ಮಕ್ಕಳ ತಜ್ಞ ವೈದ್ಯ ಡಾ.ರಾಜೇಂದ್ರ ಸಲಗರೆಗೆ ಜಾಗತಿಕ ಗೌರವ

ಮಕ್ಕಳ ತಜ್ಞ ವೈದ್ಯ ಡಾ.ರಾಜೇಂದ್ರ ಸಲಗರೆಗೆ ಜಾಗತಿಕ ಗೌರವ Global honor for pediatrician Dr. Rajendra Salagare

ಚಿಕ್ಕೋಡಿ 21 : ಪಟ್ಟಣದ ಸಲಗರೆ ಚಿಕ್ಕ ಮಕ್ಕಳ ಆಸ್ಪತ್ರೆ ಮುಖ್ಯ ತಜ್ಞವೈದ್ಯ ಡಾ.ರಾಜೇಂದ್ರ ಸಲಗರೆ ಅವರಿಗೆ ಲಂಡನ್ ಪ್ರತಿಷ್ಠಿತ ಬಕಿಂಗ್ಹ್ಯಾಮ್ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ’ಪೋಸ್ಟ್‌ ಗ್ರಾಜುವೇಟ್ ಡಿಪ್ಲೊಮಾ ಇನ್ ಪಿಡಿಯಾಟ್ರಿಕ್ಸ್‌ ಚೈಲ್ಡ್‌ ಹೆಲ್ತ್‌’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ.ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಡಾ. ರಾಜೇಂದ್ರ ಅವರು ಸಲ್ಲಿಸುತ್ತಿರುವ ಅನನ್ಯ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲೇ ಈ ಗೌರವ ಪಡೆದ ಪ್ರಥಮ ವೈದ್ಯರೆಂಬ ಹೆಗ್ಗಳಿಕೆಗೆ ಡಾ.ರಾಜೇಂದ್ರ ಪಾತ್ರರಾಗಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಡೇವಿಡ್ ಕೋಲ್ ಹಾಗೂ ಕುಲಸಚಿವ ಕ್ರಿಸ್ಟೋಫರ್ ಪೇನ್ ಅವರು ಡಾ.ರಾಜೇಂದ್ರ ಅವರ ವೈದ್ಯಕೀಯ ಸೇವೆ ಶ್ಲಾಘಿಸಿದರು. ಅದರಂತೆ ಚಿಕ್ಕೋಡಿಯ ಐಎಂಎ ಹಾಗೂ ಪಟ್ಟಣದ ಗಣ್ಯರು ಡಾ.ಸಲಗರೆ ಸೇವೆ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.