ಸಂಭ್ರಮದ ಗಣೇಶೋತ್ಸವ; ಭವ್ಯ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿ ವಿಸರ್ಜನೆ

ಸಂಭ್ರಮದ ಗಣೇಶೋತ್ಸವ; ಭವ್ಯ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿ ವಿಸರ್ಜನೆ  Grand Ganeshotsava; immersion of the Ganesha idol with a magnificent procession


ಕೊಲ್ಹಾರ 22 : ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿ ಎಐಎಂಎಸ್ ಫೌಂಡೇಶನ್ ವತಿಯಿಂದ ಸ್ಥಾಪಿಸಲಾಗಿದ್ದ ಶ್ರೀ ಗಜಾನನ ತರುಣ ಮಂಡಳಿಯ 2ನೇ ವರ್ಷದ ಗಣೇಶೋತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.  

ಗಣೇಶೋತ್ಸವದ ಅಂಗವಾಗಿ ಹಲವು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಯುವಕರು, ಮಕ್ಕಳು ಹಾಗೂ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಡೊಳ್ಳು, ತಾಳಮದ್ದಳೆ ಹಾಗೂ ಭಜನಾ ತಂಡಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತಿಗೀತೆಗಳು ಮೊಳಗಿದವು.  

ಗಣೇಶೋತ್ಸವವು ಗ್ರಾಮದಲ್ಲಿ ಸೌಹಾರ್ದ, ಭಕ್ತಿ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಸಾಕ್ಷಿಯಾಯಿತು. ಉತ್ಸವದ ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಭಕ್ತರು, ಗ್ರಾಮಸ್ಥರು, ಯುವಕರು ಹಾಗೂ ಗಣೇಶೋತ್ಸವ ಮಂಡಳಿಯ ಎಲ್ಲ ಪದಾಧಿಕಾರಿಗಳಿಗೆ ಮಂಡಳಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಶ್ರೀ ಸ.ಸ. ನಾಗಲಿಂಗೇಶ್ವರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸ.ಸ. ಸದಾನಂದ ಮಹಾರಾಜರು, ಶ್ರೀ ಸದಾಶಿವಯ್ಯ ಹಿರೇಮಠ ಸ್ವಾಮೀಜಿ, ಫೌಂಡೇಶನ್ ಅಧ್ಯಕ್ಷ ಶಿವಾನಂದ ಕಾಗಳ, ಪರಶುರಾಮ ಈ. ಮುಳವಾಡ, ರಾಘವೇಂದ್ರ ಕಲಬುರ್ಗಿ, ಗಂಗಾಧರ ಹಿರೇಮಠ, ಸಂಜು ಪಾಂಡ್ರೆ, ಅರುಣ ಶಿರೂಳ ಸೇರಿದಂತೆ ಮಂಡಳಿ ಪದಾಧಿಕಾರಿಗಳು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.