ಗೃಹ ಜ್ಯೋತಿ ಯೋಜನೆ: ಫಲಾನುಭವಿಗಳಿಗೆ ಸೌಲಭ್ಯ ಪರೀಶೀಲನೆ

ಗೃಹ ಜ್ಯೋತಿ ಯೋಜನೆ: ಫಲಾನುಭವಿಗಳಿಗೆ ಸೌಲಭ್ಯ ಪರೀಶೀಲನೆ Gruha Jyothi Scheme: Verification of benefits for beneficiaries

 ಕೊಪ್ಪಳ 24: ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಮರು ಪರೀಶೀಲನೆ ಕಾರ್ಯವು ನಗರದ 15ನೇ ವಾರ್ಡ್ನಲ್ಲಿ ನಡೆಯಿತು. ಯೋಜನೆಯ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ಸಮರ​‍್ಕವಾಗಿ ತಲುಪುತ್ತಿದೆಯೇ ಎಂಬುದನ್ನು ಪರೀಶೀಲಿಸಲಾಯಿತು.  

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆಸ್ಕಾಂ ಕೊಪ್ಪಳ ಉಪ ವಿಭಾಗದ ಸಹಾಯಕ ಅಭಿಯಂತರ ಸೈಯದ್ ಯೂನಸ್ ಅವರು ಮಾತನಾಡಿ, ಗೃಹ ಜ್ಯೋತಿ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಯೋಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಇಲಾಖೆಯ ಗಮನಕ್ಕೆ ತರುವಂತೆ ಅವರು ತಿಳಿಸಿದರು.  

ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯೆ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಮಾನ್ವಿ ಪಾಷಾ, ಕಿರಿಯ ಅಭಿಯಂತರ ನಾಗೇಂದ್ರ ಓಣಿ, ಹಿರಿಯರಾದ ಇಸ್ಮಾಯಿಲ್ ಸಾಬ್ ಸಿದ್ದನಕೊಪ್ಪ, ಖಾಜಾ ಸಾಬ್ ಹನುಕುಂಟಿ, ಮದಾರನ್ ಸಾಬ್ ಪೀಟರ್, ಬಾಳೆಸಾಬ್ ಬೆಟಗೇರಿ, ರಿಯಾಜ್ ಹನುಕುಂಟಿ, ಮೆಹಬೂಬ್ ಹನುಕುಂಟಿ ಸೇರಿದಂತೆ ಹಲವರು, ಫಲಾನುಭವಿಗಳು, ಮಹಿಳೆಯರು ಹಾಗೂ ಜೆಸ್ಕಾಂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.