ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಪಾತ್ರದಲ್ಲಿ ಹಾಲಯ್ಯ ಹುಡೇಜಾಲಿ ನಟನೆ : ಅಭಿನಂದನೆ
Halayya Hudejali's performance as the Chief Minister's Personal Secretary: Congratulations
ಕೊಪ್ಪಳ 29: ಸರ್ಕಾರಿ ನ್ಯಾಯಬೆಲೆ ಅಂಗಡಿ ಮುಂದುವರಿದ ಭಾಗ ಕನ್ನಡ ಚಲನಚಿತ್ರದಲ್ಲಿ ಕೊಪ್ಪಳದ ರಂಗಭೂಮಿ ಹಿರಿಯ ಕಲಾವಿದ ಹಾಲಯ್ಯ ಹುಡೇಜಾಲಿ ಯವರು ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ, ಸದರಿ ಚಲನಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ನಟನೆ ಮಾಡುತ್ತಿದ್ದು ಕನ್ನಡ ಚಲನಚಿತ್ರ ನಾಯಕಿ ನಟಿ ರಾಗಿಣಿ ತ್ರಿವೇದಿ ಯವರು ಸಹ ನಟಿಸುತ್ತಿದ್ದಾರೆ,
ಹಾಲಯ್ಯ ಹುಡೇಜಾಲಿ ಕೊಪ್ಪಳ ಜಿಲ್ಲೆಯ ರಂಗಭೂಮಿ ಕಲಾವಿದರು ಕವಿ ಮತ್ತು ಸಾಹಿತಿ ಯಾಗಿದ್ದು 1980 ರಿಂದ 2026ರ ವರೆಗೆ ಸುಮಾರು 180 ಅಧಿಕ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಹೀರೋ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಮುತ್ತಿನಂತ ಮನೆತನ, ಪುಣ್ಯದ ಅಣ್ಣ ಕರ್ಮದ ತಮ್ಮ, ರೈತರ ರಾಜ್ಯದಲ್ಲಿ ರೊಚ್ಚಿಗೆದ್ದ ಚಿರತೆ, ರೈತನ ರಣಕಹಳೆ, ಗುಣವಂತನ ಮನೆತನದ ಹಿರಿತನದ ಹೆಣ್ಣು, ಇತ್ಯಾದಿ ಆರು ನಾಟಕಗಳನ್ನು ಸ್ವತ ಬರೆದು ಅದರಲ್ಲಿ ಪಾತ್ರ ಕೂಡ ಮಾಡಿದ್ದಾರೆ, ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯಿಂದ ಎರಡು ರಾಜ್ಯ ಪ್ರಶಸ್ತಿಗಳು ಸೇರಿದಂತೆ ಸುಮಾರು 800 ರಷ್ಟು ಪ್ರಶಸ್ತಿಗಳು ವಿವಿಧ ಸಂಘ ಸಂಘಟನೆಗಳ ಮೂಲಕ ಇವರಿಗೆ ಲಭಿಸಿರುವುದು ವಿಶೇಷವಾಗಿದೆ.
ಇತ್ತೀಚಿಗಷ್ಟೇ ಬಿಡುಗಡೆ ಹೊಂದಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದಲ್ಲಿ ಹಾಲಯ್ಯ ಹುಡೇ ಜಾಲಿ ಯವರು ಉತ್ತಮ ಪಾತ್ರ ಮಾಡಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿ ಈಗ ಅದೇ ಚಿತ್ರ ಸರ್ಕಾರಿ ನ್ಯಾಯಬೆಲೆ ಅಂಗಡಿ ಮುಂದುವರಿದ ಭಾಗದಲ್ಲಿ ಮುಖ್ಯಮಂತ್ರಿಗೆ ಆಪ್ತ ಕಾರ್ಯದರ್ಶಿಯಾಗಿ ಪಾತ್ರ ಮಾಡಲಿದ್ದಾರೆ ಈ ಪಾತ್ರ ದಲ್ಲಿಯೂ ಸಹ ಅವರು ಉತ್ತಮ ನಟನೆ ಮಾಡಿ ತಮ್ಮ ಕಲೆ ಪ್ರದರ್ಶನ ಮಾಡಿ ನಮ್ಮ ಈ ಭಾಗದ ಪ್ರೇಕ್ಷಕ ಸಾರ್ವಜನಿಕರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಹಾಲಯ್ಯ ಹುಡೇ ಜಾಲಿ ಅವರು ಯಶಸ್ವಿ ಯಾಗಲೆಂದು ಕೊಪ್ಪಳ ಜಿಲ್ಲೆಯ ವಿವಿಧ ಸಂಘಟನೆಗಳು ಕನ್ನಡ ಅಭಿಮಾನಿಗಳು ಚಲನಚಿತ್ರ ಪ್ರೇಕ್ಷಕರು,ಶುಭ ಹಾರೈಸಿದ್ದಾರೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 