ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ನಡೆ: ಸಂವಿಧಾನದ ಶಿಕ್ಷಣದ ಹಕ್ಕಿಗೆ ಕೊಡಲಿ ಪೆಟ್ಟು - ಬಸವರಾಜ ಎಸ್

ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ನಡೆ: ಸಂವಿಧಾನದ ಶಿಕ್ಷಣದ ಹಕ್ಕಿಗೆ ಕೊಡಲಿ ಪೆಟ್ಟು - ಬಸವರಾಜ ಎಸ್ Government's move to close government schools: An ax blow to the constitutional right to education -

 ಹಾವೇರಿ 27 : ಸರ್ಕಾರ ಕೆಪಿಎಸ್ಸಿ ಶಾಲೆಯ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವು ಸಂವಿಧಾನದ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಹೇಳಿದರು.ನಗರದ ಶ್ರೀಶಕ್ತಿ ತೆರೆದ ತಂಗುದಾಣದಲ್ಲಿ ಏರಿ​‍್ಡಸಿದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು  ನೆರವೇರಿಸಿ ಮಾತನಾಡಿದ, ಅವರು ಸಂವಿಧಾನವನ್ನು ಉಳ್ಳವರು, ಇಲ್ಲದವರು ಮಧ್ಯೆ ನಡೆಯುವ ಅಸಮಾನತೆ ತೊಲಗಿಸಿ ಸಮಾನತೆಯ ಬದುಕಿಗಾಗಿ, ದೇಶದ ಉನ್ನತ ಭವಿಷ್ಯಕ್ಕಾಗಿ ಕಾಪಾಡಿಕೊಳ್ಳಬೇಕು. ಬಾಬಾ ಸಾಹೇಬ್  ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನವು ನೀಡಿರುವ ಶಿಕ್ಷಣದ ಹಕ್ಕುಗಳನ್ನು ಆಳ್ವ ವರ್ಗ ದಾರಿತಪ್ಪಿಸುತ್ತಿವೆ.

ಯಾವ ದೇಶದಲ್ಲಿ ಗ್ರಂಥಾಲಯಗಳ ಮುಂದೆ ಅಧ್ಯಯನಕ್ಕಾಗಿ ಅತೊರೆಯುತ್ತವೆ ಆಗ ಮಾತ್ರ ಆ ದೇಶವನ್ನು ಅಭಿವೃದ್ಧಿ ಹೊಂದಲು ಸಾದ್ಯ ಎಂದು ಹೇಳಿದ ಅಂಬೇಡ್ಕರ್ ಅವರು ಸಂದೇಶ ಪ್ರಸ್ತುತವಾಗಬೇಕು. ಶಿಕ್ಷಣ ಹಕ್ಕು ಕಾಯಿದೆ ( ಖರಣ ಖಿಠ ಇಜಣಛಿಚಿಣಠ 2009) ಸಮರ​‍್ಕವಾಗಿ ಜಾರಿಯಾಗಬೇಕು ಶಿಕ್ಷಣ ದಿಂದ ವಂಚಿತ ಮಕ್ಕಳಿಗೆ ಉಚಿತ ಶಿಕ್ಷಣ, ಸಮಾನಾಂತರ ಶಿಕ್ಷಣ ಸಿಗಬೇಕು ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂವಿಧಾನ ಆಶಯಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಹೇಳಿದರು. 

ಮುಖ್ಯಾಥಿತಿಗಳಾಗಿ ಭಾಗವಹಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡಬೇಕು ಆಗ ಪರಿಪೂರ್ಣ ಶಿಕ್ಷಣ ಪಡೆಯಲು ಸಾದ್ಯ. ಖಾಸಗಿ ಶಾಲೆಯ ಶಿಕ್ಷಕರಿಗಿಂತ ಸರ್ಕಾರಿ ಶಾಲೆಯ ಶಿಕ್ಷಕರ ಉತ್ತಮ ಶಿಕ್ಷಣವನ್ನು ಬೋಧಿಸುತ್ತಾರೆ. ಪೋಷಕರ ಕಾಳಜಿಯುತವಾಗಿ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಲು ಮುಂದಾಗಬೇಕು. ಸರ್ಕಾರಿ ಶಾಲೆಗಳಲ್ಲಿ ನೀಡುವ ಸರ್ಕಾರಿ ಸೌಲಭ್ಯಗಳು ಬಡತನ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸುತ್ತೇವೆ ಎಂದರು. ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆಯ ಹಸೀನಾ ಹೆಡಿಯಾಲ ಮಾತನಾಡಿ, ಸಂವಿಧಾನ ಓದಿದರೆ ಮಾತ್ರ ದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣ, ಸಂಘಟನೆ, ಹೋರಾಟ ನಮ್ಮ ಅಸ್ತ್ರವಾಗಬೇಕು. ಎಲ್ಲರಿಗೂ ಶಿಕ್ಷಣ ಸಿಗುವತ್ತಾಗಬೇಕು. ಶಿಕ್ಷಣ ಎಂಬುದು ಹುಲಿ ಹಾಲಿದಂತೆ ಕುಡಿದವರು ಘರ್ಜಸಲೆಬೇಕು ಎಂದು ಅಂಬೇಡ್ಕರ್ ಹೇಳಿದ ಮಾತು ಮನದಟ್ಟು ಮಾಡಿಕೊಳ್ಳಬೇಕು ಎಂದರು.

ಶ್ರೀಶಕ್ತಿ ತೆರೆದ ತಂಗುದಾಣದ ಮುಖ್ಯಸ್ಥರಾದ ಪುಟ್ಟಪ್ಪ ಹರವಿ ಮಾತನಾಡಿ, ನಮ್ಮ  ದೇಶವನ್ನು ಬ್ರಿಟಿಷರೂ ಸುಮಾರು ವರ್ಷಗಳ ಕಾಲ  ಆಳ್ವಿಕೆ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರಾದ  ಅಂಬೇಡ್ಕರ, ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ, ಮತ್ತು ಭಗತ್ ಸಿಂಗ್ ಇತ್ಯಾದಿ ಹೋರಾಟಗಾರರು ನಮ್ಮ ದೇಶಗೋಸ್ಕರ ಬಲಿದಾನ ಮಾಡಿದರು.   ಮಹಾನ್ ಮಾನವತಾವಾದಿ ಆಗಿರುವಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ತನಗೆ ಆಗಿರುವಂತಹ ಅವಮಾನವನ್ನು ನನ್ನ ಪ್ರಜೆಗಳು  ಕೂಡ ಸಹಿಸಿಕೊಳ್ಳಬಾರದೆಂದು ಹಾಗೆ ನನ್ನ ಪ್ರಜೆಗಳಿಗೆ ಯಾವುದೇ ರೀತಿಯ ಮೇಲು  ಕೀಳು ಎಂಬ ಭಾವನೆ ಬಿಟ್ಟು ಎಲ್ಲರೂ ಒಂದೇ ಅನ್ನೋ ಮನೋಭಾವನೆ  ಇಟ್ಟುಕೊಂಡು ಈ ಸಂವಿಧಾನವನ್ನು ತಂದು ಕೊಟ್ಟರು ಎಂದರು.

ಎಸ್‌ಎಫ್‌ಐ ಮುಖಂಡರಾದ ಚೈತ್ರಾ ಕೊರವರ ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧನೆ ಮಾಡಿದರು. ತಂಗುದಾಣದ ವಿದ್ಯಾರ್ಥಿಗಳಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಡುಗಳನ್ನು ಹಾಗೂ ದೇಶ, ಕನ್ನಡಾಭಿಮಾನದ ವಿವಿಧ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್, ಸಿಬ್ಬಂದಿ ವರ್ಗದ ಮನೋಜ್  ಕುಮಾರ್ , ಪ್ರಭಾ  ಸಾಲಿಮಠ, ದೀಪಾ ಹೊಳೆಯಪ್ಪನವರ, ಪವಿತ್ರ ವಿ, ಉಮಾ  ವೈ, ವಿದ್ಯಾರ್ಥಿ ಮಾಲತೇಶ ಕೋಡಿಹಳ್ಳಿ, ತೇಜು ಸಿದ್ದಣ್ಣನವರ, ನಾಗರಾಜ್ ದುರ್ಮುರಾಗಿ, ಆಕಾಶ್ ಸಂಗಪ್ಪ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.