ಸಾವಿತ್ರಿಬಾಯಿಹಿಜ್ಯೋತಿಬಾ ಫುಲೆ ಸಮುದಾಯ ಭವನಕ್ಕೆ ಭೂಮಿಪೂಜೆ

ಸಾವಿತ್ರಿಬಾಯಿಹಿಜ್ಯೋತಿಬಾ ಫುಲೆ ಸಮುದಾಯ ಭವನಕ್ಕೆ ಭೂಮಿಪೂಜೆ Ground-breaking ceremony for the Savitribai-Jyotiba Phule Community Hall

ಲೋಕದರ್ಶನ ವರದಿ 

ರನ್ನ ಬೆಳಗಲಿ, ಸೆ. 8: ಪಟ್ಟಣದ ಮಾಳಿ ಸಮಾಜದ ವತಿಯಿಂದ ನಿರ್ಮಿಸಲಾಗುತ್ತಿರುವ ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ ಸಮುದಾಯ ಭವನದ ನಿರ್ಮಾಣಕ್ಕೆ ಮುಧೋಳ ಮತಕ್ಷೇತ್ರದ ಶಾಸಕ ಆರ್‌.ಬಿ. ತಿಮ್ಮಾಪುರ ಅವರು ಭೂಮಿಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್‌.ಬಿ. ತಿಮ್ಮಾಪುರ, ಶೋಷಿತ ವರ್ಗಗಳ ಮಹಿಳೆಯರಿಗಾಗಿ ದೇಶದಲ್ಲೇ ಮೊಟ್ಟಮೊದಲ ಶಾಲೆ ಸ್ಥಾಪಿಸಿ, ಅಕ್ಷರದ ಬೆಳಕು ನೀಡಿದ ಸಾವಿತ್ರಿಬಾಯಿ ಫುಲೆ ಅವರ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಭವನಕ್ಕೆ ಪ್ರಸ್ತುತ ?35 ಲಕ್ಷ ಅನುದಾನ ನೀಡಲಾಗಿದೆ. ಇನ್ನೂ ?15 ಲಕ್ಷ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಒಟ್ಟು ?50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು. 

ನಮ್ಮ ಸರ್ಕಾರ ಎಲ್ಲ ಸಮುದಾಯಗಳ ಮಹನೀಯರ ತ್ಯಾಗ, ಬಲಿದಾನ ಹಾಗೂ ಸಮಾಜ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಸ್ಮಾರಕಗಳನ್ನು ನಿರ್ಮಿಸುತ್ತಿದೆ. ಮಹನೀಯರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

ರಾಷ್ಟ್ರ ನಾಯಕರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ; ಅವರು ಇಡೀ ನಾಡಿನ ಆಸ್ತಿ. ಅಂತಹ ಮಹನೀಯರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.