ಭೀಕರ ಮಳೆಯಿಂದಾಗಿ ರೈತರ ಬೆಳೆಗಳು ಸೇರಿದಂತೆ ಮನೆಗಳಿಗೆ ಹಾನಿ
Heavy rains damage farmers' crops and homes
ಜಮಖಂಡಿ 28 : ತಾಲೂಕಿನಲ್ಲಿ ಧಾರಾಕಾರವಾಗಿ ಕಳೆದ ನಾಲ್ಕು ದಿನಗಳ ಕಾಲ ಸತತವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ರೈತರ ಬೆಳೆಗಳು ಸೇರಿದಂತೆ ಅನೇಕ 5 ಮನೆಗಳಿಗೆ ಹಾನಿಯಾಗಿದ್ದು. ಹಲವು ಮನೆಗಳು ಧರೆಗುರುಳಿರುವ ಮಾಹಿತಿ ಲಭ್ಯವಾಗಿವೆ.
ಕೊಣ್ಣೂರ ಗ್ರಾಮದಲ್ಲಿ ಲಕ್ಕವ್ವ. ಗಾಣಗೇರ ಇವರ ಮನೆಯ ಮೇಲ್ಚಾವಣಿ ಭಾಗಶಃ ಹಾನಿಯಾಗಿದೆ. ಲಿಂಗನೂರು ಗ್ರಾಮದಲ್ಲಿ 2 ಮನೆಗಳು, ಮೈಗೂರು ಗ್ರಾಮದಲ್ಲಿ ಒಂದು ಹಾಗೂ ಹುನ್ನೂರು ಗ್ರಾಮದ ಶಾಂತವ್ವ ಭೂಶಣ್ಣವರ ಎಂಬುವರ ಮನೆ ಮಳೆಯಿಂದಾಗಿ ಹಾನಿಗೊಳಗಾಗಿದೆ. ತಾಲೂಕಿನಲ್ಲಿ ಸಧ್ಯದ ಮಾಹಿತಿಯ ಪ್ರಕಾರ 5 ಮನೆಗಳು ಹಾನಿಗೊಳಗಾಗಿದೆ,
ಭೀಕರ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು. ನಗರದ ಮುಧೋಳ ಬೈಪಾಸ್ ರಸ್ತೆಯಲ್ಲಿ ನೀರು ಸಂಗ್ರಹವಾಗಿದೆ, ಗ್ರಾಮೀಣ ಪ್ರದೇಶದ ರಸ್ತೆಗಳು ಮಳೆಯಿಂದಾಗಿ ಹಾನಿಗೊಳಗಾಗಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗಿದೆ, ಹುನ್ನೂರು ಪಂಚಾಯಿತಿ ವ್ಯಾಪ್ತಿಯ ಗಣೇಶನಗರ, ವೆಂಕಟೇಶ್ವರ ಕಾಲನಿ, ಬಸವೇಶ್ವರ ಕಾಲೊನಿಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ನಗರ ಪ್ರದೇಶದ ಎಸ್‌ಆರ್‌ಎ ಕ್ಲಬ್‌ನಿಂದ ಸಜ್ಜಿಹನುಮಾನ ದೇವಸ್ಥಾನದ ವರೆಗಿನ ರಸ್ತೆ ಹಾಳಾಗಿದೆ. ವಿಜಯಪುರ ರಸ್ತೆ ಬಸವೇಶ್ವರ ಸರ್ಕಲ್ ಬಳಿ ಹಾಗೂ ಚಟ್ಟುಸಿಂಗ್ ಉದ್ಯಾನದ ಬಳಿ ತೆಗ್ಗು-ಗುಂಡಿಗಳು ಬಿದ್ದು ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಅದೇ ರಸ್ತೆ ಮಾರ್ಗದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ವಾಹನದಲ್ಲಿ ಸಂಚರಿಸುತ್ತಿದ್ದು. ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆಂದು ಸಾರ್ವಜನಿಕರು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 