರ ಸ್ವಾಗತಿಸಿದರು.ಕಾರ್ಯಕ್ರಮ ನಿರೂಪಣೆಯನ್ನು ಎನ್.ವ್ಹಿ. ಶಿರಗಾಂವಕರ ನಿರ್ವಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 