ಅಜ್ಜ-ಅಜ್ಜಿಯಂದಿರ ದಿನಾಚರಣೆ ಮುತ್ತಜ್ಜ-ಮುತ್ತಜ್ಜಿಯರಿಗೆ ಗೌರವಪೂರ್ವಕ ಸನ್ಮಾನ

ಅಜ್ಜ-ಅಜ್ಜಿಯಂದಿರ ದಿನಾಚರಣೆ  ಮುತ್ತಜ್ಜ-ಮುತ್ತಜ್ಜಿಯರಿಗೆ ಗೌರವಪೂರ್ವಕ ಸನ್ಮಾನ Grandparents' Day is a respectful tribute to great-grandparents

ಶ್ರೀರಾಮನಗರ 22:  ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಮತ್ತು ಅಜ್ಜ-ಅಜ್ಜಿಯಂದಿರ ದಿನಾಚರಣೆಯನ್ನು ‘ತಲೆಮಾರುಗಳ ಹಬ್ಬ  ಬಂಧಗಳ ಸಂಭ್ರಮ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಲಾಗಿತ್ತು.   

ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ   ನೆಕ್ಕಂಟಿ ಸೂರಿಬಾಬು ಅವರು ವಿದ್ಯಾರ್ಥಿಗಳು ಬಾಲ್ಯದಿಂದಲೇ ಅವರ ತಂದೆ ತಾಯಿಗಳನ್ನು, ಅಜ್ಜ-ಅಜ್ಜಿಯಂದಿರನ್ನು ಹಾಗೂ ಗುರು-ಹಿರಿಯರನ್ನು, ಕುಟುಂಬವನ್ನು ಗೌರವಿಸುವ ಮತ್ತು ಪ್ರೀತಿಸುವಂತಹ ಸಂಸ್ಕಾರವನ್ನು ಬೆಳೆಸಲು ನಾವೆಲ್ಲರು ಪ್ರಯತ್ನಿಸಬೇಕು, ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಅಜ್ಜ-ಅಜ್ಜಿಯಂದಿರ ಪಾತ್ರ ಬಹುಮುಖ್ಯವಾದದ್ದು, ತಮ್ಮ ಪ್ರೀತಿಯ ಹಾರೈಕೆ, ಕಥೆಗಳು, ನೀತಿ ಪಾಠಗಳ ಮೂಲಕ ಮಕ್ಕಳಲ್ಲಿ ಉತ್ತಮ್ಮ ಮೌಲ್ಯಗಳನ್ನು ಬೆಳೆಸುತ್ತಿರುವ ಎಲ್ಲ ಪಾಲಕರಿಗೆ ಧನ್ಯವಾದಗಳನ್ನು ಸಲ್ಲಿಸಿ, ಶಾಲೆಯು ಬೆಳೆದು ಬಂದ ರೀತಿ, ಸಂಸ್ಥೆಯ ಏಳಿಗೆಗೆ ಪಾಲಕರು, ಗುರು-ಹಿರಿಯರು ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಸ್ಮರಿಸಿ, ಮುಂಬರುವ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಕೈಗೊಳ್ಳುವ ಯೋಜನೆಗಳ ಕುರಿತು ಮಾತನಾಡಿದರು. 

ತದನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಐ ವೆಂಕಟರಾವ್ ಅವರು   ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಈ ಭಾಗದಲ್ಲಿ ನೀಡುತ್ತಿರುವ ಶೈಕ್ಷಣಿಕ ಸೇವೆ ಮತ್ತು ಸೌಲಭ್ಯಗಳ ಕುರಿತು ಮಾತನಾಡಿದರು.  ಈ ಸಂದರ್ಭದಲ್ಲಿ ವೈದ್ಯರಾದ ಡಾ. ಲಕ್ಷ್ಮೀ ಅವರು ತಾವು   ವಿದ್ಯಾನಿಕೇತನ ಪಬ್ಲಿಕ್ ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ ದಿನಗಳನ್ನು ನೆನಪಿಸಿಕೊಂಡು, ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿರುವುದು ಮತ್ತು ಇಲ್ಲಿ ಕಲಿಸುತ್ತಿರುವ ಮೌಲ್ಯಗಳ ಪ್ರಸ್ತುತತೆಯನ್ನು ಕುರಿತು ಮಾತನಾಡಿದರು.  

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುತ್ತಜ್ಜ-ಮುತ್ತಜ್ಜಿಯರನ್ನು ಸಂಸ್ಥೆಯ ವತಿಯಿಂದ  ಸನ್ಮಾನಿಸಿ, ಗೌರವಿಸುವ ಮೂಲಕ ಹಿರಿಯ ಜೀವಗಳ ಆರ್ಶೀವಾದವನ್ನು ಪಡೆಯಲಾಯಿತು. ಯುಕೆಜಿ ವಿದ್ಯಾರ್ಥಿಗಳಿಗೆ ಪದವಿಪ್ರದಾನದ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಜ್ಜಿ   ವಿಜಯಲಕ್ಷ್ಮೀ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ನೃತ್ಯ-ರೂಪಕಗಳು ಜರುಗಿದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಲಕರಾದ   ಭೀಮಸೇನ್‌ರಾವ್ ಕುಲಕರ್ಣಿ ಅವರು ಹಾರ್ಮೋನಿಯಮ್ ವಾದ್ಯವನ್ನು ನುಡಿಸಿದರು. 

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾಣಿಜ್ಯೋದ್ಯಮಿಗಳಾದ   ಎನ್ ಗೋಪಾಲ ಕೃಷ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ   ಪಿಲ್ಲಿ ಕೊಂಡಯ್ಯ, ಹಿರಿಯರಾದ   ವಿಶ್ವೇಶ್ವರ್‌ರಾವ್,   ಸತ್ಯವತಿ,   ಸಿ.ಹೆಚ್ ಗುರುಪ್ರಸಾದರಾವ್,  ಶಂಕುತಲಾ,   ಶಂಕ್ರ​‍್ಪ ಬಸಾಪಟ್ಟಣ,   ಲಕ್ಷ್ಮಣ್ ಈಳಿಗನೂರು,   ಶಾಲೆಯ ಉಪಾಧ್ಯಕ್ಷರಾದ   ನೆಕ್ಕಂಟಿ ಆದರ್ಶ, ಶಾಲೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಅಖಿಲಾ ನೆಕ್ಕಂಟಿ, ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ   ನರೇಶ್ ವೈ, ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ   ಕೃಷ್ಣವೇಣಿ. ಎಸ್,  ಕ್ಯಾಂಪಸ್ ಮ್ಯಾನೇಜರ್   ಜಿ. ನಾಗೇಶ್ವರ್‌ರಾವ್, ಶಾಲೆಯ ಉಪಪ್ರಾಂಶುಪಾಲ  ಲಕ್ಷ್ಮೀ ಜೆ, ಶಾಲೆಯ ಪಿ.ಅರ್‌.ಎಮ್   ನಿಂಗಪ್ಪ, ಅಧ್ಯಕ್ಷರ ಕಾರ್ಯದರ್ಶಿಗಳಾದ   ಮಂಜುನಾಥ, ವಸತಿನಿಲಯದ ಮುಖ್ಯನಿಲಯ ಪಾಲಕ   ಕಾಳೇಶ, ಶಾಲೆಯ ಪಿ.ಆರ್‌.ಓ   ಮಲ್ಲನಗೌಡ ಪಾಟೀಲ್, ಪಾಲಕರು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.