ಮಳೆ ದೇವರು ಕೊಡುತ್ತಾನೆ, ಅದರ ಹಂಚಿಕೆ ಸರ್ಕಾರ ಮಾಡಬೇಕು: ಮಹಾಂತೇಶ ದೊಡ್ಡಗೌಡರ
God provides the rain; the government must handle its distribution: Mahantesh Doddagoudar
ನೇಸರಗಿ ೨೪ : ದೇವರು ಸರಿಯಾದ ಸಮಯಕ್ಕೆ ಮಳೆ ನೀಡುತ್ತಾನೆ. ಮಳೆಯ ನೀರು ಆಣೆಕಟ್ಟಿನಲ್ಲಿ ಸಂಗ್ರಹವಾಗುತ್ತದೆ. ಆ ನೀರನ್ನು ನೀರಾವರಿ ಕಾಲುವೆಗಳ ಮೂಲಕ ಹಾಗೂ ಏತ ನೀರಾವರಿ ಯೋಜನೆಗಳ ಮೂಲಕ ರೈತರ ಬೆಳೆಗಳಿಗೆ ಮತ್ತು ಜನರಿಗೆ ಕುಡಿಯುವ ನೀರಾಗಿ ಒದಗಿಸುವ ಕಾರ್ಯವನ್ನು ಸರ್ಕಾರ ಹಾಗೂ ಅಧಿಕಾರಿಗಳು ಮಾಡಬೇಕು ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. ಸೋಮವಾರ ಸಮೀಪದ ವಣ್ಣೂರ ಗ್ರಾಮದಲ್ಲಿ ಚಚಡಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀರು ಒದಗಿಸಬೇಕು ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಸ್ತೆಯಲ್ಲಿ ನಡೆದ ರಸ್ತೆ ತಡೆ ಹೋರಾಟದಲ್ಲಿ ರೈತರನ್ನುದ್ದೇಶಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಏತ ನೀರಾವರಿ ಯೋಜನೆಯ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮಾರ್ಕಂಡೇಯ ನದಿಯಿಂದ ನೀರು ತರುವ ಕಾರ್ಯ ಕೈಗೊಳ್ಳಬೇಕು. ಕಾಮಗಾರಿಗಾಗಿ ಭೂಮಿ ನೀಡಿದ ರೈತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡೆ ಲಕ್ಷಿö್ಮÃ ಇನಾಮದಾರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಚಚಡಿ ಏತ ನೀರಾವರಿ ಯೋಜನೆಗೆ ನಯಾಪೈಸೆ ಖರ್ಚು ಮಾಡಿಲ್ಲ. ಸರ್ಕಾರ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ವಣ್ಣೂರ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಮಾತನಾಡಿ, ಈ ಭಾಗದ ರೈತರ ಬಹುಕಾಲದ ಕನಸಿನ ಯೋಜನೆಯಾದ ಚಚಡಿ ಏತ ನೀರಾವರಿ ಯೋಜನೆಯು ವಣ್ಣೂರ, ಚಚಡಿ, ಸುನಕುಂಪಿ, ಮಾಸ್ತಮರಡಿ, ಹಣಬರಹಟ್ಟಿ ಹಾಗೂ ಮೇಕಲಮರಡಿ ಗ್ರಾಮಗಳ ಜನರ ಜೀವನಾಡಿಯಾಗಿದೆ. ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ರೈತ ಹೋರಾಟಗಾರರ ಅಹವಾಲು ಸ್ವೀಕರಿಸಿ ಮಾತನಾಡಿದ ಬೈಲಹೊಂಗಲ ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಚಚಡಿ ಏತ ನೀರಾವರಿ ಯೋಜನೆ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ, ನವೆಂಬರ್ನಲ್ಲಿ ಯೋಜನೆಗೆ ಕಾಯಕಲ್ಪ ದೊರೆಯುವಂತೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಈ ರೈತ ಹೋರಾಟದಲ್ಲಿ ಶ್ರೀಕರ ಕುಲಕರ್ಣಿ, ಸಂದೀಪ ದೇಶಪಾಂಡೆ, ನಾಗಪ್ಪ ಬಶೆಟ್ಟಿ ಹಾಗೂ ಮಹಾಂತೇಶ ಕೂಲಿನವರ ಮಾತನಾಡಿದರು. ಬಸಲಿಂಗಪ್ಪ ಬಶೆಟ್ಟಿ, ಶ್ಯಾಮ ಶಿಲ್ಲೇದಾರ, ಅಡಿವಪ್ಪ ಹೊಸಮನಿ, ಮಹಾಂತೇಶ ಮೋಹರೆ, ರವಿಕುಮಾರ ಪಾಟೀಲ, ಭೀಮಪ್ಪ ಸೋಮನಟ್ಟಿ, ಪ್ರಕಾಶ ಕಿರಗಿ, ವಿಜಯ ಯಡಾಲ, ಹಣಮಂತ ದೊಡ್ಡನವರ, ಈಶ್ವರ ಭಾಗೋಜಿ, ಬಸವರಾಜ ಅಂಗಡಿ, ನಾಗಪ್ಪ ಮುತ್ತೇನ್ನವರ, ಬಾಳಪ್ಪ ದಳವಾಯಿ, ಮಲ್ಲೇಶ ಚಿಕ್ಕೋಡಿ, ಪಿ.ಯು. ಹಿರೇಮಠ, ಸಂತೋಷ ಗೋವಿ, ಈರಪ್ಪ ಕೊಳವಿ, ಎಚ್.ಬಿ. ಕಿಲ್ಲೆದಾರ, ನಿಂಗಪ್ಪ ಕೊತಳಿ, ಅಪ್ಪಣ್ಣ ಬಶೆಟ್ಟಿ, ಸಿದ್ದಪ್ಪ ಹಣ್ಣಿಕೇರಿ, ಗಂಗಪ್ಪ ಆಡಿನ, ಸನಿಂಗಪ್ಪ ಆಡಿವೇರ, ಲಕ್ಕಪ್ಪ ಹಳಬನ್ನವರ, ಸದೆಪ್ಪ ಕಿಲಾರಿ, ಮಾರುತಿ ಕೆಳಗೇರಿ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗವಹಿಸಿದ್ದರು.
ಗೋಕಾಕ ನೀರಾವರಿ ಇಲಾಖೆಯ ಇಂಜಿನಿಯರ್ ಕಾಖಂಡಕಿ, ಡ್ಯಾಂ ಅಧಿಕಾರಿ ಕಟ್ಟಿಮನಿ ಹಾಗೂ ನೇಸರಗಿ ಸಿಪಿಐ ಗಜಾನನ ನಾಯ್ಕ ಅವರು ಸ್ಥಳದಲ್ಲಿದ್ದು, ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. ಬೆಳಿಗ್ಗೆ ೯ರಿಂದ ಮಧ್ಯಾಹ್ನ ೩ರವರೆಗೆ ರಸ್ತೆಯಲ್ಲಿ ರಸ್ತೆ ತಡೆ ಹೋರಾಟ ನಡೆಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 