ಗಣೇಶ ಹಬ್ಬ: ಶಿಂಧೆ ಪರಿವಾರದ ಮನೆಯಲ್ಲಿ ಪ್ರತಿಷ್ಠಾಪಿತ ಮಹಾಲಕ್ಷ್ಮಿದೇವಿ ಜಾತ್ರೆ
Ganesh festival: Mahalakshmi Devi fair installed at Shinde family's house
ರಾಯಬಾಗ: ಗಣೇಶ ಹಬ್ಬ ಬಂದರೆ ಸಾಕು, ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು, ಮನೆಯಲ್ಲಿ ಪ್ರತಿಷ್ಠಾನ ಮಾಡುವ ಗಣೇಶ ಭಕ್ತರು ವೈವಿಧ್ಯಮಯವಾಗಿ ಮಂಟಪ ರಚನೆಯೊಂದಿಗೆ ವಿವಿಧ ತರಹದ ಗಣೇಶ ಮೂರ್ತಿ ತಂದು ಶೃಂಗಾರ ಮಾಡುತ್ತಾರೆ.
ರಾಯಬಾಗ ಪಟ್ಟಣದ ಮುಲ್ಲಾ ಗಲ್ಲಿಯಲ್ಲಿರುವ ಶಿಂಧೆ ಪರಿವಾರದವರು ಗಣೇಶ ಹಬ್ಬದಲ್ಲಿ ತಮ್ಮ ಮನೆಯಲ್ಲಿ ಕಳೆದ ಹತ್ತು ವರ್ಷಗಳಿಂದ ವೈವಿಧ್ಯಮಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿಶೇಷ ಕಲೆ ರಚಿಸುತ್ತಾ ಕಲಾಸಕ್ತರ ಗಮನ ಸೆಳೆಯುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾದ ರಾವಸಾಹೇಬ ಶಿಂಧೆ ಮತ್ತು ಬಳಗದವರು ಕೂಡಿಕೊಂಡು ಅನೇಕ ವರ್ಷಗಳಿಂದ ಜನಪದ ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.ಶಿಂಧೆ ಪರಿವಾರದವರು ಈ ಬಾರಿ ಶ್ರೀ ಮಹಾಲಕ್ಷ್ಮಿ ಮಂದಿರ ಹಾಗೂ ಐದು ವರ್ಷಕ್ಕೊಮ್ಮೆ ನಡೆಯುವ ಮಹಾಲಕ್ಷ್ಮಿದೇವಿ ಜಾತ್ರೆಯ ಸನ್ನಿವೇಶವನ್ನು ಸೃಜನಾತ್ಮಕವಾಗಿ ಜಾನಪದ ಶೈಲಿಯಲ್ಲಿ ಪ್ರತಿಷ್ಠಾಪಿಸಿದ್ದು, ಮಹಾಲಕ್ಷ್ಮಿ ಜಾತ್ರೆಯು ಮರು ಸೃಷ್ಟಿಗೊಂಡಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. ಇದನ್ನು ನೋಡಲು ಪಟ್ಟಣದ ಜನರು ಸರತಿ ಸಾಲಿನಲ್ಲಿ ನಿಂತು ವೀಕ್ಷಣೆ ಮಾಡಿ, ಗಣೇಶನ ದರ್ಶನ ಪಡೆಯುತ್ತಿದ್ದಾರೆ. "ನಮ್ಮ ಕುಟುಂಬದವರ ಸಂತೋಷದ ಸಲುವಾಗಿ ರಚಿಸುತ್ತಾ ಬಂದಿರುವ ಜಾನಪದ ಕಲೆಯನ್ನು, ಇಂದು ಸಾರ್ವಜನಿಕರು ಸಾಲಾಗಿ ನಿಂತು ನಮ್ಮ ಕಲೆಯನ್ನು ನೋಡಿ ಸಂತೋಷ ಪಡುತ್ತಿದ್ದಾರೆ. ಇದು ನಮಗೆ ಸಂತೋಷ ತಂದಿದೆ." - ಮಹಾದೇವ ಶಿಂಧೆ. "ರಾಯಬಾಗ ಪಟ್ಟಣದ ಜನರು ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಶಿಂಧೆ ಪರಿವಾರದ ಮನೆಗೆ ಹೋಗಿ, ನೋಡಿ, ಲಗಮವಳನ್ನು (ಲಕ್ಷ್ಮೀದೇವಿ) ಆಡಿಸುವುದು, ಜಾತ್ರೆ, ಜೋಕಾಲಿ, ಭಂಡಾರ್ ಜಾತ್ರೆ ನೋಡಿ, ಸಂತೋಷವನ್ನು ಅನುಭವಿಸಿರಿ..." ಡಾ.ಪಿ.ಬಿ.ಗವಾನಿ, ಚಿತ್ರ ಕಲಾವಿದರು, ರಾಯಬಾಗ.
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ 