ಶಾಂತಿ, ಸೌಹಾರ್ದತೆಯ ಸಂಕೇತ ಗಣಪತಿ ಹಬ್ಬ : ಹೊಸಕೋಟೆ ಜಗದೀಶ
Ganesha Festival: A Symbol of Peace and Harmony – Hoskote Jagadeesh
ಲೋಕದರ್ಶನ ವರದಿ
ಕಂಪ್ಲಿ 19 : ಸ್ಥಳೀಯ 4ನೇ ವಾರ್ಡಿನ ಅಂಬೇಡ್ಕರ್ ನಗರದ ಮಾದಿಗ ಕಾಲೋನಿಯ ಮುಖ್ಯರಸ್ತೆ ಬದಿಯಲ್ಲಿ ಸೌದತ್ತಿ ಯಲ್ಲಮ್ಮ ರೂಪಿತ ಗಣಪತಿ ಪ್ರತಿಷ್ಠಾಪನೆಯ ಹಿನ್ನಲೆ ಶನಿವಾರದಂದು ಅನ್ನಸಂತಾರೆ್ಣ ವ್ಯವಸ್ಥೆ ಕಲ್ಪಿಸಲಾಗಿತ್ತು. ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಅವರು ಜನರಿಗೆ ಊಟ ಬಡಿಸುವ ಮೂಲಕ ಅನ್ನಸಂತಾರೆ್ಣಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗಣಪತಿ ಪ್ರತಿಷ್ಠಾಪನೆಯ ಜೊತೆಗೆ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶಾಂತಿ, ಸೌಹಾರ್ದತೆಯಿಂದ ಯುವಕರು ಗಣಪತಿ ಹಬ್ಬವನ್ನ ಆಚರಿಸುತ್ತಿದ್ದಾರೆ. ಗಣಪನ ಶಕ್ತಿ ದೊಡ್ಡದು, ಶ್ರದ್ಧಾಭಕ್ತಿಯಿಂದ ಪೂಜಿಸಿದರೆ, ಇಷ್ಟಾರ್ಥಗಳು ಲಭಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ತಿಪ್ಪೇಸ್ವಾಮಿ, ವಿಜಯಕುಮಾರ, ಮಂಜುನಾಥ, ಸುದೀಪ, ರಾಜ, ಸುಂದರ, ದುರುಗೇಶ, ಆನಂದ, ಹುಲಿಯಪ್ಪ, ಯಂಕಪ್ಪ, ರಾಘವೇಂದ್ರ, ಪ್ರಕಾಶ, ಮಂಜು, ರಾಜ, ಕುಬೇರ, ಶ್ರೀನಿವಾಸ, ಸುರೇಶ, ವಿದ್ಯಾ, ಪವನ್, ನವೀನ್, ಮಂಜು ಐಟು, ಸಂತೋಷ, ಸುಭಾಶ, ಗೀರೀಶ, ಗ್ಯಾಪ ಸೇರಿದಂತೆ ಇತರರು ಇದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 