ದೇಶದ ರಫ್ತು ವಲಯದಲ್ಲಿ ಕರ್ನಾಟಕದಿಂದ ಮೂರನೇ ಒಂದರಷ್ಟು ಕೊಡುಗೆ - ಗೌರವ್ ಗುಪ್ತಾ

ಬೆಂಗಳೂರು, ನ 15  :      ಇಡೀ ದೇಶದ ರಫ್ತು ಚಟುವಟಿಕೆಯಲ್ಲಿ ಕನರ್ಾಟಕ ಸರಿ ಸುಮಾರು ಮೂರನೇ ಒಂದರಷ್ಟು ಕೊಡುಗೆ ನೀಡುತ್ತಿದ್ದು, ಬೆಂಗಳೂರು ನಗರ ಎಲ್ಲಾ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.  ನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಎರಡು ದಿನಗಳ 35ನೇ ಇನ್ವೆಸ್ಟ್ ಇಂಟರ್ ನ್ಯಾಷನಲ್ ಮತ್ತು 8ನೇ ಏಷ್ಯನ್ ವ್ಯಾಲ್ಯೂ ಇಂಜಿನಿಯರಿಂಗ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಿಂದ ಒಟ್ಟಾರೆ 340 ಶತಕೋಟಿ ಡಾಲರ್ ಮೊತ್ತದಷ್ಟು ಉತ್ಪನ್ನಗಳನ್ನು ರಪ್ತು ಮಾಡುತ್ತಿದ್ದು, ಕರ್ನಾಟಕದಿಂದಲೇ ನೂರು ಶತಕೋಟಿ ಡಾಲರ್ ಗೂ ಹೆಚ್ಚು ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವುದು ವಿಶೇಷ.  ಇದರಲ್ಲಿ ಮಾಹಿತಿ ತಂತ್ರಜ್ಞಾನದ ಕೊಡುಗೆಯೂ ಸಹ ಗಣನೀಯವಾಗಿದೆ. ಜಗತ್ತಿನ  ಇತರೆ ಮಧ್ಯಮ ಪ್ರಮಾಣದ ರಾಷ್ಟ್ರಗಳಿಗೆ ಸರಿ ಸಮಾನವಾಗಿ ಕರ್ನಾಟಕ ರಫ್ತು ಚಟುವಟಿಕೆ ನಡೆಸುತ್ತಿದೆ ಎಂದರು.  ರಾಜ್ಯದಲ್ಲಿ ಮೈಸೂರು, ಹುಬ್ಬಳ್ಳಿಯಂತಹ ಎರಡನೇ ಹಂತದ ನಗರಗಳೂ ಸಹ ಉತ್ತಮ ಬೆಳವಣಿಗೆ ಸಾಧಿಸುತ್ತಿವೆ. ಇಂತಹ ನಗರಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಅಲ್ಲಿಯೂ ಸಹ ಹೂಡಿಕೆಗೆ ಪ್ರಶಸ್ತವಾದ ವಾತಾವರಣವಿದೆ. ಇಡೀ ದೇಶದಲ್ಲಿ ಕರ್ನಾಟಕ  ನಾವೀನ್ಯತೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.  ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ಪ್ರಧಾನ ಆದ್ಯತೆ ನೀಡುತ್ತಿದೆ. ಸುಗಮ ವ್ಯವಹಾರ ವಲಯದಲ್ಲಿ ಮಂಚೂಣಿಯಲ್ಲಿದ್ದು, ಸುಗಮ ವಹಿವಾಟು ಕ್ಷೇತ್ರದಲ್ಲಿ ದೇಶದ ಪ್ರಮುಖ ನಾಲ್ಕು ನಗರಗಳ ಪೈಕಿ ಬೆಂಗಳೂರು ಮಂಚೂಣಿಯಲ್ಲಿದೆ ಎಂದು ವಿಶ್ವ ಬ್ಯಾಂಕ್ ಸಹ ಮಾನ್ಯತೆ ನೀಡಿದೆ. ಕಾಲಮಿತಿಯೊಳಗೆ ಸರ್ಕಾರಿ ಸೇವೆಗಳನ್ನು ನೀಡುತ್ತಿದ್ದು, ಇದಕ್ಕೆ ಸಕಾಲ ಯೋಜನೆ ಜ್ವಲಂತ ನಿದರ್ಶನವಾಗಿದೆ ಎಂದರು. ಇಂಜಿನಿಯರಿಂಗ್ ಕ್ಷೇತ್ರದಲ್ಲೂ ಸಹ ಉತ್ತಮವಾಗಿದ್ದು, ಕರ್ನಾಟಕ ವಿಶ್ವ ಮಟ್ಟದ ಇಂಜಿನಿಯರ್ ಗಳನ್ನು ನೀಡಿದೆ. ಬೆಂಗಳೂರು ವ್ಯಾಲ್ಯೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ಕಾಣುತ್ತಿದ್ದು, ಕಳೆದೊಂದು ಶತಮಾನದಿಂದ ಹಲವಾರು ಬೆಳವಣಿಗೆಗೆ ಈ ನಗರ ಸಾಕ್ಷಿಯಾಗಿದೆ. ದೇಶದಲ್ಲಿ ಮೊದಲು ವಿದ್ಯುತ್  ಕಂಡ ನಗರ, ಭಾರತೀಯ ವಿಜ್ಞಾನ ಮಂದಿರ, ವಿಮಾನ ಕೈಗಾರಿಕಾ ಕಾರ್ಖಾನೆ, ನ್ಯೋನೋ, ಮಾಹಿತಿ, ಜೈವಿಕ ತಂತ್ರಜ್ಞಾನ, ರೊಬೆಟಿಕ್ ತಂತ್ರಜ್ಞಾನ, ರೊಬೊಟಿಕ್ ಶಸ್ತ್ರಚಿಕಿತ್ಸೆ, ಉತ್ಪಾದನಾ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿ, ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಬೆಳವಣಿಗೆ ಮತ್ತು  ಸುಧಾರಣೆ ಕಾಣುತ್ತಿದೆ ಎಂದರು.  ಭಾರತಕ್ಕೆ ಭೇಟಿ ಕೊಡುವ ಪ್ರತಿಯೊಂದು ವಿದೇಶಿ ನಿಯೋಗಗಳು ಬೆಂಗಳೂರಿಗೆ ಬಂದೇ ಬರುತ್ತವೆ. ನವೋದ್ಯಮಗಳ  ರಾಜಧಾನಿಯಾಗಿಯೂ ಬೆಂಗಳೂರು ಹೊರ ಹೊಮ್ಮಿದೆ. ವ್ಯಾಲ್ಯೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಈ ನಗರ ಕೇಂದ್ರ ಸ್ಥಾನದಲ್ಲಿದ್ದು, ಈ ಎಲ್ಲಾ ವೈಶಿಷ್ಟ್ಯಗಳಿಂದಾಗಿ ಕರ್ನಾಟಕಕ್ಕೆ ವ್ಯಾಪಕ ಪ್ರಮಾಣದಲ್ಲಿ ಹೂಡಿಕೆಯೂ  ಹರಿದು ಬರುತ್ತಿದೆ ಎಂದು ಗೌರವ್ ಗುಪ್ತ ಹೇಳಿದರು.  ವ್ಯಾಲ್ಯೂ ಇಂಜಿನಿಯರಿಂಗ್ ಸಂಸ್ಥೆಯ ದಕ್ಷಿಣ ವಲಯದ ಅಧ್ಯಕ್ಷ ಅಮಿತ್ ಕುಮಾರ್ ಮಾತನಾಡಿ, ಮುಂಬೈ ನಂತರ ಬೆಂಗಳೂರಿನಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಅಮೆರಿಕ, ನೆದರ್ ಲ್ಯಾಂಡ್, ಕೆನಡಾ, ದೇಶಾದ್ಯಂತ ಹಲವಾರು ಮಂದಿ ಪಾಲ್ಗೊಂಡಿದ್ದು, 72 ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಟಾಟಾ, ಇಟಾಚಿ, ಜಿಇ, ಭಾಷ್, ಎಚ್.ಸಿ.ಎಲ್ ನಂತಹ ಸಂಸ್ಥೆಗಳು ಪಾಲ್ಗೊಂಡಿದ್ದು, ಶನಿವಾರ ತಜ್ಞರು ತಾಂತ್ರಿಕ ಪೇಪರ್ ಗಳನ್ನು ಮಂಡಿಸಲಿದ್ದು. ಇದರಿಂದ ಕರ್ನಾಟಕಕ್ಕೆ ಹಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.   ದಕ್ಷಿಣ ವಲಯದ ವ್ಯಾಲ್ಯೂ ಇಂಜಿನಿಯರಿಂಗ್ ವಲಯದ ಉಪಾಧ್ಯಕ್ಷ ರಾಘವೇಂದ್ರ ಮಾತನಾಡಿ, ನವೀನ್ ಕುಮಾರ್ ಈ ಸಂಸ್ಥೆಗೆ 42 ವರ್ಷಗಳ ಇತಿಹಾಸವಿದ್ದು, ಇದು ಲಾಭದಾಯಕ ಸಂಸ್ಥೆಯಲ್ಲ. ತಾಂತ್ರಿಕ ಕ್ಷೇತ್ರದಲ್ಲಿ ಮೌಲ್ಯಕ್ಕೆ ಹೆಚ್ಚು ಆದ್ಯತೆ ನೀಡಿದೆ.  ವ್ಯಾಲ್ಯೂ ಇಂಜಿನಿಯರಿಂಗ್ ವಲಯದಲ್ಲಿ ಗಡಿಗಳನ್ನು ಮೀರಿ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುವುದು ಈ ಬಾರಿಯ ಘೋಷವಾಕ್ಯವಾಗಿದೆ ಎಂದು ಹೇಳಿದರು.  ವ್ಯಾಲ್ಯೂ ಇಂಜಿನಿಯರಿಂಗ್ ನ ದಕ್ಷಿಣ ವಲಯದ ಅಧ್ಯಕ್ಷ ಅಮಿತ್ ಕುಮಾರ್, ಕ್ರೀಯಾಶೀಲತೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಈ ಸಮ್ಮೇಳನ ನಡೆಸಲಾಗುತ್ತಿದ್ದು, ಜಾಗತಿಕವಾಗಿ ಬಳಕೆಯಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ ಎಂದರು.