ಕನ್ನಡ ಸಾಹಿತ್ಯಕ್ಕೆ ನವ್ಯಸ್ವರೂಪ ನೀಡಿದ ಗೋಕಾಕರು

ಕನ್ನಡ ಸಾಹಿತ್ಯಕ್ಕೆ ನವ್ಯಸ್ವರೂಪ ನೀಡಿದ ಗೋಕಾಕರು Gokaka who gave a new shape to Kannada literature

ಲೋಕದರ್ಶನ ವರದಿ 

       ಹಾವೇರಿ 30:  ಕನ್ನಡ ಸಾಹಿತ್ಯಕ್ಕೆ  ನವ್ಯ ಸ್ವರೂಪ ನೀಡಿದ ಗೋಕಾಕರು,  ನಮ್ಮ ನೆಲದ ಹೆಮ್ಮೆ. ಅವರ ಸ್ಮರಣೆ ಎಂದರೆ ಆಧುನಿಕ ಕನ್ನಡ ಸಾಹಿತ್ಯದ ಸ್ಮರಣೆ ಮಾಡಿದಂತೆ.  ಕನ್ನಡಕ್ಕೆ ಕೆಲವು ಜ್ಞಾನಪೀಠ ಪ್ರಶಸ್ತಿ ಬರುವಲ್ಲಿ ಅವರ ಪಾತ್ರ ಬಹಳ ದೊಡ್ಡದು.    ಗೋಕಾಕ ಎಂದರೆ ಕನ್ನಡ ಚೈತನ್ಯ  ಎಂದು  ಗೋಕಾಕ ಟ್ರಸ್ಟಿನ ನೂತನ  ಅಧ್ಯಕ್ಷ  ಡಾ.ಸತೀಶ ಕುಲಕರ್ಣಿ ನುಡಿದರು. 

ಸವಣೂರ ಪಟ್ಟಣದ   ಲಲಿತಾ ಗುರುಶಿದ್ಧಪ್ಪ ಸಿಂಧೂರ  ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ  ಟ್ರಸ್ಟ್‌ನಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ವಿ.ಕೃ. ಗೋಕಾಕ ಅವರ  35ನೇ ಪುಣ್ಯಸ್ಮರಣೆ ಅಂಗವಾಗಿ “ಗೋಕಾಕರಿಗೆ ನುಡಿ ನಮನ” ಕಾರ್ಯಕ್ರಮ ಜರುಗಿತು.   

ಹೊಸ ಸಮತಿ ರಚೆಯಾದ ನಂತರ  ಸವಣೂರು ಮತ್ತು ಅಲ್ಲಿಯ ಗೋಕಾಕ ಸಭಾ ಭವನದ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಭವನ ಮೊದಲ ಮಹಡಿಯಲ್ಲಿ ಗೋಕಾಕರ ಎಲ್ಲ ಪುಸ್ತಕಗಳು ಮತ್ತು ಅವರ ಜೀವನದ ಮಹತ್ವದ ಭಾವಚಿತ್ರಗಳನ್ನು ವಿನ್ಯಾಸಗೊಳಿಸಲಾಗುವುದು ಎಂದು ಹೇಳಿದರು.   

ಅಧ್ಯಕ್ಷತೆ ವಹಿಸಿದ ಸಿಂಧೂರ ಕಾಲೇಜಿನ  ಪ್ರಾಚಾರ್ಯ ಪ್ರವೀಣ  ಆನಂದಕಂದ ಅವರು ನಮ್ಮ ಕಾಲೇಜಿನಲ್ಲಿ ಗೋಕಾಕರ ಸ್ಮರಣೆ ನಡೆಯುವುದು  ಹೊಸ ಪೀಳಿಗೆಗೆ ಅವರನ್ನು ಪರಿಚಯಿಸಿದಂತೆ ಎಂದರು. 

ಈ ಸಂದರ್ಭದಲ್ಲಿ ಜರುಗಿದ ಗೋಕಾಕರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯರಾದ  ಸಾಹಿತಿ ಮಾರುತಿ ಶಿಡ್ಲಾಪೂರ ಅವರು ಗೋಕಾಕರನ್ನು ಓದುವುದೆಂದರೆ ಹೊಸಗನ್ನಡದ ಸಾಹಿತ್ಯವನ್ನು ಓದಿದಂತೆ. ಅವರ ಕನ್ನಡ ಕಾಳಜಿ  ಬಹಳ ದೊಡ್ಡದು ನಮ್ಮ ನೆಲದ ಹೆಮ್ಮೆ ಅವರು  ಎಂದು   

ಇನ್ನೊರ್ವ ಸದಸ್ಯರಾದ ಡಾ. ಜಗನ್ನಾಥ ಗೇನಣ್ಣವರ ಮಾತನಾಡಿ, ಕನ್ನಡ ಕಾವ್ಯಕ್ಕೆ  ಮುಕ್ತ ಚಂದ ಕಾವ್ಯಪ್ರಯೋಗ ತಂದ ಎಂದು ಹೇಳಿ ಅವರ ಕುಟುಂಬ ಪ್ರೇಮ ಮತ್ತು ಸವಣೂರಿನ ಮೇಲೆ  ಅವರಿಗೆ ಇದ್ದ ಅಭಿಮಾನ ಎಲ್ಲರಿಗೂ ಮಾದರಿ ಎಂದರು. 

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್, ಪಾಟೀಲರು ಸವಣೂರನ್ನು  ಇಡೀ ವಿಶ್ವಕ್ಕೆ  ಪರಿಚಯಿಸಿದ ಕೀರ್ತಿ ಗೋಕಾಕರಿಗೆ ಸಲ್ಲುತ್ತದೆ.  ಹಲವು ತಲೆಮಾರುಗಳಿಗೆ  ವೈವಿದ್ಯಮಯ ಸಾಹಿತ್ಯ ನೀಡಿದವರು ಗೋಕಾಕರು ಎಂದರು.  ವಿದ್ಯಾರ್ಥಿನಿಯರಾದ  ಯಮುನಾ ಹಟ್ಟಿ, ಸವಿತಾ ಕುರುಬರ  ಮಾತನಾಡಿದರು ಕನ್ನಡ ಉಪನ್ಯಾಸಕರಾದ ಎಸ್‌.ಎಸ್‌. ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು.   

ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಎಂ.ಎಚ್‌.ಹೆಬ್ಬಾಳ , ಎಫ್‌.ಬಿ. ನಾಯ್ಕರ್, ಐಕ್ಯೂಎಸಿ ಘಟಕದ  ವಿಶ್ವನಾಥ ಯತ್ತಿನಹಳ್ಳಿ , ವಿಶ್ವನಾಥ ಹಾವಣಗಿ  ಲೇಖಕಿ ಲತಾ ವಾಲಿ ಪೂರ್ಣಿಮಾ ಬೆಣ್ಣಿ, ಶಿವಲೀಲಾ ಕಲ್ಮಟ, ಪುಷ್ಪಾ ಬೆಣ್ಣಿ , ಸುನಂದಾ ಚಿನ್ನಾಪೂರ , ಪುಷ್ಪಾ ಗಾಣಿಗೇರ , ಬಸವರಾಜ ಬಿ, ಕೆ.ಎನ್‌. ಜಾನ್ವೇಕರ  ಮುಂತಾದವರು ಉಪಸ್ಥಿತರಿದ್ದರು. ವಿಶ್ವನಾಥ ಯತ್ತಿನಹಳ್ಳಿ ಸ್ವಾಗತಿಸಿದರು. ಎಲ್ಲಮ್ಮ ರಟಗೇರಿ ಕಾರ್ಯಕ್ರಮ ನಡೆಸಿದರು. ಕೊನೆಯಲ್ಲಿ ಸಂಗೀತ ರಿತ್ತಿ ವಂದಿಸಿದರು.