10 ಗಂಟೆಗಳಲ್ಲಿ 22 ಎಕರೆ ತೊಗರಿ ಬೆಳೆ ಕೊಯ್ಲು: ರೈತ ರಮೇಶ ಕುಕನೂರ ಸಾಧನೆ
Harvesting 22 acres of red gram crop in 10 hours: Farmer Ramesh Kukanur's achievement
ತಾಳಿಕೋಟೆ, ಆ.30: ತಾಲೂಕಿನ ಮೈಲೇಶ್ವರ ಗ್ರಾಮದ ರೈತ ರಮೇಶ ನಿಂಗಣ್ಣ ಕುಕನೂರ ಅವರು ತಮ್ಮ ಎತ್ತುಗಳ ಸಹಾಯದಿಂದ ಕೇವಲ 10 ಗಂಟೆಗಳಲ್ಲಿ 22 ಎಕರೆ ತೊಗರಿ ಹೊಲವನ್ನು ಕೊಯ್ಲು ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ತೊಗರಿ ಹೊಲದ ಕೊಯ್ಲು ಆರಂಭಿಸಿದ ಅವರು ಮಧ್ಯಾಹ್ನ 3 ಗಂಟೆಯ ವೇಳೆಗೆ 22 ಎಕರೆ ಪ್ರದೇಶದ ಕೊಯ್ಲು ಪೂರ್ಣಗೊಳಿಸಿದ್ದಾರೆ. ಎತ್ತುಗಳ ಸಹಾಯದಿಂದ ಇಂತಹ ಸಾಧನೆ ಮಾಡಿದ ರಮೇಶ ಅವರನ್ನು ಗ್ರಾಮಸ್ಥರು ಎತ್ತುಗಳ ಸಮೇತ ಗ್ರಾಮದ ಪ್ರವೇಶದ್ವಾರದ ಬಳಿ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನೂರಾರು ರೈತರು ಹಲಗೆ ಮೇಳದೊಂದಿಗೆ ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಗ್ರಾಮದ ಪ್ರವೇಶದ್ವಾರದಿಂದ ಶ್ರೀ ಬಸವೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಸಿ, ಬಳಿಕ ಶ್ರೀಪಾದ ಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ ರೈತ ರಮೇಶ ಕುಕನೂರ, “ಈ ಸಾಧನೆ ಮಾಡಬೇಕು ಎಂಬುದು ಬಹುದಿನಗಳ ಆಸೆಯಾಗಿತ್ತು. ಇಂದು ನನ್ನ ಎತ್ತುಗಳು ಅದನ್ನು ಮಾಡಿ ತೋರಿಸಿವೆ. ಈ ಸಾಧನೆ ನನ್ನ ಎತ್ತುಗಳಿಂದಲೇ ಸಾಧ್ಯವಾಗಿದೆ. ಗ್ರಾಮಸ್ಥರು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಂಗಣ್ಣ ಕುಕನೂರ, ರಮೇಶ ದೇಸಾಯಿ, ಪ್ರಕಾಶ ವಾಲಿಕಾರ, ಸಂಗಮೇಶ ಬಡಿಗೇರ, ಚಂದ್ರಶೇಖರ ಆಲಮೇಲ, ನಿಂಗಣ್ಣ ಕುಳಗೇರಿ, ಶಶಿಕುಮಾರ ಕುಕನೂರ, ಶ್ರೀಕಾಂತ ಪಾಟೀಲ, ಸದ್ಧಾಮ ಸಾಲವಾಡಗಿ, ಕಾಶೀನಾಥ ಕುಳಗೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 