ಎಲ್ರ ಕಾಲೆಳಿಯುವ ಇದ್ನೋಡಕ್ಕೆ ಪ್ರೇಕ್ಷಕರೊಮ್ಮಿ ಹೋಗಿಬಿಡಿ
ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಬೆಳೆದರು ಭೌಗೋಳಿಕವಾಗಿ ಪರಿಸರದಲ್ಲಿ ನಡೆಯುವ ಎಷ್ಟೋ ವಿಸ್ಮಯಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಅಂತಹ ಒಂದು ವಿಸ್ಮಯದ ಸುತ್ತ ನಡೆಯುವ ಸಿನಿಮಾವೇ 'ಎಲ್ರ ಕಾಲೆಳಿಯತ್ತೆ ಕಾಲ'. ಅದೊಂದು ವಿಚಿತ್ರವಾದ ಊರು. ಇದ್ನೋಡು ಆ ಹಳ್ಳಿಯ ಹೆಸರು. ಅಲ್ಲಿ ಗಡಿಯಾರ ಇಲ್ಲ. ಇದ್ದರೂ ಅದು ನಡೆಯಲ್ಲ. ಅಲ್ಲಿಯ ಜನ ಸಮಯವನ್ನು ಹೇಗೆ ತಿಳಿಯುತ್ತಾರೆ ಎಂಬುದು ಆ ಊರಿಗೆ ಆಕಸ್ಮಿಕವಾಗಿ ಬಂದ ವಿಜಯ್ (ಚಂದನ್ ಶೆಟ್ಟಿ)ಗೆ ಇರುವ ಕುತೂಹಲ. ಬೆಂಗಳೂರಿಗೆ ಹೋಗಬೇಕಿದ್ದ ವಿಜಯ್ ಅಚಾನಕ ಆಗಿ ನಿಂತ ಬಸ್ಸಿನಿಂದ ಇಳಿದು ಇದ್ನೋಡು ಪ್ರವೇಶಿಸುತ್ತಾನೆ. ಅಲ್ಲಿ ನಡೆಯುತ್ತಿದ್ದ ಭರತನಾಟ್ಯ ನೋಡುತ್ತಾ ಬಸ್ ಮಿಸ್ ಮಾಡಿಕೊಳ್ಳುತ್ತಾನೆ. ಮುಂದಿನ ಬಸ್ ಇರೋದು ಮರುದಿನ ಬೆಳಿಗ್ಗೆ. ಹೀಗೆ ರಾತ್ರಿ ಇದ್ನೋಡನಲ್ಲಿ ಒಬ್ಬಂಟಿಯಾದ ವಿಜಯ್‌ಗೆ ಆತನ ಗೆಳೆಯ ಪರಮ್ (ಸುಜಯ್ ಶಾಸ್ತ್ರಿ) ಸಿಗುತ್ತಾನೆ. ರಾತ್ರಿ ಪರಮನ ಮನೆಯಲ್ಲಿ ಉಳಿಯುವ ವಿಜಯ್‌ಗೆ ಮರುದಿನ ಬೆಳಗಿನ ಬಸ್ ಕೂಡ ತಪ್ಪುತ್ತದೆ. ಸಮಯವೇ ತೋರಿಸದ ಆ ಊರಲ್ಲಿ ಬೆಳಿಗ್ಗೆ ಬರುವ ಒಂದೇ ಬಸ್ ಹಿಡಿಯುವುದೇ ವಿಜಯ್‌ಗೆ ಹರ ಸಾಹಸ.
ಹೀಗೆ ಮೂರು ದಿನ ಬೆಂಗಳೂರಿಗೆ ಹೋಗಲಾಗದೆ ಇದ್ನೋಡದಲ್ಲಿ ಪರದಾಡುವ ವಿಜಯ್ ಅಲ್ಲಿಯ ಜನ, ಪರಿಸರ, ಆಚಾರ ವಿಚಾರಗಳ ಬಗ್ಗೆ ತಿಳಿಯುತ್ತಾ ಅವರಲ್ಲಿ ಒಬ್ಬನಾಗಿಬಿಡುತ್ತಾನೆ. ಜೊತೆಗೆ ತಾನು ಪುರಾತತ್ವ ಇಲಾಖೆಯಲ್ಲಿ ಇರೋದ್ರಿಂದ ಇಲ್ಲಿ ಸಮಯ ಯಾಕೆ ನಡೆಯಲ್ಲ ಎಂದು ತಿಳಿಯುವ ಸಾಹಸಕ್ಕೆ ಕೈ ಹಾಕುತ್ತಾನೆ. ಆಕಸ್ಮಿಕವಾಗಿ ಇದ್ನೋಡುಗೆ ಬಂದ ವಿಜಯ್ ಅಲ್ಲಿ ಏನೆಲ್ಲಾ ಸಾಹಸ ಮಾಡುತ್ತಾನೆ? ಆ ಹಳ್ಳಿಗೆ ಇದ್ನೋಡು ಎಂಬ ಹೆಸರು ಬಂದದ್ದು ಯಾಕೆ? ಅಲ್ಲಿ ಸಮಯ ಯಾಕೆ ನಿಂತೋಗುತ್ತೆ ಎಂಬ ಅಂಶ ತಿಳಿಯಲು 'ಎಲ್ರ ಕಾಲೆಳಿಯತ್ತೆ ಕಾಲ' ನೋಡಲೇ ಬೇಕು.
ಇದೊಂದು 90ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಚಿತ್ರದಲ್ಲಿ ಆಗಾಗ ಐತಿಹಾಸಿಕ ಘಟನೆಗಳು ನೋಡಲು ಸಿಗುತ್ತವೆ. ವಿಜಯನ ಈ ಇದ್ನೋಡು ಜರ್ನಿಯಲ್ಲಿ ಮೆಸ್ ವಸಂತಾ (ಅರ್ಚನಾ ಕೊಟ್ಟಿಗೆ), ಮಂಜೆಗೌಡ (ಮಂಡ್ಯ ರಮೇಶ್), ಮಾವ (ಮಂಜು ಪಾವಗಡ), ರಿಂದವ್ವ (ತಾರಾ) ಹೀಗೆ ಹತ್ತಾರು ಜನ ಹೇಗೆ ಸಾಥ್ ನೀಡುತ್ತಾರೆ. ಎಂಬುದನ್ನು ನಿರ್ದೇಶಕರು ಮನರಂಜನೆ ಮೂಲಕ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಪಕ್ಕಾ ಹಳ್ಳಿ ಸೊಗಡಿನ ಮನರಂಜನಾ ಚಿತ್ರವಾಗಿದ್ದು, ಪ್ರವೀಣ್ ್ಘ ಪ್ರದೀಪ್ ಸಂಗೀತ ಪ್ರೇಕ್ಷಕರನ್ನು 90ರ ಕಾಲಘಟ್ಟಕೆ ಕರೆದುಕೊಂಡು ಹೋಗುತ್ತದೆ. ವಿಶ್ವಜೀತ್ ರಾವ್ ಛಾಯಾಗ್ರಹಣ ಕಣ್ಣಿಗೆ ತಪ್ಪು ನೀಡುತ್ತದೆ. ಕಥೆಯ ನಿರೂಪನೆಯಲ್ಲಿ ನಿರ್ದೇಶಕರು ಇನ್ನಷ್ಟು ಕೆಲಸ ಮಾಡಿದ್ದರೆ, ಇದೊಂದು ಅಚ್ಚುಕಟ್ಟಾದ ಸಿನಿಮಾ ಆಗಬಹುದಿತ್ತು. ಒಟ್ಟಿನಲ್ಲಿ ಇದೊಂದು ಇಡಿ ಫ್ಯಾಮಿಲಿ ಕುಳಿತು ಎಂಜಾಯ್ ಮಾಡುವಂತಹ ಹೊಡಿ, ಬಡಿ, ಕಡಿ ಇಲ್ಲದ ನೀಟ್ ಸಿನಿಮಾ ಎನ್ನಬಹುದು.
ರೇಟಿಂಗ್: 3.5
ಚಿತ್ರ: ಎಲ್ರ ಕಾಲೆಳಿಯತ್ತೆ ಕಾಲ
ನಿರ್ದೇಶನ: ಸುಜಯ್ ಶಾಸ್ತ್ರಿ
ನಿರ್ಮಾಣ: ಉಷಾ ಗೋವಿಂದರಾಜ್
ತಾರಾಗಣ: ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಸುಜಯ್ ಶಾಸ್ತ್ರಿ, ರಾಕೇಶ್ ಪೂಜಾರಿ, ತಾರಾ ಅನುರಾಧ, ದತ್ತಣ್ಣ, ಮಂಜು ಪಾವಗಡ ಮುಂತಾದವರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 