ಗೋಕಾಕರ ಸಾಹಿತ್ಯ ಹೊಸ ಕವಿಗಳಿಗೆ ಸ್ಫೂರ್ತಿ: ಬೆಟಗೇರಿ
Gokak's literature is an inspiration for new poets: Betageri
ಲೋಕದರ್ಶನ ವರದಿ
ಹಾವೇರಿ, ಆ.11: ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಇಲ್ಲಿನ ಗುರುಭವನದ ಎದುರಿನ ಗೋಕಾಕರ ಮೂರ್ತಿಗೆ ಮಾಲಾರೆ್ಣ ಮಾಡುವ ಮೂಲಕ ಅವರ 117ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕನ್ನಡಕ್ಕೆ ಕೇಂದ್ರ ಜ್ಞಾನಪೀಠ ಪ್ರಶಸ್ತಿಗಳ ಹಿಂದೆ ಗೋಕಾಕರ ಪಾತ್ರ ಬಹುದೊಡ್ಡದು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅದ್ಭುತ ಪ್ರಬುದ್ಧತೆ ಹೊಂದಿದ್ದ ಗೋಕಾಕರು ಕನ್ನಡ ಭಾಷೆಯ ಸತ್ವವನ್ನು ವಿಶ್ವದೆತ್ತರಕ್ಕೆ ಪರಿಚಯಿಸಿದವರು ಎಂದು ಟ್ರಸ್ಟ್ ಸದಸ್ಯ ಲಿಂಗರಾಜ ಸೊಟ್ಟಪ್ಪನವರ ಹೇಳಿದರು.
ಹಿರಿಯ ನ್ಯಾಯವಾದಿ ಎಸ್.ಜೆ. ಹೊನ್ನಪ್ಪ ಮಾತನಾಡಿ, ಗೋಕಾಕರ ಸಾಹಿತ್ಯವನ್ನು ಎಲ್ಲರಿಗೂ ಪರಿಚಯಿಸುವ ಕಾರ್ಯ ನಡೆಯಬೇಕು. ತಾವು ಕನ್ನಡ ಪ್ರೇಮಿಯಾಗಿದ್ದು, ಟ್ರಸ್ಟ್ನ ಚಟುವಟಿಕೆಗಳಿಗೆ ಸದಾ ಸ್ಪಂದಿಸುವುದಾಗಿ ಹೇಳಿದರು.
ಅತಿಥಿ ಪೃಥ್ವಿರಾಜ ಬೆಟಗೇರಿ ಮಾತನಾಡಿ, ಗೋಕಾಕರ ‘ಸಮುದ್ರ ಗೀತೆಗಳು’ ಇಂದಿಗೂ ಹೊಸ ಕವಿಗಳಿಗೆ ಸ್ಫೂರ್ತಿ ನೀಡುತ್ತಿವೆ. ಯುವ ಪೀಳಿಗೆ ಗೋಕಾಕರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಕೆ. ಕರ್ಜಗಿ, ಮೊಹಮ್ಮದ್ ಫೈಜಾನ್, ಮುತ್ತುರಾಜ ಮಾದರ, ಮೌನೇಶ ಅರ್ಕಸಾಳಿ, ಶ್ರೀನಿವಾಸರಾವ್ ಹಂಚಾಟೆ, ಈರಣ್ಣ ಬೆಳವಡಿ, ಡಾ. ಜಗನ್ನಾಥ ಗೇಣಣ್ಣವರ, ಅಲೆಮಾರಿ ಜನಾಂಗದ ಶೆಟ್ಟಿ ವಿಭೂತಿ ಹಾಗೂ ಟ್ರಸ್ಟ್ ಅಧ್ಯಕ್ಷ ಸತೀಶ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 