ಕಾರ್ಮಿಕ ಪ್ರಧಾನ ಕಚೇರಿಗೆ ಗವಿಶ್ರೀ ಭೇಟಿ: ಆಶೀರ್ವಚನಶ್ರಮಜೀವಿ ಕಾರ್ಮಿಕ ಸಂಘಟನೆ 5ನೇ ವಾರ್ಷಿಕೋತ್ಸವ
Gavishree visits labour headquarters: Aashirvachana Shramjeevi Karmic Sangathan's 5th anniversary
ಲೋಕದರ್ಶನ ವರದಿ
ಗಂಗಾವತಿ 28: ಇಲ್ಲಿನ ಬಸ್ ನಿಲ್ದಾಣ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಪ್ರಧಾನ ಕಚೇರಿಗೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಭೇಟಿ ನೀಡಿ ಕಾರ್ಮಿಕರಿಗೆ ಶುಭ ಹಾರೈಸಿದರು. ಐದು ವಸಂತಗಳನ್ನು ಪೂರೈಸಿರುವ ಕಾರ್ಮಿಕ ಸಂಘಟನೆಯು ಅನೇಕ ಕಾರ್ಮಿಕರಿಗೆ ನೆರವಾಗಿದ್ದಲ್ಲದೆ, ಕಾರ್ಮಿಕರಿಗೆ ನ್ಯಾಯಾ ಕೊಡಿಸುವಲ್ಲಿ ಸಫಲವಾಗಿದೆ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಶಿವಕುಮಾರ್ ಗೌಡ ದಕ್ಷ ಸಾರಥ್ಯದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಇವರ ಸಹಕಾರದೊಂದಿಗೆ ಕಟ್ಟಡ ಕಾರ್ಮಿಕರು ತಮ್ಮ ನ್ಯಾಯ ಬದ್ದ ಹಕ್ಕುಗಳಿಗಾಗಿ ಹೋರಾಡುವ ಶಕ್ತಿ ಕಂಡುಕೊಂಡಿದ್ದು ಶ್ರೀಗಳು ಆಗಮಿಸಿ ಹಾರೈಸಿರುವುದು ಕಾರ್ಮಿಕರಲ್ಲಿ ಆತ್ಮವಿಶ್ವಾಸ ತುಂಬಿಬಂದಂತಾಗಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪ್ರಕಾಶ್ ಅಕ್ಕಿ, ಸೇರಿದಂತೆ ಗೌರವ ಸಲಹೆಗಾರರಾದ ಸೋಮಣ್ಣ ಆರ್ಯವೈಶ್ಯ, ಪದಾಧಿಕಾರಿಗಳಾದ ಹನುಮಂತಪ್ಪ ಢಣಾಪುರ, ಜೈಭೀಮ್ ಮಲ್ಲಿಕಾರ್ಜುನ, ಅಂಜಿನಿ, ಜಗದೀಶ್ ಬನ್ನಿಗಿಡ ಕ್ಯಾಂಪ್, ಯಲ್ಲಪ್ಪ ಮೇಸ್ತ್ರಿ, ಹನುಮಂತಪ್ಪ ಮೇಸ್ತ್ರಿ, ಹುಲುಗಪ್ಪ ಬಸವಪಟ್ಟಣ, ರಾಮು ಮೇಸ್ತ್ರಿ, ರಾಜಶೇಖರ್, ಸೋಮಪ್ಪ ಜಂಬೂಗಿ ಇತರರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 