ಹನುಮಂತ ಕಾರಟಗಿಯವರ 4ನೇ ಪುಣ್ಯಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
Hanumanth Karatagi's 4th commemoration and award ceremony
ಹನುಮಂತ ಕಾರಟಗಿಯವರ 4ನೇ ಪುಣ್ಯಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ 09: ಗದುಗಿನ ವೀರೇಶ್ವರ ಪುಣ್ಯಾಶ್ರಮವು ನಿಜಾರ್ಥದಲ್ಲಿ ಜಾತ್ಯಾತೀತ ತತ್ವವನ್ನು ಪಾಲಿಸುತ್ತಿರುವ ಏಕೈಕ ವಿಶಿಷ್ಟ ಆಶ್ರಮವಾಗಿದೆ. ಹಿಂದುಳಿದ ಪ್ರದೇಶದಿಂದ ಬಂದು ಇಂತಹ ಶ್ರೇಷ್ಠ ಗುರು ಪರಂಪರೆಯಲ್ಲಿ ಕಠೀಣ ಪರಿಶ್ರಮದಿಂದ ಸಾಧನೆಗೈದು, ಉತ್ಕೃಷ್ಟ ಗಾಯಕರಿಗೆ ತಬಲಾ ಸಹಕಾರ ನೀಡಿದ ಕೀರ್ತಿ ಪಂ. ಹನುಮಂತ ಕಾರಟಗಿ ಅವರಿಗೆ ಸಲ್ಲುತ್ತದೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅಭಿಪ್ರಾಯಪಟ್ಟರು.
ದಿನಾಂಕ: 05.10.2025ರಂದು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಪಂ.ಹನುಮಂತ ಕಾರಟಗಿ ಸಾಂಸ್ಕೃತಿಕ ಕಲಾ ಪ್ರತಿಷ್ಠಾನವು ಏರಿ್ಡಸಿದ್ದ ಪಂ.ಹನುಮಂತ ಕಾರಟಗಿಯವರ 4ನೇ ಪುಣ್ಯಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದ ರಾಜು ತಾಳಿಕೋಟಿ ಮಾತನಾಡುತ್ತ ಧಾರವಾಡದ ಶ್ರೇಷ್ಠ ತಬಲಾ ಕಲಾವಿದ ಪಂ. ರಾಚಯ್ಯ ಹಿರೇಮಠ ಅವರಿಗೆ ಪಂ.ಹನುಮಂತ ಕಾರಟಗಿ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಓಚಿತ್ಯಪೂರ್ಣವಾದುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡುತ್ತ ಕಲ್ಯಾಣ ಕರ್ನಾಟಕದ ಪ್ರತಿಭಾನ್ವಿತ ಕಲಾವಿದರು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ತಮ್ಮ ಕಲೆಯ ಛಾಪು ಮೂಡಿಸಿ, ಪಂ. ಪುಟ್ಟರಾಜ ಗವಾಯಿಗಳ ಹೆಸರನ್ನು ಅಜರಾಮವಾಗಿಸಿದ್ದಾರೆ. ಇಂತವರ ಸಾಲಿನಲ್ಲಿ ಪಂ.ಹನುಮಂತ ಕಾರಟಗಿಯವರು ಪ್ರಮುಖರಾಗಿ, ಬೆಂಗಳೂರಿನಲ್ಲಿ ಬಹುತೇಕ ಕಲಾವಿದರಿಗೆ ಸಾಥ್ ನೀಡಿ ಸೈ ಎನಿಸಿಕೊಂಡಿದ್ದಾರೆ ಎಂದರು.
ಬೆಂಗಳೂರಿನ ಹಿರಿಯ ಸಂಗೀತ ನಿರ್ದೇಶಕ ಪಂ.ದೇವೇಂದ್ರಕುಮಾರ ಪತ್ತಾರ ಮಾತನಾಡುತ್ತ ಹನುಮಂತ ಕಾರಟಗಿಯವರು ತಬಲಾ ನುಡಿಸುವಲ್ಲಿ ತಮ್ಮದೇ ಆದ ಸೊಗಡಿತ್ತು, ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ತಬಲಾದ ಪಟ್ಟುಗಳನ್ನು ಕರಗತಮಾಡಿಕೊಂಡು ನುಡಿಸುತ್ತ ದೊಡ್ಡ ಹೆಸರು ಮಾಡಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಹಿಂದೂಸ್ಥಾನಿ ಗಾಯಕ ಪಂ. ಸೋಮನಾಥ ಮರಡೂರ ಮಾತನಾಡುತ್ತ ಹಿರಿಯ ಕಲಾವಿದರ ಸಾಕಷ್ಟು ಸೇವೆ ಮಾಡಿದ ಶ್ರೇಯಸ್ಸು ಡಾ.ರಾಚಯ್ಯ ಹಿರೇಮಠ ಅವರಿಗೆ ಸಲ್ಲುತ್ತದೆ. ಇವರಿಗೆ ಪಂ.ಹನುಮಂತ ಕಾರಟಗಿ ಹೆಸರಿನ ಪ್ರಶಸ್ತಿ ಲಭಿಸಿರುವುದು ಅವರ ಜವಾಬ್ದಾರಿಯನ್ನು ಹೆಚ್ಚಾಗಿದೆ ಎಂದರು. ಕಲಾವಿದರು ಕಠಿಣ ಪರಿಶ್ರಮದಿಂದ ಸಾಧನೆಮಾಡಿದರೆ ಅದು ಗುರುವಿಗೆ ಹೆಮ್ಮೆಯೆನಿಸುತ್ತದೆ ಎಂದರು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಸಂಯೋಜಕ ಪ್ರಕಾಶ ಬಾಳಿಕಾಯಿ, ಕಾರಟಗಿಯ ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ, ಹಿರಿಯ ಸಂಗೀತ ನಿರ್ದೇಶಕ ಪಂ. ದೇವೇಂದ್ರಕುಮಾರ ಪತ್ತಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಧಾ ಹನುಮಂತ ಕಾರಟಗಿ ವೇದಿಕೆಯಲ್ಲು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾಡಿನ ಹಿರಿಯ ತಬಲಾ ವಾದಕರಾದ ಡಾ. ರಾಚಯ್ಯ ಹಿರೇಮಠ ಅವರಿಗೆ ‘ಪಂ. ಹನುಮಂತ ಕಾರಟಗಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಡಾ.ಎ.ಎಲ್.ದೇಸಾಯಿ ಸ್ವಾಗತಿಸಿದರು, ಸ್ವರಸಂವಾದಿನಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಾಧಾ ಕಾರಟಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಗಾಯಕಿ ಸಿಂಚನಾ ದೀಕ್ಷಿತ, ಖ್ಯಾತ ಗಾಯಕ ಮೃತ್ಯುಂಜಯ ದೊಡ್ಡವಾಡ ಅವರಿಂದ ಸುಗಮ ಸಂಗೀತ, ಪ್ರಶಸ್ತಿ ಪುರಸ್ಕೃತ ಡಾ. ರಾಚಯ್ಯ ಹಿರೇಮಠ ಅವರಿಗೆ ತಬಲಾ ಸೋಲೋ, ಡಾ. ನಾರಾಯಣ ಹಿರೇಕೊಳಚಿ ಮತ್ತು ಡಾ. ಗುರುಬಸವ ಮಹಾಮನೆ ಅವರಿಂದ ವಯೋಲಿನ್ ವಾದನ, ಡಾ. ಪುಟ್ಟರಾಜ ಭಜಂತ್ರಿ ಅವರಿಂದ ಶಹನಾಯಿ ವಾದನ, ಬಸವರಾಜ ಹೂಗಾರ, ಡಾ. ಕೃಷ್ಣಾ ಸುತಾರ ಹಾಗೂ ಡಾ. ಪರುಶುರಾಮ ಕಟ್ಟಿಸಂಗಾವಿ ಅವರ ಸ್ವರಸಂವಾದಿನಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಮೈಸೂರಿನ ಭೀಮಾಶಂಕರ ಬಿದನೂರ, ನಿಸಾರ ಅಹಮ್ಮದ್, ದಯಾನಂದ ಸುತಾರ ಹಾಗೂ ಹಾರ್ಮೋನಿಯಂನಲ್ಲಿ ಡಾ. ಪರುಶುರಾಮ ಕಟ್ಟಿಸಂಗಾವಿ, ಅನಿಲ ಮಠಪತಿ, ಶೇಖರ ಗಲಗ ಸಾಥ್ ಸಂಗತ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 