ಎಚ್‌.ಕೆ. ಪಾಟೀಲ್ ಸಚಿವ ಸ್ಥಾನ ನೀಡಿ: ಸುರೇಶ್ ಬೆಳಧಡಿ ಆಗ್ರಹ

ಎಚ್‌.ಕೆ. ಪಾಟೀಲ್ ಸಚಿವ ಸ್ಥಾನ ನೀಡಿ: ಸುರೇಶ್ ಬೆಳಧಡಿ ಆಗ್ರಹ H.K. Patil should be given a ministerial position: Suresh Beladhadi demands

ಗದಗ  12:  ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಹಿರಿಯ ರಾಜಕಾರಣಿ ಹಾಗೂ ಅನುಭವಿ ನಾಯಕ   ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವುದು ಗದಗ ಜಿಲ್ಲೆಗೆ ಹಾಗೂ ಅವರ ಹಿರಿತನಕ್ಕೆ ಮಾಡಿದ ಅನ್ಯಾಯ ಎಂದು ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ವಾಲ್ಮೀಕಿ ಸಮಾಜದ ಯುವ ಮುಖಂಡ   ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, “ಎಚ್‌.ಕೆ. ಪಾಟೀಲ್ ಅವರು ಕೇವಲ ವ್ಯಕ್ತಿಯಲ್ಲ, ದಶಕಗಳ ಕಾಲ ರಾಜ್ಯದ ಅಭಿವೃದ್ಧಿಗಾಗಿ ದುಡಿದ ಅನುಭವಿ ನಾಯಕ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಇಂತಹ ಹಿರಿಯ ನಾಯಕರನ್ನು ಕಡೆಗಣಿಸಿರುವುದು ರಾಜಕೀಯ ದುರಂತವಾಗಿದೆ” ಎಂದು ಹೇಳಿದ್ದಾರೆ.  

ಗದಗ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಎಚ್‌.ಕೆ. ಪಾಟೀಲ್ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಂತಾಗಿದೆ. ಇದು ಗದಗ ಜಿಲ್ಲೆಯ ಜನತೆಗೆ ಮಾಡಿದ ದ್ರೋಹ ಎಂದು ಅವರು ಆರೋಪಿಸಿದ್ದಾರೆ.  

ಇನ್ನಾದರೂ ಸರ್ಕಾರ ತನ್ನ ನಿರ್ಧಾರವನ್ನು ಮರುಪರೀಶೀಲಿಸಬೇಕು. ಮುಂಬರುವ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್‌.ಕೆ. ಪಾಟೀಲ್ ಅವರಿಗೆ ಪ್ರಮುಖ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.  

ಒಂದು ವೇಳೆ ಎಚ್‌.ಕೆ. ಪಾಟೀಲ್ ಅವರನ್ನು ಮುಂದುವರಿದು ಕಡೆಗಣಿಸಿದರೆ, ಗದಗ ಕ್ಷೇತ್ರದ ಜನತೆ ಹಾಗೂ ಯುವಕರನ್ನು ಸಂಘಟಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಅವರು ಉಪ ಮುಖ್ಯಮಂತ್ರಿ  ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ.