ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ
Guru Vandana and Friendship Gathering Program by Students
ಹಾವೇರಿ 18 : ಮನುಷ್ಯನ ಜೀವನಕ್ಕೆ ಕೇವಲ ತಂದೆ ತಾಯಿ ಮತ್ತು ವಿದ್ಯೆಯನ್ನು ಕಲಿಸಿದವರು ಮಾತ್ರ ಗುರುಗಳಲ್ಲ ನಮ್ಮ ಜೀವನಕ್ಕೆ ಉತ್ತಮವಾದ ಮಾರ್ಗವನ್ನು ತೋರಿ ನಮ್ಮನ್ನು ಒಂದೆಡೆ ನೆಲೆನಿಲ್ಲುವಂತೆ ಮಾಡುವವರು ಕೂಡಾ ಗುರುಗಳೆ ಎಂದು ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗುತ್ತಲ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ 1991 ರಿಂದ 1997ನೇ ಸಾಲಿನ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯಾವಸ್ಥೆಯಿಂದ ಹಿಡಿದು ನಮ್ಮ ಜೀವನದ ಅಂತ್ಯದವರೆಗೂ ಸಮಾಜದಲ್ಲಿ ಉತ್ತಮವಾದ ಹಾಗೂ ಸುಸಂಕೃತವಾದ ಜೀವನವನ್ನು ನಾವು ನಡೆಸಬೇಕಾದರೆ ಅದಕ್ಕೆ ಗುರುವಿನ ಶ್ರಮ ಮಹತ್ವದಾಗಿರುತ್ತದೆ. ನಾವುಗಳು ಸಮಾಜದಲ್ಲಿ ಉತ್ತಮ ಜೀವನ ಕಂಡುಕೊಂಡು ಆದರ್ಶ ಜೀವನವನ್ನು ನಡೆಸಿದರೆ ಅದುವೇ ನಾವು ಗುರುಗಳಿಗೆ ಕೊಡುವ ಗೌರವ ಎಂದರು.
ಕಾರ್ಯಕ್ರಮದಲ್ಲಿ 1991 ರಿಂದ 1997ನೇ ಸಾಲಿನ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ವಿದ್ಯಾರ್ಜನೆ ಮಾಡಿದಂತ ಗುರುಗಳಾದ ಹನುಮಂತಗೌಡ ಗೊಲ್ಲರ, ಎಮ್.ಬಿ.ಕೋಡಬಾಳ, ಆರ್.ಕೆ.ಹಿರೇಮಠ, ಆಯ್.ಎಸ್.ಸಿದ್ದಣ್ಣನವರ, ಹೆಚ್.ಪಿ.ಗೊಲ್ಲರ, ಎಮ್.ಡಿ.ಪವ್ಹಾರ್, ಬಿ.ವ್ಹಿ.ಅಣಗಡಿ, ಗಿರಿಜಾ ಚಕ್ಕಿ, ಗಿರಿಯಮ್ಮನವರ, ಹುಗಾರ,ಸನದಿ,ಶಾಂತಾ ಅಂಗಡಿ,ಶಿಲ್ಪಾ ತೇಲ್ಕರ್, ಬಿ.ಬಿ.ಕೋಡಬಾಳ, ಸ್ರೀ ನಾಗನಗೌಡ್ರ,ಕರೆಗೌಡ್ರ, ಹಿರೇಮಠ, ಗಾಮಣ್ಣನವರ,ರೇಣುಕಾ ಮಳ್ಳಿಮಠ ಸೇರಿದಮಥೆ ಮತತ್ತಿತರ ಶಿಕ್ಷಕರಿದ್ದರು. ವಿದ್ಯಾರ್ಥಿಗಳಾದ ಶಿವಯೋಗಿ ಕಾಗಿನೆಲ್ಲಿ, ಪ್ರಕಾಶ ಕಾಯಕದ, ರವಿ ಮರೆಗೌಡ್ರ, ಚಂದ್ರು ಯಡಹಳ್ಳಿ, ಪ್ರಭು ಸಾಲಗೇರಿ, ವಿಠಲ್ ಜೋಗೇರ್,ವಿನಾಯಕ ನಾಡಿಗೇರ, ಹೊಳಿಯಯ್ಯ ಹಿರೆಮಠ, ರಾಜು ಪಂಡ್ರಿ, ಪ್ರಕಾಶ ಆನ್ವೇರಿ, ಅಂಬಿಕಾ ಹೊಳಲ, ಅಕ್ಕಮ್ಮ ಕಾಯಕದ, ಅನ್ನಪೂರ್ಣ ಬಡಿಗೇರ, ಸುನಿತಾ ಉಪ್ಪಳೆ, ಶಶಿಕಲಾ ಗಂಗಣ್ಣನವರ, ರತ್ನಾ ಅಂಗೂರ, ವಾಣಿಶ್ರೀ ಹಾವನೂರ ಸೇರಿದಂತೆ ಮುಂತಾದ ವಿದ್ಯಾರ್ಥಿಗಳಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀನಿವಾಸ ಸುತಕೋಟಿ ನಿರ್ವಹಿದರು ಸ್ವಾಗತ ಕಾರ್ಯಕ್ರಮವನ್ನು ಪುಷ್ಪಾ ಕುಂದೂರ ನಿರ್ವಹಿಸಿದರು ವಂದನಾರೆ್ಣಯನ್ನ ಹೊಳಿಯಯ್ಯ ಹಿರೇಮಠ ನಿರ್ವಹಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 